ಪಟಿಯಾಲ ಹೌಸ್ ಹಿಂಸಾಚಾರ: ದಾಳಿಯ ರೂವಾರಿ ವಕೀಲ ವಿಕ್ರಂ ಸಿಂಗ್ ಪೊಲೀಸರ ಮುಂದೆ ಹಾಜರು

ಹೊಸದಿಲ್ಲಿ, ಫೆ.24: ಕಳೆದ ವಾರ ದಿಲ್ಲಿಯ ನ್ಯಾಯಾಲಯವೊಂದರಲ್ಲಿ ನಡೆದಿದ್ದ ಎರಡು ಹಿಂಸಾಚಾರ ಘಟನೆಗಳಲ್ಲಿ ಭಾಗವಹಿಸಿದ್ದ ದಾಳಿಯ ರೂವಾರಿ ವಕೀಲ ವಿಕ್ರಂಸಿಂಗ್ ಚೌಹಾಣ್, ಸಮನ್ಸ್ ಕಳುಹಿಸಿದ 6 ದಿನಗಳ ಬಳಿಕ ಪೊಲೀಸರ ಮುಂದೆ ಹಾಜರಾಗಿದ್ದಾರೆ.
ದೇಶದ್ರೋಹದ ಆರೋಪದಲ್ಲಿ ಬಂಧಿಸಲ್ಟಟ್ಟಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್ ವಿಚಾರಣೆಯ ವೇಳೆ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ನಡೆದಿದ್ದ ಹಿಂಸಾಚಾರದ ಕುರಿತು ವಿಚಾರಣೆ ನಡೆಸುವುದಕ್ಕಾಗಿ ಕಳೆದ ಗುರುವಾರ ಅವರನ್ನು ಪೊಲೀಸರು ಕರೆದಿದ್ದರು.
Next Story





