ಬಂಧಮುಕ್ತರಾದ ನಟ ಸಂಜಯ್ ದತ್ತ್

ಮುಂಬೈ : ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಐದು ವರ್ಷಗಳ ಶಿಕ್ಷೆ ಪೂರ್ಣಗೊಳಿಸಿದ ಬಾಲಿವುಡ್ ನಟ ಸಂಜಯ್ ದತ್ತ್ ಇಂದು ಬೆಳಿಗ್ಗೆ ಬಂಧಮುಕ್ತರಾದರು.ಪುಣೆಯ ಯೆರವಾಡ ಜೈಲಿನಿಂದ ಬಿಡುಗಡೆಯಾಗಿ ಅವರು ಹೊರ ಬಂದಾಗ ಅವರಕೈಲ್ಲಿ ತಮ್ಮ ಸಾಮಾನುಗಳ ಒಂದು ಚೀಲ ಹಾಗೂ ಒಂದು ಫೈಲ್ ಕಂಡಿತು.
ಅವರ ಪತ್ನಿ ಮಾನ್ಯತಾ, ಅವಳಿ ಮಕ್ಕಳಾದ ಇಖ್ರಾ ಹಾಗೂ ಶಹ್ರಾನ್ದತ್ತ್ ಅವರನ್ನು ಎದುರ್ಗೊಂಡರು. ಬಾಲಿವುಡ್ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸೇರಿದಂತೆ ಕೆಲವು ಆತ್ಮೀಯ ಗೆಳೆಯರೂ ದತ್ತ್ ಅವರನ್ನು ಎದುರುಗೊಳ್ಳಲು ಜೈಲಿನ ಹೊರಗೆ ನಿಂತಿದ್ದರು.
ಜೈಲಿನಿಂದ ನೇರವಾಗಿ ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿದ ದತ್ತ್ ಅಲ್ಲಿಂದ ತಮ್ಮ ಕುಟುಂಬ ಸದಸ್ಯರೊಂದಿಗೆ ಮುಂಬೈಗೆ ತೆರಳಲು ಚಾರ್ಟರ್ಡ್ ವಿಮಾನವನ್ನೇರಿದರು.
ಪುಣೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದತ್ತ್ ‘‘ಸ್ವಾತಂತ್ರ್ಯದತ್ತ ನಡೆಯಲು ಅಷ್ಟೊಂದು ಸುಲಭದ ಹಾದಿಯಿಲ್ಲ ನನ್ನ ಸ್ನೇಹಿತರೇ,’’ ಎಂದು ಹೇಳಿದರು.
ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿತರಾಗಿದ್ದ 56 ವರ್ಷದ ನಟ ಕಳೆದ ಮೂರು ವರ್ಷಗಳಿಂದ ಪುಣೆಯ ಜೈಲಿನಲ್ಲಿದ್ದರು.ಅವರ ಜೈಲು ಅವಧಿಯಲ್ಲಿ ದತ್ತ್ ಸಾಕಷ್ಟು ವಿವಾದಗಳನ್ನೆದುರಿಸಿದ್ದು ಹಲವು ಬಾರಿ ಜೈಲು ಅಧಿಕಾರಿಗಳು ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಿದ್ದರೆಂಬ ಆರೋಪ ಕೇಳಿ ಬಂದಿತ್ತು. ತಮ್ಮ ಶಿಕ್ಷೆಯ ಅವಧಿಯಲ್ಲಿ ಅವರಿಗೆ 2013ರಲ್ಲಿ 90 ದಿನಗಳ ಪೆರೋಲ್ಹಾಗೂ ನಂತರಮತ್ತೊಮ್ಮೆ 30 ದಿನಗಳ ಪೆರೋಲ್ ನೀಡಲಾಗಿತ್ತು.
ನಟನ ಬಿಡುಗಡೆ ಕಳೆದ 23 ವರ್ಷಗಳಿಂದ, ಕೋರ್ಟು, ಪೊಲೀಸ್ ಸ್ಟೇಷನ್ ನಡುವೆ ಅಲೆದಾಡುತ್ತಿದ್ದ ಅವರ ಕುಟುಂಬಕ್ಕೆ ನೆಮ್ಮದಿ ತಂದಿದೆ. ದತ್ತ್ ಅವರನ್ನು ಮೊದಲು ಎಪ್ರಿಲ್ 191993ರಲ್ಲಿ ಎಕೆ-56 ರೈಫಲ್ ಹೊಂದಿದಕ್ಕಾಗಿ ಬಂಧಿಸಲಾಗಿತ್ತು ಮೂಲಗಳ ಪ್ರಕಾರ ಅವರ ಸಹೋದರಿ ಪ್ರಿಯಾ ದತ್ತ್ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರೂ ಪುಣೆಯಲ್ಲಿ ಕಳೆದ ಹಲವು ದಿನಗಳಿಂದ ಠಿಕಾಣಿ ಹೂಡಿದ್ದರು.





