Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜೈಲಿನೊಂದಿಗೆ ಸಂಜಯ್ ಸರಸ -1993-2016-...

ಜೈಲಿನೊಂದಿಗೆ ಸಂಜಯ್ ಸರಸ -1993-2016- ಕಂಪ್ಲೀಟ್ ಟೈಮ್‌ಲೈನ್

ವಾರ್ತಾಭಾರತಿವಾರ್ತಾಭಾರತಿ25 Feb 2016 11:10 AM IST
share
ಜೈಲಿನೊಂದಿಗೆ ಸಂಜಯ್ ಸರಸ -1993-2016- ಕಂಪ್ಲೀಟ್ ಟೈಮ್‌ಲೈನ್

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ತ್ ಇಂದು ಬೆಳಿಗ್ಗೆ ಯರವಾಡ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಅವರ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಅಭಿಮಾನಿ ವರ್ಗದ ಮನದಲ್ಲಿ ಸಂತಸ ಮನೆ ಮಾಡಿದೆ. ಎಕೆ-56 ರೈಫಲ್ ಹೊಂದಿದ ಪ್ರಕರಣದಲ್ಲಿ ಹಾಗೂ 1993 ಮುಂಬೈ ಸರಣಿ ಸ್ಫೋಟ ಘಟನೆಯಲ್ಲಿ ದೋಷಿಯೆಂದು ಪರಿಗಣಿತರಾದ ದತ್ತ್ ಅವರು 1993ರಲ್ಲಿ ಮೊದಲು ಬಂಧನವಾದಂದಿನಿಂದ ಇಂದು, ಫೆಬ್ರವರಿ 25,2016ರ ನಡುವಿನ ಅವಧಿಯ ಬೆಳವಣಿಗೆಗಳ ಬಗ್ಗೆ ಇಲ್ಲಿದೆ ಒಂದು ಕಿರು ನೋಟ :

ದತ್ತ್ ಅವರಿಗೆ5 ವರ್ಷಗಳ ಅಥವಾ 60 ತಿಂಗಳುಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಅವರು 1993ರಿಂದ 2007ರ ತನಕ 551 ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ.
ಮೇ 16,2013ರಿಂದ ಅವರು 894 ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ.
ಅವರು 120 ದಿನಗಳ ಕಾಲ ಪೆರೋಲ್‌ನಲ್ಲಿ ಬಿಡುಗಡೆ ಹೊಂದಿದ್ದರು
ಅವರು 44 ದಿನಗಳ ಹೆಚ್ಚುವರಿರಜೆ ಪಡೆದಿದ್ದರು.

* ಎಪ್ರಿಲ್ 19, 1993 - ಸಂಜಯ್ ದತ್ತ್ ಅವರನ್ನು ಟಾಡಾ ಹಾಗೂ ಶಸ್ತ್ರಾಸ್ತ್ರ ಕಾಯಿದೆಯನ್ವಯ ಹಾಗೂ 1993ರ ಮುಂಬೈ ಸರಣಿ ಸ್ಫೋಟದಲ್ಲಿ ಅವರ ಪಾತ್ರಕ್ಕಾಗಿ ಬಂಧನ

* ಮೇ 5, 1993 - ಅವರಿಗೆ ಜಾಮೀನಿನ ಮೇಲೆ ಬಿಡುಗಡೆ.

* ಜುಲೈ 4, 1994 - ಜಾಮೀನು ರದ್ದತಿ ಹಾಗೂ ಮರು ಬಂಧನ.

* ನವೆಂಬರ್ 4, 1993 - ಸರಣಿ ಸ್ಫೋಟವಾಗಿ ಸುಮಾರುಎಂಟು ತಿಂಗಳುಗಳ ನಂತರಸಂಜಯ್ ದತ್ತ್ ಸೇರಿದಂತೆ 189 ಮಂದಿ ಆರೋಪಿಗಳ ವಿರುದ್ಧ 10,000ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ.

*ಅಕ್ಟೋಬರ್ 16, 1995 - ಸುಪ್ರೀಂ ಕೋರ್ಟಿನಿಂದ ದತ್ತ್‌ಗೆ ಜಾಮೀನು.

* ನವೆಂಬರ್ 2006- ಶಸ್ತ್ರಾಸ್ತ್ರ ಕಾಯಿದೆಯನ್ವಯ ಸಂಜಯ್ ದತ್ತ್ ಅವರನ್ನು ದೋಷಿಯೆಂದು ಟಾಡಾ ನ್ಯಾಯಾಲಯ ಪರಿಗಣಿಸಿತು, ಆದರೆ ಟಾಡಾದನ್ವಯ ನಿರ್ದೋಷಿಯೆಂದು ಘೋಷಿಸಿತು.

*ಜುಲೈ 2007 -ದತ್ತ್ ಅವರನ್ನು ದೋಷಿಯೆಂದು ಘೋಷಿಸಿ ಅವರಿಗೆ ಆರು ವರ್ಷದ ಜೈಲು ಶಿಕ್ಷೆ ವಿಧಿಸಲಾಯಿತು.

* ಆಗಸ್ಟ್ 2, 2007 : ದತ್ತ್ ಅವರನ್ನು ಮರು ಬಂಧಿಸಿಪುಣೆಯ ಯರವಾಡ ಜೈಲಿಗೆ ಕರೆದುಕೊಂಡು ಹೋಗಲಾಯಿತು.

* ಆಗಸ್ಟ್ 20,2007 : ಸುಪ್ರೀಂ ಕೋರ್ಟಿನಿಂದ ದತ್ತ್‌ಗೆ ಜಾಮೀನು.

* ಮಾರ್ಚ್ 21, 2013-ಸಂಜಯ್ ದತ್ತ್‌ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್ ನಾಲ್ಕು ವಾರಗಳೊಳಗಾಗಿ ಶರಣಾಗುವಂತೆ ಆದೇಶಿಸಿತು.

* ಎಪ್ರಿಲ್ 15,2013- ದತ್ತ್ ಅವರು ವಿಶೇಷ ಕೋರ್ಟಿನ ಬದಲು ನೇರವಾಗಿ ಜೈಲಿನಲ್ಲಿಯೇ ಶರಣಾಗಲು ಅನುಮತಿಸಬೇಕೆಂದು ದತ್ತ್ ಅವರ ವಕೀಲರಿಂದ ಕೋರ್ಟಿಗೆ ಮೌಖಿಕ ಮನವಿ.

* ಎಪ್ರಿಲ್ 17,2013 -ದತ್ತ್ ಅವರಿಗೆ ವಿಶೇಷ ಕೋರ್ಟಿನ ಮುಂದೆ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್.

* ಎಪ್ರಿಲ್ 20,2013 -ಸುಪ್ರೀಂ ಕೋರ್ಟಿನ ಮಾರ್ಚ್ 21ರ ಆದೇಶವನ್ನು ಪುನರ್‌ಪರಿಶೀಲಿಸಲುನಟನಿಂದ ಅಪೀಲು.

* ಮೇ 10, 2013 - ದತ್ತ್ ಪುನರ್‌ಪರಿಶೀಲನಾ ಮನವಿಯನ್ನು ತಿರಸ್ಕರಿಸಿದ ಕೋರ್ಟ್.

* ಮೇ 16, 2013 -ದತ್ತ್ ಶರಣಾಗತಿ ಹಾಗೂ ಪುಣೆಯ ಯರವಾಡ ಜೈಲಿಗೆ ಸೇರ್ಪಡೆ.

* ಅಕ್ಟೋಬರ್ 2, 2013 -ದತ್ತ್‌ಗೆ ಎರಡು ವಾರಗಳ ಪೆರೋಲ್; ಅದನ್ನು ಮತ್ತೆ ಅಕ್ಟೋಬರ್ 29ರವರೆಗೆ ಎರಡು ವಾರಗಳಿಗೆ ವಿಸ್ತರಣೆ.

* ಅಕ್ಟೋಬರ್ 20,2013 - ದತ್ತ್ ಮತ್ತೆ ಜೈಲಿಗೆ ವಾಪಸ್.

*ಡಿಸೆಂಬರ್ 6, 2013 - ದತ್ತ್‌ಗೆ 30 ದಿನಗಳ ಪೆರೋಲ್

* ಜನವರಿ, 2014 - 30 ದಿನಗಳ ಮೊದಲ ಪೆರೋಲ್ ವಿಸ್ತರಣೆ.

* ಫೆಬ್ರವರಿ 18, 2014 - 30 ದಿನಗಳ ಎರಡನೇ ವಿಸ್ತರಣೆ ಮಂಜೂರು.

* ಡಿಸೆಂಬರ್ 23, 2014 : ವಿಶೇಷ ರಜೆ (ಫರ್ಲೊ) ಮಂಜೂರು

* ಜನವರಿ 10, 2015 : ರಜೆ ವಿಸ್ತರಣೆಗೆ ಕೋರ್ಟ್ ನಿರಾಕರಿಸಿದ ನಂತರ ಮತ್ತೆ ಜೈಲಿಗೆ ವಾಪಸ್.

* ಆಗಸ್ಟ್ 26, 2015 - ಪೆರೋಲ್ ಮೇಲೆ ಬಿಡುಗಡೆ.

* ಫೆಬ್ರವರಿ 25, 2016 : ಶಿಕ್ಷೆ ಪೂರ್ಣಗೊಳಿಸಿಜೈಲಿನಿಂದ ಬಿಡುಗಡೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X