ಡೆಬಿಟ್ ಕಾರ್ಡ್ ಪಾವತಿ ಮೇಲಿನ ಸರ್ಚಾರ್ಜ್ ರದ್ದು

ನವದೆಹಲಿ : ನಗದುರಹಿತ ವ್ಯವಹಾರಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟ ಬುಧವಾರ ಡೆಬಿಟ್ ಕಾರ್ಡ್ ಹಾಗೂ ಡಿಜಿಟಲ್ ಹಣ ಪಾವತಿ ಮೇಲಿನ ಸರ್ಚಾರ್ಜ್ ಹಾಗೂ ಸೇವಾ ಶುಲ್ಕವನ್ನುಹಿಂಪಡೆದುಕೊಳ್ಳಲು ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು ಒಂದು ನಿಗದಿತ ಮೊತ್ತದನಂತರದ ಪಾವತಿಗಳನ್ನು ಡೆಬಿಟ್ ಕಾರ್ಡ್ ಅಥವಾ ಡಿಜಿಟಲ್ ಪೇಮೆಂಟ್ ಮುಖಾಂತರವೇ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕೂಡ ಅನುಮೋದನೆ ನೀಡಿದೆ.
ಇಂತಹ ಒಂದು ಕ್ರಮ ತೆರಿಗೆ ತಪ್ಪಿಸುವುದನ್ನು ನಿಯಂತ್ರಿಸುವುದಲ್ಲದೆ, ಸರಕಾರಿ ಪಾವತಿ ಹಾಗೂ ಹಣ ಸಂಗ್ರಹವನ್ನು ಕೂಡ ನಗದು ರಹಿತಗೊಳಿಸುವಲ್ಲಿ ಸಹಕರಿಸುವುದು,’’ಎಂದು ಅಧಿಕೃತ ಪ್ರಕಟನೆಯೊಂದು ತಿಳಿಸಿದೆ.
Next Story





