Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಂಸತ್ ದಾಳಿಯಲ್ಲಿ ಅಫ್ಜಲ್ ಶಾಮೀಲಾತಿ...

ಸಂಸತ್ ದಾಳಿಯಲ್ಲಿ ಅಫ್ಜಲ್ ಶಾಮೀಲಾತಿ ಬಗ್ಗೆ‘ಗಂಭೀರ ಶಂಕೆ’ : ಚಿದಂಬರಂ

ವಾರ್ತಾಭಾರತಿವಾರ್ತಾಭಾರತಿ25 Feb 2016 1:23 PM IST
share
ಸಂಸತ್ ದಾಳಿಯಲ್ಲಿ ಅಫ್ಜಲ್ ಶಾಮೀಲಾತಿ ಬಗ್ಗೆ‘ಗಂಭೀರ ಶಂಕೆ’ : ಚಿದಂಬರಂ

ನವದೆಹಲಿ : ಸಂಸತ್ ಮೇಲೆ 2001ರಲ್ಲಿ ನಡೆದ ದಾಳಿಯಲ್ಲಿ ಅಫ್ಜಲ್ ಗುರುವಿನ ಶಾಮೀಲಾತಿ ಬಗ್ಗೆ ‘ಗಂಭೀರ ಸಂಶಯ’ಗಳಿದ್ದು ಆ ಪ್ರಕರಣವನ್ನು‘ಪ್ರಾಯಶಃ ಸರಿಯಾಗಿ ತೀರ್ಮಾನಿಸಿಲ್ಲ,’ವೆಂದು ಮಾಜಿ ಕೇಂದ್ರ ಸಚಿವಪಿ ಚಿದಂಬರಂಹೇಳಿದ್ದಾರೆ. ಹಿಂದಿನ ಯುಪಿಎ ಸರಕಾರ 2011ರಲ್ಲಿ ಅಫ್ಜಲ್‌ನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾಗ ಚಿದಂಬರಂ ಗೃಹ ಸಚಿವರಾಗಿದ್ದರು. ಅಫ್ಜಲ್‌ನನ್ನು ಎರಡು ವರ್ಷಗಳ ನಂತರ ಗಲ್ಲಿಗೇರಿಸಲಾಗಿತ್ತು.


‘‘ಈ ಸಂಚಿನಲ್ಲಿ ಆತನ ಶಾಮೀಲಾತಿಯ ಬಗ್ಗೆಗಂಭೀರ ಸಂಶಯಗಳಿವೆ, ಆತ ಒಂದು ವೇಳೆ ಶಾಮೀಲಾಗಿದ್ದರೂಆತ ಎಷ್ಟರ ಮಟ್ಟಿಗೆ ಶಾಮೀಲಾಗಿದ್ದನೆಂಬ ಬಗ್ಗೆಯೂ ಸಂಶಯವಿದೆ. ಆತನನ್ನು ಯಾವುದೇ ಪೆರೋಲ್ ಇಲ್ಲದೆ ಆತನ ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆಗೊಳಪಡಿಸಬಹುದಾಗಿತ್ತು,’’ಎಂದು ಚಿದಂಬರಂ ಹೇಳಿದ್ದಾರೆಂದು ದಿ ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.


ಅಫ್ಜಲ್ ಪ್ರಕರಣದಲ್ಲಿ ನ್ಯಾಯಾಲಯಗಳು ಸರಿಯಾದ ತೀರ್ಮಾನಗಳಿಗೆ ಬಂದಿವೆಯೇಹಾಗೂ ಮರಣದಂಡನೆ ಆತನಿಗೆ ಸರಿಯಾದ ಶಿಕ್ಷೆಯಾಗಿತ್ತೇ ಎಂಬ ಪ್ರಶ್ನೆಗಳಿಗೆ ಚಿದಂಬರಂ ಉತ್ತರಿಸುತ್ತಿದ್ದರು. ಅಫ್ಚಲ್ ಗುರುವಿಗೆ ಗಲ್ಲು ಶಿಕ್ಷೆ ನೀಡಿದ ದಿನದ ಸ್ಮರಣಾರ್ಥ ಜೆಎನ್‌ಯುವಿನಲ್ಲಿ ಕೆಲವು ದಿನಗಳ ಹಿಂದೆ ಆಯೋಜಿಸಲಾದ ಕಾರ್ಯಕ್ರಮವೊಂದು ವಿವಾದಕ್ಕೀಡಾಗಿ ಆರು ಮಂದಿ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಾಶ್ಮೀರಿ ಪ್ರತ್ಯೇಕತಾವಾದಿಗಳು ಕೂಡ ಆತನಿಗೆ ನೀಡಲಾದ ಗಲ್ಲುಶಿಕ್ಷೆಯನ್ನು ತಮಗೆ ಬೆಂಬಲ ಪಡೆಯುವುದಕ್ಕಾಗಿ ಉಪಯೋಗಿಸುತ್ತಿದ್ದಾರೆ.


‘‘ಅಫ್ಜಲ್ ಗುರು ಪ್ರಕರಣವನ್ನು ಪ್ರಾಯಶಃ ಸರಿಯಾಗಿ ತೀರ್ಮಾನಿಸಿಲ್ಲವೆಂಬ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸುವುದು ಸಾಧ್ಯವೆಂದು ನನಗನಿಸುತ್ತದೆ,’’ ಎಂದು2008ರಿಂದ 2012ರವರೆಗೆ ಗೃಹ ಸಚಿವರಾಗಿದ್ದ ಚಿದಂಬರಂ ಹೇಳಿದರು.


ಅಫ್ಚಲ್‌ನನ್ನು ಗಲ್ಲಿಗೇರಿಸಿದ ಸರಕಾರದಲ್ಲಿ ನೀವೂ ಇದ್ದಿರಲ್ಲವೇ ಎಂಬ ಪ್ರಶ್ನೆಗೆತಾನು ಆಗ ಗೃಹ ಸಚಿವರಾಗಿರಲಿಲ್ಲ, ಎಂದು ಚಿದಂಬರಂ ಹೇಳಿದರು.
‘‘ನಾನು ಗೃಹ ಸಚಿವನಾಗಿದ್ದರೆ ಏನು ಮಾಡುತ್ತಿದ್ದೆನೆಂದು ಹೇಳಲು ಸಾಧ್ಯವಿಲ್ಲ.ನೀವು ಆ ಕುರ್ಚಿಯಲ್ಲಿ ಕುಳಿತಿದ್ದರೆ ಮಾತ್ರನೀವು ಆ ನಿರ್ಧಾರವನ್ನು ತೆಗೆದುಕೊಳ್ಳಬಹುದು,’’ಎಂದು ಅವರು ಅಭಿಪ್ರಾಯ ಪಟ್ಟರು.


ಆಗಿನ ಸರಕಾರ ಕೋರ್ಟ್ ತೀರ್ಮಾನವನ್ನು ತಪ್ಪೆಂದು ಹೇಳುತ್ತಿರಲಿಲ್ಲವೆಂದ ಚಿದಂಬರಂ ಅದೇ ಸಮಯ ‘‘ಈ ಪ್ರಕರಣದಲ್ಲಿ ನ್ಯಾಯಾಲಯಸರಿಯಾಗಿ ತೀರ್ಮಾನಿಸಿಲ್ಲವೆಂಬ ಅಭಿಪ್ರಾಯವನ್ನು ಸ್ವತಂತ್ರ ವ್ಯಕ್ತಿಯೊಬ್ಬ ಹೊಂದಬಹುದು,’’ ಎಂದರು.


ಇಂತಹ ಒಂದು ಅಭಿಪ್ರಾಯ ಹೊಂದಿರುವ ಯಾರಿಗೇ ಆದರೂ ‘ದೇಶ-ವಿರೋಧಿ’ ಎಂದು ಹಣೆಪಟ್ಟಿ ಹಚ್ಚುವುದು ತಪ್ಪು ಎಂದು ಹೇಳಿದ ಅವರು ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧದ ದೇಶದ್ರೋಹ ಆರೋಪವನ್ನು ‘ಅತಿರೇಕದ ಕ್ರಮ’ವೆಂದು ಬಣ್ಣಿಸಿದರು.


‘‘ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ದೇಶದ್ರೋಹದ ಭಾಷಣವಲ್ಲ. ನಿಮ್ಮಭಾಷಣ ಬಂದೂಕಿನ ಸಿಡಿಮದ್ದಿಗೆ ಕಿಡಿ ಹೊತ್ತಿಸಿದರೆ ಮಾತ್ರ ಅದು ದೇಶದ್ರೋಹವಾಗುತ್ತದೆ,’’ ಎಂದು ಚಿದಂಬರಂ ಹೇಳಿದರು.


‘‘ತಪ್ಪು ಮಾಡುವ ಹಕ್ಕು ವಿದ್ಯಾರ್ಥಿಗಳಿಗಿರುವ ಕಾಲವಿದು. ವಿಶ್ವವಿದ್ಯಾನಿಲಯವೊಂದು ನೀವು ಯಾವತ್ತೂಗಾಢ ಚಿಂತಕರಾಗಿದ್ದುಕೊಂಡಿರಬೇಕಾದಸ್ಥಳವಲ್ಲ. ನೀವು ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ ಇರಬಹುದು,’’ಎಂದು ಮಾಜಿ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X