Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇರಳ: ಜಿಮ್‌ಗಳಲ್ಲಿ ಕುದುರೆಗಳ...

ಕೇರಳ: ಜಿಮ್‌ಗಳಲ್ಲಿ ಕುದುರೆಗಳ ಇಂಜೆಕ್ಷನ್ ಬಳಕೆ! ಕೇರಳ ಪೊಲೀಸ್ ದಾಳಿಯಲ್ಲಿ ಪತ್ತೆ

ವಾರ್ತಾಭಾರತಿವಾರ್ತಾಭಾರತಿ25 Feb 2016 3:48 PM IST
share
ಕೇರಳ: ಜಿಮ್‌ಗಳಲ್ಲಿ ಕುದುರೆಗಳ ಇಂಜೆಕ್ಷನ್ ಬಳಕೆ! ಕೇರಳ ಪೊಲೀಸ್ ದಾಳಿಯಲ್ಲಿ ಪತ್ತೆ

ತ್ರಿಶೂರ್: ಮಸಲ್‌ಗಳು ಗಟ್ಟಿಗೊಳಿಸಲಿಕ್ಕಾಗಿ ಜಿಮ್‌ನಲ್ಲಿ ಕುದುರೆಗಳಿಗೆ ನೀಡುವ ಇಂಜೆಕ್ಷನ್ ಸೇರಿದಂತೆ ಅನಧಿಕೃತ ಮದ್ದುಗಳನ್ನು ಬಳಸುತ್ತಿರುವುದು ಪೊಲೀಸ್ ದಾಳಿಯ ವೇಳೆ ಪತ್ತೆಯಾಗಿದೆ. ಕೇರಳದಲ್ಲಿ ಶರೀರ ಪುಷ್ಟಿಗಾಗಿ ಮದ್ದುಗಳ ಜಾಲ ವ್ಯಾಪಕವಾಗಿ ಕಾರ್ಯಾಚರಿಸುತ್ತಿವೆ. ತ್ರಿಶೂರ್ ಪೊಲೀಸರು ನಡೆಸಿದ ತನಿಖೆಯಲ್ಲಿ ಒಲ್ಲೂರು ಕ್ರಿಸ್ಟೋಫರ್ ನಗರದ ಜಿಮ್‌ನಲ್ಲಿ ಕುದುರೆಗೆ ಉಪಯೋಗಿಸುವ ಇಂಜೆಕ್ಷನ್ ಮತ್ತು ಅನಧಿಕೃತ ಮದ್ದುಗಳು ಪತ್ತೆಯಾಗಿವೆ. ಜಿಮ್ ಮಾಲಕ ಹಾಗೂ ತರಬೇತುದಾರನ್ನು ಬಂಧಿಸಲಾಗಿದೆ.

ಜಿಲ್ಲಾ ಡ್ರಗ್ ಇನ್ಸ್‌ಪೆಕ್ಟರ್ ಎಂಪಿ ವಿನಯ್ ನೇತೃತ್ವದಲ್ಲಿ ಮದ್ದುಗಳ ಪರಿಶೀಲನೆ ನಡೆಸಲಾಯಿತು. ಒಲ್ಲೂರಿನ ಸ್ಪೆಶಲ್ ಬ್ರಾಂಚ್ ಪೊಲೀಸರ ವರದಿ ಪ್ರಕಾರ ಸಿಐಎ ಉಮೇಶ್, ಎಸ್ಸೈ ಪ್ರಶಾಂತ್ ಕ್ಲಿಂಟ್ ಎಂಬವರು ಪರಿಶೀಲನೆಯ ನೇತೃತ್ವವಹಿಸಿದ್ದರು.

ವೈದ್ಯರ ಸೂಚನೆ ಇಲ್ಲದೆ ಈ ಮದ್ದುಗಳ ಸೇವನೆಯಿಂದಾಗಿ ಜಿಮ್‌ಗೆ ಬರುವವರಲ್ಲಿ ಕೆಲವರು ರೋಗಿಗಳಾಗಿದ್ದಾರೆ. ಕಿಡ್ನಿ ರೋಗ ಹಾಗೂ ಶರೀರ ಉಬ್ಬುವ ರೋಗ ಕೂಡ ಆಗಿದೆ. ಆದರೆ ಇದೇ ಜಿಮ್‌ನ ಹಲವರು ಹಲವು ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಹದಿನಾರರಿಂದ ಇಪ್ಪತ್ತೆರಡರ ವಯೋಮಾನದ ಯುವಕರು ಪ್ರೊಟೀನ್ ಪೌಡರ್ ಸೇವಿಸಲು ಜಿಮ್ ತರಬೇತಿದಾರರು ಹಾಗೂ ಕೆಲವು ವೈದ್ಯರು ಸೂಚಿಸುತ್ತಾರೆ. ಈ ಪೌಡರ್ ಸೇವನೆಯಿಂದ ದೇಹದ ರಕ್ತನಾಳಗಳ ಅಪರಿಮಿತ ಬೆಳವಣಿಗೆ ಆಗುತ್ತವೆ. ಪ್ರೊಟೀನ್ ಪೌಡರ್‌ಗಳೊಳಗಿರುವ ಸ್ಟಿರಾಯಿಡ್‌ಗಳು ಇದಕ್ಕೆ ಕಾರಣವಾಗಿದೆ. ಇದು ಹೃದಯದ ಚಟವಟಿಕೆಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತವೆ.

ಕೇರಳ, ಬಂಗಾಲ, ಮಹಾರಾಷ್ಟ್ರ, ತಮಿಳ್ನಾಡು, ಕರ್ನಾಟಕಗಳಲ್ಲಿ ಪ್ರೊಟೀನ್ ಪೌಡರ್‌ನ ಅಮಿತ ಬಳಕೆ ಆಗುತ್ತಿದೆ. ಮೊದಲು ಕ್ರೀಡಾಳುಗಳು ಬಳಸುತ್ತಿದ್ದವುಗಳನ್ನು ಈಗ ಬೇರೆಬೇರೆ ಹೆಸರುಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿವೆ. ಮೂತ್ರದ ಸ್ಯಾಂಪಲ್‌ಗಳಲ್ಲಿ ಕೂಡಾ ಕಂಡುಹಿಡಿಯಲು ಸಾಧ್ಯವಿಲ್ಲದಂತೆ ಈ ಪೌಡರರ್‌ಗಳನ್ನು ನಿರ್ಮಿಸಲಾಗಿದೆ. ಐದು ವರ್ಷಗಳವರೆಗೆ ಶಿಕ್ಷೆಗೆ ಗುರಿಯಾಗುವ ಅಪರಾಧವನ್ನು ಈಗ ಬಂಧಿಸಲಾದ ಆರೋಪಿಗಳ ಮೇಲೆ ಹೊರಿಸಲಾಗಿದೆ. ಮಾತ್ರವಲ್ಲ ಕೇರಳಾದ್ಯಂತ ದಾಳಿ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X