ರೈಲ್ವೆ ಬಜೆಟ್‌ನಲ್ಲಿ ಕಾಣಿಯೂರು-ಕಾಂಞಂಗಾಡ್ ರೈಲು ಮಾರ್ಗ ಪ್ರಸ್ತಾಪವಿಲ್ಲ

ಸುಳ್ಯ: ಈ ಬಾರಿಯ ಕೇಂದ್ರ ರೈಲ್ವೇ ಬಜೆಟ್‌ನಲ್ಲಿ ಕಾಣಿಯೂರು-ಕಾಂಞಂಗಾಡ್ ರೈಲ್ವೆ ಯೋಜನೆ ಕುರಿತು ಯಾವುದೇ ಪ್ರಸ್ತಾಪ ವ್ಯಕ್ತವಾಗಿಲ್ಲ. ಬಹುನಿರೀಕ್ಷಿತ ಕಾಣಿಯೂರು-ಕಾಂಞಂಗಾಡ್ ರೈಲ್ವೆ ಕುರಿತಂತೆ ಈ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ಈ ಯೋಜನೆ ಬಹುತೇಕ ನೆನಗುದಿಗೆ ಬೀಳಲಿದೆ ಎಂದೇ ನಿರೀಕ್ಷಿಸಲಾಗಿದೆ. ಮೈಸೂರಿನಿಂದ ಕುಶಾಲನಗರಕ್ಕೆ 85 ಕಿ.ಮೀ. ಉದ್ದದ ನೂತನ ರೈಲು ಮಾರ್ಗ ನಿರ್ಮಾಣಕ್ಕೆ 667 ಕೋಟಿಯನ್ನು ಮೀಸಲಾಗಿರಿಸಲಾಗಿದೆ. ಸಕಲೇಶಪುರ-ಸುಬ್ರಹ್ಮಣ್ಯ ಕ್ರಾಸ್‌ವರೆಗಿನ 60 ಕಿ.ಮೀ. ಉದ್ದದ ರೈಲು ಮಾರ್ಗದ ಅಭಿವೃದ್ಧಿಗೆ 500 ಕೋಟಿಯನ್ನು ಕಾಯ್ದಿರಿಸಲಾಗಿದೆ. ಕಾಣಿಯೂರು-ಕಾಂಞಂಗಾಡ್ ರೈಲು ಯೋಜನೆ ನೆನೆಗುದಿಗೆ ಬೀಳಲು ಜನಪ್ರನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಹಾಗೂ ರೈಲ್ವೆ ಕ್ರಿಯಾ ಸಮಿತಿಯ ಕಾರ್ಯದರ್ಶಿ ಪಿ.ಬಿ.ಸುಧಾಕರ ರೈ ಹೇಳಿದ್ದಾರೆ.
Next Story





