ಕರ್ನಾಟಕದ ಧಾರ್ಮಿಕ ಕ್ರಾಂತಿಗೆ ಹೊಸ ಚೈತನ್ಯ ಮೂಡಿಸಿದ ಕೆ.ಸಿ.ಎಫ್ : ಮಂಬಾಡ್ ಸಖಾಫಿ

ಫೆ 19 : ದಮ್ಮಾಂ : ಕೆಸಿಎಫ್ ದಮ್ಮಾಮ್ ಸೆಕ್ಟರ್ ವತಿಯಿ೦ದ ಕೆಸಿಎಫ್ ಡೇ ಪ್ರಯುಕ್ತ ಮತ್ತು "ತಖದ್ದುಮ್ -2016" ಅ೦ಗವಾಗಿ ಸಪ್ತ ದಿನ ಕಾರ್ಯಕ್ರಮಗಳು ನಡೆದವು ಕಾರ್ಯಕ್ರಮವು ದಮ್ಮಾಮ್ ನ ಸಅದಿಯಾ ಹಾಲ್ ಮತ್ತು ಕೆಸಿಎಫ್ ಹಾಲ್ ಗಳಲ್ಲಿ ನಡೆಯಿತು.
5 ದಿವಸಗಳ ವಿವಿಧ ಕಾರ್ಯಕ್ರಮದಲ್ಲಿ ಪ್ರಥಮ ದಿನದ ಉಲಮಾ ಕಾನ್ಫರೆನ್ಸ್ ನಲ್ಲಿ ''ಸಂಘಟನೆಯಲ್ಲಿ ಉಲಮಾಗಳ ಪಾತ್ರ'' ಎಂಬಾ ವಿಷಯದಲ್ಲಿ ಆರ್.ಎಸ್.ಸಿ ನ್ಯಾಷನಲ್ ಚೇರ್ಮ್ಯಾನ್ ಬಹು|| ಅಬ್ದುಲ್ ಬಾರಿ ನದ್ವಿ ಯವರು ವಿಷಯ ಮಂಡಿಸಿದರು, ದ್ವಿತಿಯ ದಿನ ಇಶಾರ ಮೀಟ್ ಕಾರ್ಯಕ್ರಮದಲ್ಲಿ ಅಬ್ದುಲ್ ಅಝೀಝ್ ಸಅದಿ( ಅಧ್ಯಕ್ಷರು ಕೆ.ಸಿ.ಎಫ್ ದಮ್ಮಾಮ್ ಝೋನ್ ), ಹಾಗೂ ತ್ರತೀಯ ದಿನ ನಡೆದ ಸಾಂತ್ವನ ಮೀಟ್ ನಲ್ಲಿ ಜನಾಬ್ ಮುಹಮ್ಮದ್ ಮಲಬೆಟ್ಟು (ಕೋಶಾಧಿಕಾರಿ, ಕೆ.ಸಿ.ಎಫ್ ದಮ್ಮಾಮ್ ಝೋನ್) ವಿಷಯ ಮಂಡಿಸಿದರು, ನಾಲ್ಕನೇ ದಿನ ಅಯೋಜಿಸಿದ ಶಿಕ್ಷಣ ವಿಚಾರಗೋಷ್ಟಿ ಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು.
ಫೆಬ್ರವರಿ ಹತ್ತೊ೦ಬತ್ತರ೦ದು ನಡೆದ ಸಪ್ತದಿನ ಸಮಾರೋಪ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಬಹು|ಅಬ್ದುಲ್ ವಹ್ಹಾಬ್ ಸಖಾಫಿ ಮಂಬಾಡ್ ರವರು ಉತ್ತರ ಕರ್ನಾಟಕದಲ್ಲಿ ಕೆ.ಸಿ.ಎಫ್ ಸಹಕಾರದಿ೦ದ ಇಹ್ಸಾನ್ ನಡೆಸಿದ ಧಾರ್ಮಿಕ ವಿಪ್ಲವವನ್ನು ಪ್ರಸ೦ಶಿಸಿದರು. ರಾಷ್ಟ್ರೀಯ ಸಮೀತಿಯ ಪ್ರಧಾನ ಕಾರ್ಯದರ್ಶಿ ಬಹು| ಉಮರುಲ್ ಫಾರೂಖ್ ಕಾಟಿಪಳ್ಳರವರು ''ಕೆ.ಸಿ.ಎಫ್ ನಡೆದು ಬಂದ ಹಾದಿ'' ಎಂಬ ವಿಷಯದಲ್ಲಿ ಮಾತನಾಡಿ ಉತ್ತರ ಕರ್ನಾಟಕದಲ್ಲಿ 'ಇಹ್ಸಾನ್'ನಡೆಸುತ್ತಿರುವ ಕಾರ್ಯವೈಖರಿ ಹಾಗೂ ಕೆ.ಸಿ.ಎಫ್ ಹಜ್ ಸ್ವಯಂ ಸೇವಕರ ಪರಿಶ್ರಮದ ಬಗ್ಗೆ ಮತ್ತು ಸಾಂತ್ವನದ ಬಗ್ಗೆ ಪ್ರೊಜೆಕ್ಟರ್ ಹಾಕಿ ಅದರ ದೃಶ್ಯವನ್ನು ಜನರ ಮನಮುಟ್ಟುವಂತೆ ವಿವರಿಸಿದರು. ಪುಟಾಣಿ ಮಕ್ಕಳಿಗೆ ಕಿರಾಅತ್, ಪ್ರವಾದಿ ಪ್ರಕೀರ್ತನೆ ಹಾಡು ಮತ್ತು ಕ್ವಿಜ್ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸುವಂತಿತ್ತು.
ಕಾರ್ಯಕ್ರಮದಲ್ಲಿ ತಾಜುದ್ದೀನ್ ಸಖಾಫಿ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಸಖಾಫಿ ತೆಲಕ್ಕಿ ಯವರು ಕಿರಾತ್ ಪಟಿಸಿದರು, ಅಶ್ರಫ್ ಸಖಾಫಿ ಉದ್ಘಾಟಿಸಿದರು. ಇಕ಼್ಬಲ್ ಕೈರಂಗಳ ಸ್ವಾಗತಿಸಿ ಅಶ್ರಫ್ ನಾವುಂದ ದನ್ಯವಾದಗೈದರು.





