Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾರ್ಕಳ ಪುರಸಭೆ 22.52ಲಕ್ಷ ಮಿಗತೆ ಬಜೆಟ್...

ಕಾರ್ಕಳ ಪುರಸಭೆ 22.52ಲಕ್ಷ ಮಿಗತೆ ಬಜೆಟ್ ಮಂಡನೆ

ವಾರ್ತಾಭಾರತಿವಾರ್ತಾಭಾರತಿ25 Feb 2016 6:48 PM IST
share
ಕಾರ್ಕಳ ಪುರಸಭೆ 22.52ಲಕ್ಷ ಮಿಗತೆ ಬಜೆಟ್ ಮಂಡನೆ

 ಕಾರ್ಕಳ : ಪುರಸಭೆಯು 2016-17ನೇ ಸಾಲಿನಲ್ಲಿ 22.52 ಮಿಗತೆ ಬಜೆಟ್ ಮಂಡಿಸಿದೆ. ಪುರಸಭೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ಮಾತನಾಡಿ, 2015ರ ಎ.1ರಂದು ಆರಂಭಿಕ ಶಿಲ್ಕು 120.09 ಲಕ್ಷ, 2016-17ನೇ ಸಾಲಿನ ನಿರೀಕ್ಷಿತ ಆದಾಯ-ಜಮಾ 1194.96ಲಕ್ಷ (ಒಟ್ಟು 1315.05 ಲಕ್ಷ), 2016-17ನೇ ಸಾಲಿನ ನಿರೀಕ್ಷಿತ ಪಾವತಿ 1292.53 ಲಕ್ಷ ರೂ. ಸೇರಿದಂತೆ 2017ರ ಮಾರ್ಚ್ 31ಕ್ಕೆ ನಿರೀಕ್ಷಿತ ಅಂತಿಮ ಶಿಲ್ಕು 22.52 ಆಗಿದೆ. ಆದಾಯ ಕಟ್ಟಡ ತೆರಿಗೆಯಿಂದ 130.00 ಲಕ್ಷ, ನಳ್ಳಿ ನೀರು ಮೂಲದಿಂದ 89.10 ಲಕ್ಷ, ಮಾಲಕತ್ವ ಮೂಲದಿಂದ(ಸ್ಟಾಲ್ ಇತ್ಯಾದಿ) 20.03 ಲಕ್ಷ, ಸ್ಟಾಲ್ ಪ್ರೀಮಿಯಂ 5.00 ಲಕ್ಷ, ಇನ್ನಿತರ ಆದಾಯ 81.59 ಲಕ್ಷ, ಚಿಕನ್, ಮಟನ್, ದಿನವಹಿ ಮಾರುಕಟ್ಟೆ ಕಿಸ್ತು 39.88 (ಒಟ್ಟು 365.60 ಲಕ್ಷ ರೂ.) ಪುರಸಭೆಯಿಂದ ಆದಾಯ ನಿರೀಕ್ಷಿಸಲಾಗಿದೆ. ಎಸ್‌ಎಫ್‌ಸಿ ನೌಕರರ ಸಿಬ್ಬಂದಿ ವೇತನ 80 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಬಿಲ್ಲು ಅನುದಾನ 90 ಲಕ್ಷ, ಪ್ರಕೃತಿ ವಿಕೋಪ ಅನುದಾನ 10 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ 200 ಲಕ್ಷ, ಕೇಂದ್ರ ಸರಕಾರದಿಂದ ನಿರೀಕ್ಷಿತ ಅನುದಾನ 127.64 ಲಕ್ಷ, ಶಾಸಕರ ಅನುದಾನ 5 ಲಕ್ಷ, ಎಂಪಿ ಅನುದಾನ 5 ಲಕ್ಷ, ಎಸ್‌ಯುಎಲ್‌ಎಂ ಅನುದಾನ 5 ಲಕ್ಷ, ಎಸ್‌ಎಫ್‌ಸಿ ಕುಡಿಯುವ ನೀರು ಅನುದಾನ 25 ಲಕ್ಷ ಮತ್ತು ನಿರೀಕ್ಷಿಸಲಾದ ಅಸಮಾನ್ಯ ಆದಾಯ 281.72ಲಕ್ಷ ಸೇರಿದಂತೆ ಒಟ್ಟು 829.36 ಲಕ್ಷ ರೂ. ಅನುದಾನವನ್ನು ಸರಕಾರದಿಂದ ನಿರೀಕ್ಷಿಸಲಾಗಿದೆ. ರಸ್ತೆ ದುರಸ್ತಿ ಚರಂಡಿ, ಮರು ಡಾಮರೀಕರಣ, ಪ್ಯಾಚ್ ಇತ್ಯಾದಿ 30 ಲಕ್ಷ, ವಾಹನ ಮತ್ತು ಪಿಜಿಆರ್ ನಿರ್ವಹಣೆ ಗುತ್ತಿಗೆ 10.50 ಲಕ್ಷ, ಬೀದಿ ದೀಪ ಹೊರಗುತ್ತಿಗೆ 15 ಲಕ್ಷ, ಘನತ್ಯಾಜ್ಯ ಹೊರಗುತ್ತಿಗೆ 25 ಲಕ್ಷ, ನೀರು ಸರಬರಾಜು ಹೊರಗುತ್ತಿಗೆ 12 ಲಕ್ಷ, ಟ್ಯಾಂಕರ್ ಮೂಲಕ ನೀರು ಸರಬರಾಜು 5 ಲಕ್ಷ, ಘನತ್ಯಾಜ್ಯ ಇತರ ಸ್ಥಿರ ಆಸ್ತಿಗಳ ಖರೀದಿ ಇತ್ಯಾದಿ ನೈರ್ಮಲೀಕರಣ ಲಘು ವಾಹನ 5 ಲಕ್ಷ, ಬಯೋಗ್ಯಾಸ್ ಘಟಕ ರಚನೆ 35 ಲಕ್ಷ, ಉದ್ಯಾನ ದುರಸ್ತಿ ಮತ್ತು ನಿರ್ವಹಣೆ 20 ಲಕ್ಷ, ಕೆರೆಗಳ ಅಭಿವೃದ್ದಿ 10 ಲಕ್ಷ, ಸ್ಮಶಾನ ಅಭಿವೃದ್ದಿ 5 ಲಕ್ಷ, ನೀರು ಸರಬರಾಜು ವಿತರಣಾ ವ್ಯವಸ್ಥೆ 65 ಲಕ್ಷ, ನೀರು ಸರಬರಾಜು ಮತ್ತು ದಾರದೀಪ, ವಿದ್ಯುತ್ ಬಿಲ್ಲು ಪಾವತಿ 90 ಲಕ್ಷ, ಒಳಚರಂಡಿ ಮಾರ್ಗಗಳು 25 ಲಕ್ಷ, ಕಟ್ಟಡ ಕಾಮಗಾರಿ 52 ಲಕ್ಷ, ಹೊಸ ರಸ್ತೆ ರಚನೆ, ಹೊಸ ರಸ್ತೆ ಡಾಮರೀಕರಣ, ಹಾಸುಗಲ್ಲುಗಳು, ಪಾದಚಾರಿ ಮಾರ್ಗ 50 ಲಕ್ಷ, ಕಛೇರಿ ಕಟ್ಟಡ ದುರಸ್ತಿ 20ಲಕ್ಷ, ರಸ್ತೆ ಬದಿ ಮಳೆನೀರು ಕಾಂಕ್ರೀಟ್ ಚರಂಡಿ, ಕಾಂಕ್ರೀಟ್ ರಸ್ತೆ ಇತ್ಯಾದಿ 65 ಲಕ್ಷ, ಹೈಮಾಸ್ಟ್ ಬೀದಿನ ದೀಪ ಅಳವಡಿಕೆ 10 ಲಕ್ಷ, ಬೀದಿ ದೀಪ ವಿಸ್ತರಣಾ ಕಾಮಗಾರಿ 20 ಲಕ್ಷ, ಮೋರಿ ರಚನೆ 10 ಲಕ್ಷ, ಪೀಠೋಪಕರಣ 5 ಲಕ್ಷ, ಉದಿಮೆ ಪರವಾನಿಗೆ ಮತ್ತು ನೀರು ಸರಬರಾಜು, ಬಿಲ್ಲು ಗಣಕೀಕರಣ 20 ಲಕ್ಷ, ಪ್ರಕೃತಿ ವಿಕೋಪ ಸಹಾಯಧನ 5 ಲಕ್ಷ, ಶೇ.24.10ಕ್ಕೆ ಪುರಸಭೆ ನಿಧಿಯಿಂದ ಕಾಯ್ದಿರಿಸಿದ ಮೊತ್ತ 8.32 ಲಕ್ಷ, ಶೇ.24.10 ಎಸ್‌ಎಫ್‌ಸಿ ಅನುದಾನಕ್ಕೆ ಕಾಯ್ದಿರಿಸಿದ ಮೊತ್ತ 42.20 ಲಕ್ಷ, ಬಡ ಜನರ ಕಲ್ಯಾಣ ನಿಧಿ ಶೇ.7.25ಕ್ಕೆ ಪುರಸಭೆ ನಿಧಿಯಿಂದ ಕಾಯ್ದಿರಿಸಿದ ಮೊತ್ತ 2.50 ಲಕ್ಷ, ಬಡಜನರ ಕಲ್ಯಾಣ ನಿಧಿ ಶೇ.7.25 ಎಸ್‌ಎಫ್‌ಸಿ ಅನುದಾನದಲ್ಲಿ ಕಾದಿರಿಸಿದ ಮೊತ್ತ 14.50 ಲಕ್ಷ, ವಿಕಲಚೇತನರ ಕಲ್ಯಾಣ ನಿಧಿಗೆ ಪುರಸಭೆ ನಿಧಿಯಿಂದ ಕಾದಿರಿಸಿ ಮೊತ್ತ 1.03 ಲಕ್ಷ ರೂ. ವಿಕಲಚೇತನರ ಕಲ್ಯಾಣ ನಿಧಿಗೆ ಎಸ್‌ಎಫ್‌ಸಿ ನಿಧಿಯಿಂದ ಕಾದಿರಿಸಿದ ಮೊತ್ತ 6 ಲಕ್ಷ ರೂ. ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಪುರಸಭೆ ನಿಧಿಯಲ್ಲಿ ಕಾದಿರಿಸಿದ ಮೊತ್ತ 25 ಲಕ್ಷ ರೂ ಸೇರಿದಂತೆ ಒಟ್ಟು ಮೊತ್ತ 1292.53 ಲಕ್ಷ ರೂ, ನಿರೀಕ್ಷಿತ ಪಾವತಿಯಾಗಿದೆ. ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಶಶಿಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಮುಖ್ಯಾಧಿಕಾರಿ ರಾಯಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X