ಪುತ್ತೂರು: ರಿಕ್ಷಾ ಪಲ್ಟಿ - ಮೂವರಿಗೆ ಗಾಯ

ಪುತ್ತೂರು: ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಪ್ರಪಾತಕ್ಕೆ ಬಿದ್ದು ಮೂವರು ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ಎಂಬಲ್ಲಿ ಗುರುವಾರ ನಡೆದಿದೆ. ಇಲ್ಲಿನ ಒಳತ್ತಡ್ಕ ನಿವಾಸಿ ನಿವಾಸಿ ಮೊಹಮ್ಮದ್ ಬಶೀರ್(42) ಅವರ ಪತ್ನಿ ಆಯಿಷಾ(37) ಮತ್ತು ಪುತ್ರಿ ಇರ್ಶಾನ(18) ಗಾಯಗೊಂಡವರು. ಈ ರಿಕ್ಷಾವು ಒಳತ್ತಡ್ಕದಿಂದ ಪುತ್ತೂರಿಗೆ ಆಗಮಿಸುತ್ತಿದ್ದು, ಕುಂಜೂರು ಪಂಜದ ತಿರುವಿನಲ್ಲಿ ಚಾಲಕ ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಈ ತಿರುವು ಬಾರೀ ಅಪಾಯಕಾರಿಯಾಗಿದ್ದು, ಈ ಹಿಂದೆಯೂ ಹಲವು ವಾಹನಗಳು ಇಲ್ಲಿ ಉರುಳಿ ಬಿದ್ದಿತ್ತು. ರಸ್ತೆಯ ತಿರುವಿನಲ್ಲಿ ಯಾವುದೇ ತಡೆಗೋಡೆ ಇಲ್ಲದಿದ್ದು, ಇಲ್ಲಿ ತಡೆಬೇಲಿ ರಚನೆ ಮಾಡುವಂತೆ ಸ್ಥಳೀಯರು ಹಲವು ಬಾರಿ ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದರು. ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಇದರಿಂದಾಗಿ ಇಲ್ಲಿ ದುರಂತಗಳು ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





