ರಾಜ್ಯ ಮಟ್ಟದ ಮಲ್ಲಕಂಬ 4 ಚಿನ್ನ, 1 ಬೆಳ್ಳಿ , 3 ಕಂಚು.
.jpg)
ಆಳ್ವಾಸ್ ವಿದ್ಯಾರ್ಥಿಗಳಿಂದ ಮಲ್ಲಕಂಬ ಪ್ರದರ್ಶನ
ಮೂಡುಬಿದಿರೆ: ಕರ್ನಾಟಕ ರಾಜ್ಯ ಮಲ್ಲಕಂಬ ಎಸೋಸಿಯೇಶನ್ ಲಕ್ಷ್ಮೇಶ್ವರದ ದೂದ್ ಪೀರಾ ದರ್ಗಾ ಮೈದಾನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ 17ನೇ ಮಲ್ಲಕಂಬ ಸ್ಪರ್ಧೆಯಲ್ಲಿ ಮೊದಲಬಾರಿ ಭಾಗವಹಿಸಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು 4 ಚಿನ್ನ, 1 ಬೆಳ್ಳಿ ಮತ್ತು 3 ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಸ್ಥಿರಮಲ್ಲ ಕಂಬ ವಿಭಾಗ: 12ವರ್ಷದೊಳಗಿನ ಬಾಲಕರಲ್ಲಿ ವೀರಣ್ಣ ಗೌಡ ಪಾಟೀಲ ಅವರಿಗೆ ಚಿನ್ನ, ಮಂಜುನಾಥ ಮಕಾಳೆಗೆ ಕಂಚು,
14ವರ್ಷದೊಳಗಿನ ಬಾಲಕರಲ್ಲಿ ಸುಗುಣಸಾಗರ ವಡ್ರಾಳಿ ಅವರಿಗೆ ಚಿನ್ನ ಪಡೆದಿರುತ್ತಾನೆ. 18 ವರ್ಷದೊಳಗಿನ ಬಾಲಕರಲ್ಲಿ ಮೈಲಾರಪ್ಪ ಸ್ವರ್ಣಗಿ ಅವರಿಗೆ ಕಂಚು, 18 ವರ್ಷ ಮೇಲಿನ ಪುರುಷರ ವಿಭಾಗದಲ್ಲಿ ತುಷಾರ್ ಚೌಹಾಣ್ ಅವರಿಗೆ ಚಿನ್ನದ ಪದಕ ಲಭಿಸಿದೆ.
ರೋಪ್ ಮಲ್ಲಕಂಬ : 12 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅನನ್ಯ ಹಿರೇಮಠ್ ಅವರಿಗೆ ಚಿನ್ನ, 14ವರ್ಷದೊಳಗಿನ ಬಾಲಕಿಯರಲ್ಲಿ ಪೂಜಾ ತಳವಾರ ಅವರಿಗೆ ಬೆಳ್ಳಿ, 16 ವರ್ಷದೊಳಗಿನ ಬಾಲಕಿಯರಲ್ಲಿ ಸುಷ್ಮಾ ಆದಿ ಬಸವರಾಜ ಕಂಚಿನ ಪದಕ ಪ್ರಾಪ್ತಿಯಾಗಿದೆ.
--





