ಕಡಬ: ಜಾಗದ ತಕರಾರು-ಹಲ್ಲೆ

ಕಡಬ, ಫೆ.25. ಠಾಣಾ ವ್ಯಾಪ್ತಿಯ ಕೋಡಿಂಬಾಳ ಪಲ್ಲತ್ತಡ್ಕ ಎಂಬಲ್ಲಿ ಜಾಗದ ತಕರಾರಿಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ಪದ್ಮಯ್ಯ ಗೌಡ ಹಾಗೂ ಕುತ್ಯಾಡಿ ವೆಂಕಟರಮಣ ಗೌಡ ಸೇರಿಕೊಂಡು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ಹೊನ್ನಪ್ಪ ಗೌಡ ಹಾಗೂ ಪಟ್ರಡ್ಕ ಆನಂದ ಎಂಬವರು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಹೊನ್ನಪ್ಪ ಗೌಡರ ತೋಟದಲ್ಲಿ ಆನಂದ ಎಂಬವರು ಕೆಲಸ ಮಾಡುತ್ತಿದ್ದ ವೇಳೆ ಪಕ್ಕದ ಜಮೀನಿನ ಪದ್ಮಯ್ಯ ಗೌಡ ಹಾಗೂ ಬಜರಂಗದಳ ಮುಖಂಡ ಕುತ್ಯಾಡಿ ವೆಂಕಟರಮಣ ಗೌಡ ಆಗಮಿಸಿ ಹೊನ್ನಪ್ಪ ಗೌಡರಿಗೆ ಹೊಡೆಯುತ್ತಿದ್ದರೆನ್ನಲಾಗಿದೆ. ಆ ಸಂದರ್ಭದಲ್ಲಿ ಬಿಡಿಸಲು ಹೋದ ಆನಂದರಿಗೆ ಚಾಕು ಬೀಸಿದ ಕಾರಣದಿಂದ ಆನಂದರ ಕೈಗೆ ಗಾಯವಾಗಿದ್ದು, ಮಾತ್ರವಲ್ಲದೆ ನೀನು ದಲಿತ, ಹಿಂದುಳಿದವ ಎಂದು ಜಾತಿ ನಿಂದನೆ ಮಾಡಿದ್ದಾರೆನ್ನಲಾಗಿದೆ. ಗಾಯಗೊಂಡ ಆನಂದ ಹಾಗೂ ಹೊನ್ನಪ್ಪ ಗೌಡರು ಕಡಬ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





