ಭಾರತದಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ರಸ್ತೆ ಅಪಘಾತ ಸಾವುಗಳು: ಗಡ್ಕರಿ

ಹೊಸದಿಲ್ಲಿ, ಫೆ.25: ಭಾರತದಲ್ಲಿ ಇತರ ದೇಶಕ್ಕಿಂತಲೂ ಹೆಚ್ಚು ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದಾರೆ. ಪ್ರತಿವರ್ಷ 5 ಲಕ್ಷ ಅಪಘಾತಗಳಲ್ಲಿ ಸರಾಸರಿ 1.3 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ತಿಳಿಸಿದ್ದಾರೆ.
ಹೆದ್ದಾರಿಗಳಲ್ಲಿ ಪ್ರತಿ 100 ಕಿ.ಮೀ.ಗೊಂದರಂತೆ ಟ್ರಾಮಾ ಸೆಂಟರ್ ಸ್ಥಾಪಿಸುವ ಯೋಜನೆಯಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ.
2014ರಲ್ಲಿ ಗರಿಷ್ಠ 67,250 ರಸ್ತೆ ಅಪಘಾತಗಳು ತಮಿಳುನಾಡಿನಿಂದ ವರದಿಯಾಗಿವೆ. ಬಳಿಕದ ಸ್ಥಾನಗಳು ಮಹಾರಾಷ್ಟ್ರ (61,627) ಹಾಗೂ ಮಧ್ಯಪ್ರದೇಶಗಳಿಗೆ(53,572) ಸಂದಿವೆಯೆಂದು ಗಡ್ಕರಿ ವಿವರಿಸಿದರು.
Next Story





