ನೇಪಾಳ ಲಘು ವಿಮಾನ ದುರಂತ: 23 ಶವಗಳು ಪತ್ತೆ
ಕಠ್ಮಂಡು,ಫೆ. 25 : ಕೆಟ್ಟ ಹವಾಮಾನ ವೈಪರಿತ್ಯದ ನಡುವೆ, ನೇಪಾಳದ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಲಘು ವಿಮಾನ ದುರಂತದಲ್ಲಿ ಇಬ್ಬರು ವಿದೇಶಿಯರು ಸೇರಿದಂತೆ 23 ಶವಗಳು ಹಿಮಾಲಯ ವಲಯದ ದುರ್ಗಮ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಮ್ಯಾಗ್ಢಿ ಜಿಲ್ಲೆಯಲ್ಲಿ ಪತನಗೊಂಡ ವಿಮಾನದ ಅವಶೇಷ ಕಂಡುಬಂದ ಹಿನ್ನೆಲೆಯಲ್ಲಿ ಜಂಟಿ ಕಾರ್ಯಚರಣೆ ನಡೆಸಿದ ಪೊಲೀಸ್ ಮತ್ತು ಸೇನಾ ಸಿಬ್ಬಂದಿ ಶವಗಳನ್ನು ಪತ್ತೆ ಹಚ್ಚಿದರೆಂದು ಎಂದು ತಿಳಿದುಬಂದಿದೆ.
ಏಳು ಮೃತದೇಹಗಳನು ್ನ ಈಗಾಗಲೇ ಪೋಖ್ರಾಗೆ ರವಾನಿಸಿ,ಗ್ಯಾಂಡಕಿ ಆಸ್ಬತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇಡಲಾಗಿದೆ ,ಉಳಿದ ಮೃತದೇಹಗಳನ್ನು ಬೇಗನೆ ರವಾನಿಸಲಾಗುವುದೆಂದು ಖಾಸಗಿ ತಾರ ಏರ್ ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದಾರೆ.
ಹಿಮಾಲಯದ ಚಾರಣ ಆರಂಭಿಕ ಸ್ಥಳ ಹಾಗೂ ಹಿಂದೂ ಧರ್ಮದ ತೀರ್ಥ ಸ್ಥಳವಾದ ಮುಕ್ತನಾಥ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದ ವೇಳೆ ನತದೃಷ್ಟ ವಿಮಾನ ಪತನಗೊಂಡಿತ್ತು. ವಿಮಾನವು ಪೋಖ್ರಾ ವಿಮಾನ ನಿಲ್ದಾಣದಿಂದ ಜೊಮ್‌ಸೊಮ್‌ಗೆ ಪ್ರಯಾಣ ಬೆಳೆಸಿತ್ತು.





