ಉತ್ತಮ ಸಾಧನೆಯ ನ್ಯಾಯಾಧೀಶರು ಬೇಕು: ಒಬಾಮ
ವಾಷಿಂಗ್ಟನ್, ಫೆ 25:ಕಳೆದ ತಿಂಗಳಿನಲ್ಲಿ ನಿಧನರಾದ ಅಮೆರಿಕದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಂಟೊನಿನ್ ಸ್ಕಾಲಿಯಾರವರ ಸ್ಥಾನಕ್ಕೆ ಉತ್ತಮ ಸಾಧನೆಯ, ನ್ಯಾಯಾಂಗ ಘನತೆಯನ್ನು ಎತ್ತಿ ಹಿಡಿಯುವ ನ್ಯಾಯಮೂರ್ತಿಯನ್ನು ನೇಮಕ ಮಾಡುವುದರ ಮೂಲಕ ತನ್ನ ಸಂವಿಧಾನ ಕರ್ತವ್ಯವನ್ನು ನೆರವೇರಿಸಲಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ನ್ಯಾಯಮೂರ್ತಿ ಅಂಟೊನಿನ್ ಸ್ಕಾಲಿಯಾ ರಿಂದ ತೆರವಾದ ಸ್ಥಾನಕ್ಕೆ ನ್ಯಾಯಮೂರ್ತಿ ಯನ್ನು ನೇಮಕ ಮಾಡುವ ವಿಚಾರದಲ್ಲಿ ಒಬಾಮ ಬುಧವಾರ ತನ್ನ ಬ್ಲಾಗ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾನು ನೇಮಕ ಮಾಡುವ ನ್ಯಾಯಮೂರ್ತಿಯ ಹೆಸರನ್ನು ಸೆನೆಟ್ ಸದಸ್ಯರು ತಮ್ಮ ಸಾಂವಿಧಾನ ಜವಾಬ್ದಾರಿಯನ್ನು ಅರಿತು ಪರಿಗಣಿಸುತ್ತಾರೆ ಮತ್ತು ಅವರು ಶೀಘ್ರವೇ ಚರ್ಚಿಸಿ ನ್ಯಾಯಮೂರ್ತಿಯನ್ನು ನಾಮಕರಣ ಮಾಡುವುದರ ಮೂಲಕ ನ್ಯಾಯಾಲಯವು ಅಮೆರಿಕದ ಜನರ ಸೇವೆ ಸಲ್ಲಿಸುವುದನ್ನು ಮುಂದುವರಿಸುವಂತೆ ಮಾಡುತ್ತಾರೆ ಎಂಬ ಆಶಾವಾದವನ್ನು ಒಬಾಮ ವ್ಯಕ್ತಪಡಿಸಿದ್ದಾರೆ.
Next Story





