ಭಾರತೀಯ ರೈಲನ್ನು ಮರಳಿ ಹಳಿಗೆ ತರಲು ರೈಲ್ವೆಸಚಿವರ ಆರು ಪರಿಕಲ್ಪನೆಗಳು

ಹೊಸದಿಲ್ಲಿ.ಫೆ.25: ಮುಂಗಡಪತ್ರದಲ್ಲಿ ಪ್ರಯಾಣ ದರಗಳನ್ನು ಹೆಚ್ಚಿಸಲು ರೈಲ್ವೆ ಸಚಿವ ಸುರೇಶ ಪ್ರಭು ಉದ್ದೇಶಿಸಿದ್ದರಾದರೂ ರಾಜಕೀಯ ಅವರ ಕೈಗಳನ್ನು ಕಟ್ಟಿಹಾಕಿದೆ.ಅತ್ತ ಸರಕು ಸಾಗಣೆ ದರಗಳನ್ನಾದರೂ ಹೆಚ್ಚಿಸೋಣವೆಂದರೆ ಅದಕ್ಕೂ ಹೆಚ್ಚಿನ ಅವಕಾಶವಿಲ್ಲ. ಸರಕು ಸಾಗಣೆ ರೈಲ್ವೆಯ ಆದಾಯದಲ್ಲಿ ಶೇ.67ರಷ್ಟು ಪಾಲು ಹೊಂದಿದೆ. ಈಗಾಗಲೇ ಹೆಚ್ಚಿನ ದರಗಳನ್ನು ವಿಧಿಸಲಾಗುತ್ತಿದ್ದು,ಗ್ರಾಹಕರು ರಸ್ತೆ ಸಾರಿಗೆಯತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಪ್ರಭು ಅವರು ತನ್ನ ಬಜೆಟ್ ಪ್ರಸ್ತಾವನೆಗಳಲ್ಲಿ ಶುಲ್ಕ ಏರಿಕೆಗೆ ಕೈ ಹಾಕದೆ ನಷ್ಟದಲ್ಲಿರುವ ರೈಲ್ವೆಯ ಆದಾಯವನ್ನು ಹೆಚ್ಚಿಸಲು ಆರು ಹೊಸ ಪರಿಕಲ್ಪನೆಗಳನ್ನು ಮುಂದಿಟ್ಟಿದ್ದಾರೆ.
1. ಹಳ್ಳಿಗಳ ಪಕ್ಕದ ಭೂಮಿಯನ್ನು ಲೀಸ್‌ಗೆ ನೀಡಿಕೆ: ಹಳಿಗಳ ಪಕ್ಕದಲ್ಲಿರುವ ತನಗೆ ಸೇರಿದ ಖಾಲಿ ಜಾಗವನ್ನು ತೋಟಗಾರಿಕೆ ಮತ್ತು ತೋಪುಗಳ ನಿರ್ಮಾಣಕ್ಕಾಗಿ ಲೀಸ್ ಆಧಾರದಲ್ಲಿ ನೀಡಲು ರೈಲ್ವೆ ಉದ್ದೇಶಿಸಿದೆ. ಇದು ದುರ್ಬಲ ವರ್ಗಗಳಿಗೆ ಉದ್ಯೋಗಗಳನ್ನು ಒದಗಿಸುವುದರೊಂದಿಗೆ ಆಹಾರ ಭದ್ರತೆಯನ್ನು ಹೆಚ್ಚಿಸಲಿದೆ ಮತ್ತು ಅತಿಕ್ರಮಣಗಳನ್ನು ತಡೆಯಲಿದೆ.
2.ಮೃದು ಆಸ್ತಿಗಳ ನಗದೀಕರಣ: ರೈಲ್ವೆಯು ತನ್ನ ಪ್ರಯಾಣಿಕರ ಆದ್ಯತೆಗಳು,ಟಿಕೆಟಿಂಗ್, ಸರಕುಗಳು, ವಿವಿಧ ಸೇವೆಗಳು ಮತ್ತು ಕಾರ್ಯಾಚರಣೆಗಾಗಿ ಸಂಚರಿಸುವ ರೈಲುಗಳ ಕುರಿತು ಸಂಗ್ರಹಿತ ದತ್ತಾಂಶಗಳನ್ನು ನಗದೀಕರಿಸಲಿದೆ. ತನ್ನ ಜಾಲತಾಣಕ್ಕೆ ಭೇಟಿ ನೀಡುವ ಪ್ರಯಾಣಿಕರಿಂದ ಹಣಗಳಿಕೆಯ ಬಗ್ಗೆ ಐಆರ್‌ಸಿಟಿಸಿ ಕೂಡ ಅನ್ವೇಷಿಸಲಿದೆ.
3. ರೈಲ್ವೆ ನಿಲ್ದಾಣಗಳಲ್ಲಿ, ರೈಲುಗಳ ಮೇಲೆ ಮತ್ತು ಹಳಿಗಳ ಪಕ್ಕದ ಜಾಗಗಳಲ್ಲಿ ಹೆಚ್ಚೆಚ್ಚು ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಹೆಚ್ಚಿನ ಆದಾಯವನ್ನು ಕ್ರೋಡೀಕರಿಸಲಾಗುವುದು.
4.ತನ್ನ ಪಾರ್ಸೆಲ್ ಸಾಗಾಟ ವ್ಯವಸ್ಥೆಯನ್ನು ಪುನಃಶ್ಚೇತನಗೊಳಿಸಲಿರುವ ಇಲಾಖೆಯು ಇ-ಕಾಮರ್ಸ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಯತ್ನಿಸಲಿದೆ
5.ಉತ್ಪಾದಕತೆಯಲ್ಲಿ ಏರಿಕೆ: ರೈಲ್ವೆಯು ತನ್ನ ಘಟಕಗಳ ಉತ್ಪಾದಕತೆಯನ್ನು ಹೆಚ್ಚಿಸಲಿದೆ ಮತ್ತು 2020ರವೇಳೆಗೆ ವಾರ್ಷಿಕ 4,000 ಕೋ.ರೂ.ಆದಾಯ ಗಳಿಕೆಯ ನಿರೀಕ್ಷೆಯನ್ನು ಹೊಂದಿದೆ.
6.ನಿಲ್ದಾಣಗಳ ಪುನರ್‌ಅಭಿವೃದ್ಧಿ: ರೈಲ್ವೆ ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೊಳಿಸಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ನಿಲ್ದಾಣಗಳಿಗೆ ಹೊಂದಿಕೊಂಡಿರುವ ಜಾಗಗಳನ್ನು ಬಳಸಿಕೊಳ್ಳಲಾಗುವುದು,ಅಲ್ಲದೇ ನಿಲ್ದಾಣಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಹೆಚ್ಚಿಸಲಾಗುವುದು.
ಅಪಘಾತಗಳನ್ನು ತಡೆಯಲುೂನ್ಯ ಅಪಘಾತ ಅಭಿಯಾನ
ಹೊಸದಿಲ್ಲಿ.ಫೆ.25: ರೈಲ್ವೆ ಅಪಘಾತಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಮಹತ್ವದ ಗುರಿಯೊಂದಿಗೆ ಗುರುವಾರ ಮಂಡನೆಯಾದ ರೈಲ್ವೆ ಮುಂಗಡ ಪತ್ರವು ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಬ್ರಾಡ್‌ಗೇಜ್ ಮಾರ್ಗಗಳಲ್ಲಿರುವ ಎಲ್ಲ ಕಾವಲು ರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ನಿವಾರಿಸಲು ಯೋಜನೆಯನ್ನು ಅನಾವರಣಗೊಳಿಸಿದೆ. ಇದಕ್ಕಾಗಿ ವಿನೂತನ ಹಣಕಾಸು ನೆರವು ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.
ಸಚಿವ ಸುರೇಶ ಪ್ರಭು ಅವರು ಪ್ರಕಟಿಸಿರುವ ಕ್ರಿಯಾ ಯೋಜನೆಯು ರೈಲು ಮಾರ್ಗಗಳಲ್ಲಿ ಕಾವಲು ರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ನಿವಾರಿಸುವ ಮತ್ತು ರೈಲು ಢಿಕ್ಕಿ ನಿವಾರಣೆ ವ್ಯವಸ್ಥೆ(ಟಿಸಿಎಎಸ್)ಯನ್ನು ಅಳವಡಿಸುವುದನ್ನು ಒಳಗೊಂಡಿದೆ.ಾವಲು ರಹಿತ ಲೆವೆಲ್ ಕ್ರಾಸಿಂಗ್‌ಗಳು ರೈಲ್ವೆಯ ಪಾಲಿಗೆ ಅತ್ಯಂತ ‘‘ದೊಡ್ಡ ತಲೆನೋವು’’ಆಗಿದ್ದು,ಹೆಚ್ಚಿನ ಅಪಘಾತಗಳು ಈ ಸ್ಥಳಗಳಲ್ಲಿಯೇ ಸಂಭವಿಸುತ್ತವೆ ಎಂದು ಅವರು ಹೇಳಿದರು.ಪಘಾತಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ತನ್ನ ಗುರಿ ಸಾಧನೆಗಾಗಿ ಭಾರತೀಯ ರೈಲ್ವೆಯು ವಿಶ್ವದ ಅತ್ಯುನ್ನತ ರೈಲ್ವೆ ಸಂಸ್ಥೆಗಳಾದ ಜಪಾನಿನ ರೈಲ್ವೆ ಟೆಕ್ನಿಕಲ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಕೊರಿಯಾದ ರೇಲ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಜೊತೆ ಸಂಶೋಧನೆ ಮತ್ತು ಅಭಿವೃದ್ಧಿ ಸಹ ಭಾಗಿತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಪ್ರಭು ತಿಳಿಸಿದರು.
ಖರ್ಚು ಜಾಸ್ತಿ, ಲಾಭ ಕಡಿಮೆ
ಹೊಸದಿಲ್ಲಿ, ಫೆ. 25: ಹಾಲಿ ಹಣಕಾಸು ವರ್ಷದಲ್ಲಿ ರೈಲ್ವೆಯ ಆಪರೇಟಿಂಗ್ ರೇಶಿಯೊ (ಹಣ ಖರ್ಚು ಮಾಡುವ ಅನುಪಾತ) ಉದ್ದೇಶಿತ ಶೇ. 88.5 ರ ಬದಲು ಶೇ. 90 ಆಗಿರುತ್ತದೆ ಎಂದು 2016-17ರ ರೈಲ್ವೆ ಬಜೆಟ್ ಮಂಡಿಸಿದ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಇದನ್ನು ಸರಳ ಮಾತುಗಳಲ್ಲಿ ಹೇಳುವುದಾದರೆ, ರೈಲ್ವೆಯು ಗಳಿಸುವ ಆದಾಯದ ಪ್ರತಿ ಒಂದು ರೂಪಾಯಿಯಲ್ಲಿ 90 ಪೈಸೆಯನ್ನು ಖರ್ಚು ಮಾಡುತ್ತದೆ. ಆಪರೇಟಿಂಗ್ ಅನುಪಾತ ಕಡಿಮೆ ಇದ್ದಷ್ಟು ಲಾಭಾಂಶ ಜಾಸ್ತಿ. 2016-17ರ ಆರ್ಥಿಕ ವರ್ಷದಲ್ಲಿ, ರೈಲ್ವೇಸ್‌ನ ಆಪರೇಟಿಂಗ್ ಅನುಪಾತ ಶೇ.92ಕ್ಕೆ ಏರಲಿದೆ. ಏಳನೆ ವೇತನ ಆಯೋಗದ ಪರಿಣಾಮವೇ ಇದಕ್ಕೆ ಕಾರಣ. 26 ಲಕ್ಷ ರೈಲ್ವೆ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಒಟ್ಟು 28,450 ಕೋಟಿ ರೂ.ನಷ್ಟು ವೇತನ ಏರಿಕೆ ಮಾಡುವಂತೆ ಆಯೋಗ ಶಿಫಾರಸು ಮಾಡಿರುವುದನ್ನು ಸ್ಮರಿಸಬಹುದಾಗಿದೆ.
ಹೊಸ ಆದಾಯ ಮೂಲಗಳು, ವೆಚ್ಚ ಕಡಿತದತ್ತ ಸಚಿವರ ಚಿತ್ತ
ಹೊಸದಿಲ್ಲಿ, ಫೆ. 25: ಮುಂದಿನ ಹಣಕಾಸು ವರ್ಷದಲ್ಲಿ ವೆಚ್ಚಗಳನ್ನು ಕಡಿಮೆ ಮಾಡಲು ಹಾಗೂ ನೂತನ ಆದಾಯ ಮೂಲಗಳನ್ನು ಸೃಷ್ಟಿಸಲು ರೈಲ್ವೆ ಇಲಾಖೆಯು ಯೋಜನೆ ರೂಪಿಸಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಹೇಳಿದ್ದಾರೆ.
""ವೇತನ ಬಿಲ್‌ನಲ್ಲಿ ಆಗುವ ಬೃಹತ್ ಹೆಚ್ಚಳವನ್ನು ಸರಿದೂಗಿಸಲು ಹಾಗೂ ಮಹತ್ವಾಕಾಂಕ್ಷೆಯ ಆಧುನೀಕರಣ ಯೋಜನೆ ಹಳಿತಪ್ಪದಂತೆ ನೋಡಿಕೊಳ್ಳಲು ಇದು ಅಗತ್ಯವಾಗಿದೆ ಎಂದು ಅವರು ಹೇಳಿದರು.ತ್ತಿನ ನಾಲ್ಕನೆ ಅತಿದೊಡ್ಡ ರೈಲ್ವೆ ಜಾಲವನ್ನು ಆಧುನೀಕರಿಸಲು ಐದು ವರ್ಷಗಳಲ್ಲಿ 9.4 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ನರೇಂದ್ರ ಮೋದಿ ಸರಕಾರ ಕಳೆದ ವರ್ಷ ಘೋಷಿಸಿತ್ತು. ಆದರೆ, ಈಗ ಒಂದು ವರ್ಷದ ಬಳಿಕ ಪ್ರಯಾಣ ಮತ್ತು ಸರಕು ಸಾಗಣೆ ಆದಾಯ ಬೆಳವಣಿಗೆ ಕುಂಠಿತಗೊಂಡಿದ್ದು, ರೈಲ್ವೆಯ ಆರ್ಥಿಕತೆ ಮೇಲೆ ಒತ್ತಡ ಬಿದ್ದಿದೆ.ದು ಪರೀಕ್ಷೆಯ ಸಮಯ. ನಾವು ಎರಡು ಪ್ರವಾಹಗಳ ವಿರುದ್ಧ ಈಜು ತ್ತಿದ್ದೇವೆ ಹಾಗೂ ಇದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಮೊದಲನೆ ಯದು, ಅಂತಾರಾಷ್ಟ್ರೀಯ ಆರ್ಥಿಕತೆಯ ಕುಸಿತದಿಂದಾಗಿ ಆರ್ಥಿಕತೆಯ ಮಹತ್ವದ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿರುವ ಕುಂಠಿತ ಬೆಳವಣಿಗೆ ಮತ್ತು ಎರಡನೆಯದು, ಏಳನೆ ವೇತನ ಆಯೋಗದ ಪರಿಣಾಮ’’ ಎಂದು ಪ್ರಭು ಲೋಕಸಭೆಯಲ್ಲಿ ಹೇಳಿದರು.
ಪರಿಸ್ಥಿತಿಯನ್ನು ಸರಿದೂಗಿಸಲು ರೈಲ್ವೆಯು ವೆಚ್ಚಗಳನ್ನು ಕಡಿತಗೊಳಿಸಬೇಕಾಗಿದೆ, ಒಟ್ಟು ಆದಾಯದ ಮೂರನೆ ಎರಡು ಭಾಗವನ್ನು ತಂದುಕೊಡುವ ಸರಕು ಸಾಗಣೆ ವ್ಯವಹಾರವನ್ನು ವಿಸ್ತರಿಸಬೇಕಾಗಿದೆ ಮತ್ತು ರೈಲು ನಿಲ್ದಾಣಗಳನ್ನು ನವೀಕರಣಗೊಳಿಸುವ ಮೂಲಕ ಪ್ರಯಾಣ ದರಯೇತರ ಆದಾಯದ ನೂತನ ಮೂಲಗಳನ್ನು ಅನ್ವೇಷಿಸಬೇಕಾಗಿದೆ ಎಂದರು.
‘‘ನಾವು ಸಾಗಿಸುವ ಸರಕಿನ ವ್ಯಾಪ್ತಿಯನ್ನು ಹಿಗ್ಗಿಸುವುದಕ್ಕಾಗಿ ಹಾಲಿ ನಿಯಮಗಳನ್ನು ಮೀರಿ ನಿಲ್ಲಬೇಕಾಗಿದೆ’’ ಎಂದು ಲೋಕಸಭೆಯಲ್ಲಿ ರೈಲ್ವೆ ಸಚಿವರು ಹೇಳಿದರು.







