ರಾಂಡ್ವಾಂಸ್ಕಾ ಕ್ವಾರ್ಟರ್ ಫೈನಲ್‌ಗೆ
ದೋಹಾ ಓಪನ್ ಟೆನಿಸ್ ಟೂರ್ನಿ
ದೋಹಾ, ಫೆ.25: ಅಗ್ರ ಶ್ರೇಯಾಂಕದ ಆಟಗಾರ್ತಿ ಅಗ್ನೆಸ್ಕಾ ರಾಂಡ್ವಾಂಸ್ಕಾ ದೋಹಾ ಓಪನ್ ಟೆನಿಸ್ ಟೂರ್ನಿಯಲ್ಲಿ ಅಂತಿಮ 8ರ ಘಟ್ಟವನ್ನು ತಲುಪಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮೂರನೆ ಶ್ರೇಯಾಂಕದ ರಾಂಡ್ವಾಂಸ್ಕಾ ರೋಮಾನಿಯದ ಮೊನಿಕಾ ನಿಕುಲೆಸ್ಕೂರನ್ನು 7-5, 6-1 ಸೆಟ್‌ಗಳ ಅಂತರದಿಂದ ಮಣಿಸಿದರು.
ಕಳೆದ ಎರಡು ದಿನಗಳಲ್ಲಿ ಅಂಜೆಲಿಕ್ ಕೆರ್ಬರ್, ಸಿಮೊನಾ ಹಾಲೆಪ್, ಹಾಲಿ ಚಾಂಪಿಯನ್ ಲೂಸಿ ಸಫರೋವಾ, ಪೆಟ್ರಾ ಕ್ವಿಟೋವಾ ಸಹಿತ 9 ಮಂದಿ ಶ್ರೇಯಾಂಕ ಆಟಗಾರ್ತಿಯರು ಟೂರ್ನಿಯಿಂದ ಹೊರ ನಡೆದಿರುವ ಹಿನ್ನೆಲೆಯಲ್ಲಿ ರಾಂಡ್ವಾಂಸ್ಕಾ ಈ ವರ್ಷ ಪ್ರಶಸ್ತಿ ಜಯಿಸುವ ಫೇವರಿಟ್ ಆಟಗಾರ್ತಿಯಾಗಿದ್ದಾರೆ.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕ್ಯಾರೊಲಿನಾ ವೋಝ್ನಿಯಾಕಿ ರಶ್ಯದ ಎಲೆನಾ ವೆಸ್ನಿನಾ ವಿರುದ್ಧ 5-7, 7-5, 3-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಕಳೆದ ಸುತ್ತಿನಲ್ಲಿ ಹಾಲೆಪ್‌ರನ್ನು ಮಣಿಸಿದ್ದ ವೆಸ್ನಿನಾ ಇದೀಗ ಕ್ವಾರ್ಟರ್ ಫೈನಲ್ ತಲುಪಿದರು.
Next Story





