ಟಿಡಿಎಫ್‌ನಿಂದ ಸ್ವರ್ಣ-ವಜ್ರಾಭರಣಗಳ ಪ್ರದರ್ಶನ

ಮಂಗಳೂರು, ಫೆ.25: ವಿಶೇಷ ಹಾಗೂ ಸೊಗ ಸಾದ ಚಿನ್ನ ಹಾಗೂ ವಜ್ರಗಳ ವಿನ್ಯಾಸಭರಿತ ಆಭರಣಗಳಿಗೆ ಹೆಸರುವಾಸಿಯಾಗಿರುವ ಮುಂಬೈಯ ಟಿಡಿಎಫ್ ಡೈಮಂಡ್ ಫ್ಯಾಕ್ಟರಿಯು ಮತ್ತೆ ತನ್ನ ವಿನೂತನ ಸಂಗ್ರಹಗಳೊಂದಿಗೆ ಮಂಗಳೂರು ಹಾಗೂ ಉಡುಪಿಯಲ್ಲಿ ಪ್ರದರ್ಶನ ವನ್ನು ಆಯೋಜಿಸಿದೆ. ಮಂಗಳೂರಿನ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಫೆ.27 ಮತ್ತು 28ರಂದು ಹಾಗೂ ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಮಾ.1 ಮತ್ತು 2ರಂದು ‘ಮುಂಬೈಯ ಶೈಲಿ... ದಕ್ಷಿಣ ಭಾರತದ ಗುಣಮಟ್ಟ’ ಎಂಬ ಶೀರ್ಷಿಕೆಯಡಿ ಪ್ರದರ್ಶನ ನಡೆಯಲಿದೆ. ಟಿಡಿಎಫ್- ಚಿನ್ನ ಮತ್ತು ವಜ್ರಾ ಭರಣಗಳು ತಮ್ಮ ನಾಲ್ಕು ಖ್ಯಾತ ಸಬ್ ಬ್ರಾಂಡ್‌ಗಳೊಂದಿಗೆ ಪ್ರದರ್ಶನಗೊಳ್ಳಲಿವೆ.
1. ರೊಝಾನಾ: ನಿತ್ಯ ಬಳಕೆಯ ಕಡಿಮೆ ತೂಕದ ಆಭರಣಗಳು.
2. ರೋಯಲ್ ಹೆರಿಟೇಜ್: ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ನಕ್ಷಿ ಟೆಂಪಲ್ ಗೋಲ್ಡ್ ಜ್ಯುವೆಲ್ಲರಿ ಮತ್ತು ಅನ್‌ಕಟ್ ಡೈಮಂಡ್ ಜಾದೂ ಜ್ಯುವೆಲ್ಲರಿಗಳು ನಮ್ಮ ದೇಶದ ಶ್ರೀಮಂತ, ಅಪರೂಪದ ಹಾಗೂ ರಾಯಲ್ ಸಂಸ್ಕೃತಿಯನ್ನು ಪ್ರತಿಬಿಂಬಿಸಲಿವೆ.
3. ಶುಭ್: ನಿಶ್ಚಿತಾರ್ಥ ಸಂಭ್ರಮದಿಂದ ಹಿಡಿದು ಮದುವೆ ಹಾಗೂ ಇತರ ಶುಭ ಸಂದರ್ಭಗಳಲ್ಲಿ ಧರಿಸಬಹುದಾದ ಆಲಂಕಾರಿಕ ಚಿನ್ನ ಮತ್ತು ವಜ್ರದ ಆಭರಣಗಳ ಸಂಗ್ರಹ ಶುಭ ಸಂದರ್ಭದ ಸಂತಸವನ್ನು ಇಮ್ಮಡಿಗೊಳಿಸಲಿದೆ.
4. ತಮನ್ನಾ: ಸೃಜನಶೀಲ ವಿನ್ಯಾಸಗಳಿಂದ ಕೂಡಿದ ಅಸಾಧಾರಣ ಮತ್ತು ಕಲಾತ್ಮಕ ಆಭರಣಗಳ ಸಂಗ್ರಹ. ವಜ್ರ ಮತ್ತು ಚಿನ್ನದ ಆಭರಣಗಳ ರಿಟೇಲ್ ಸಮೂ ಹವನ್ನು ಹೊಂದಿರುವ ಟಿಡಿಎಫ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯು ಬಾಂದ್ರಾ, ಅಂಧೇರಿ ಮತ್ತು ವಾಶಿ ಯಲ್ಲಿ ರಿಟೇಲ್ ಔಟ್‌ಲೆಟ್‌ಗಳನ್ನು ಹೊಂದಿದೆ. 1999ರಲ್ಲಿ ಟಿಡಿಎಫ್- ಡೈಮಂಡ್ ಫ್ಯಾಕ್ಟರಿ ಆರಂಭಗೊಂಡಿದ್ದು, ಸಂಸ್ಥೆಯು ಉತ್ಪಾದನಾ ಘಟಕ ಮತ್ತು ಸಗಟು ವ್ಯಾಪಾರವನ್ನು ಹೊಂದಿದೆ. ತಮ್ಮ ಗ್ರಾಹಕರಿಗೆ ಒದಗಿಸಿದ ಉತ್ತಮ ಗುಣಮಟ್ಟ ಮತ್ತು ವಿನ್ಯಾಸಗಳ ಮೂಲಕ ಈ ಕ್ಷೇತ್ರದಲ್ಲಿ ಕಂಪೆನಿ ಉತ್ತಮ ಹೆಸರನ್ನು ಗಳಿಸಿದೆ. ಸಾಂಪ್ರದಾಯಿಕ ದಕ್ಷಿಣ ಭಾರತೀಯ ಮತ್ತು ಸಮಕಾಲೀನ ಆಭರಣಗಳ ಸಮಪ್ರಮಾಣದ ಮಿಶ್ರಣದಿಂದ ಕೂಡಿದ ತನ್ನ ವಿಶೇಷ ಹಾಗೂ ಸೊಗಸಾದ ವಜ್ರ ಹಾಗೂ ಚಿನ್ನಾಭರಣಗಳ ವಿನ್ಯಾಸಗಳಿಗೆ ಟಿಡಿಎಫ್ ಹೆಸರುವಾಸಿಯಾಗಿದೆ. ಟಿಡಿಎಫ್ ಹೊಸ ಚಿನ್ನ ಖರೀದಿಯ ವೇಳೆ ಹಳೆಯ ಚಿನ್ನಕ್ಕೆ ಸಂಪೂರ್ಣ ವೌಲ್ಯವನ್ನು ನೀಡಲಿದೆ. ಮಾತ್ರವಲ್ಲದೆ, ಗ್ರಾಹಕರು ಮಾಸಿಕ ಆಕರ್ಷಕ ‘ಬಂಧನ’ ಯೋಜನೆಯಡಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂದು ಕಂಪೆನಿಯ ಪ್ರಕಟನೆ ತಿಳಿಸಿದೆ. ಗ್ರಾಹಕರು ತಮ್ಮ ಆಸಕ್ತಿ ಹಾಗೂ ಅಭಿರುಚಿಯ ಸ್ವರ್ಣ ಹಾಗೂ ವಜ್ರಾಭರಣಗಳ ವಿಶೇಷ ಮುನ್ನೋಟ ಹಾಗೂ ಬುಕ್ಕಿಂಗ್‌ಗಾಗಿ ಮೊ.ಸಂಖ್ಯೆ 9920288089 ಅನ್ನು ಸಂಪರ್ಕಿಸಬಹುದು.
ಕದ್ರಿ ಕಂಬಳದಲ್ಲಿ ಕಚೇರಿ ಆರಂಭ
ಟಿಡಿಎಫ್ ಶೀಘ್ರದಲ್ಲೇ ಕದ್ರಿ ಕಂಬಳದಲ್ಲಿ ಮಂಗಳೂರು ಕಚೇರಿಯನ್ನು ತೆರೆಯಲಿದೆ. ಆ ಮೂಲಕ ಸಂಸ್ಥೆಯು ತನ್ನ ಸ್ವರ್ಣ ಹಾಗೂ ವಜ್ರಾಭರಣಗಳ ಅಪಾರ ಸಂಗ್ರಹದ ನಿರಂತರ ಪ್ರದರ್ಶನದ ಜತೆ ಗ್ರಾಹಕರ ಜತೆ ನಿರಂತರ ಸಂಪರ್ಕ ಕಲ್ಪಿಸಲು ವೇದಿಕೆಯನ್ನು ಒದಗಿಸಲಿದೆ. 2016ರ ಫೆಬ್ರವರಿ ಸೇರಿದಂತೆ ಎಪ್ರಿಲ್, ಸೆಪ್ಟಂಬರ್ ಹಾಗೂ ಡಿಸೆಂಬರ್‌ನಲ್ಲೂ ಮೆಗಾ ಪ್ರದರ್ಶನಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಕದ್ರಿ ಕಂಬಳದಲ್ಲಿ ತೆರೆಯಲಾಗುವ ಕಚೇರಿಯು ಗ್ರಾಹಕರ ಯಾವುದೇ ದೂರುಗಳನ್ನು ಪರಿಹರಿಸುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಟಿಡಿಎಫ್- ಡೈಮಂಡ್ ಫ್ಯಾಕ್ಟರಿ ಕಂಪೆನಿಯ ಮುಖ್ಯಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





