Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವಿಶ್ವಸಂಸ್ಥೆ ಕ್ರಮ ಅಭಿವೃದ್ಧಿ...

ವಿಶ್ವಸಂಸ್ಥೆ ಕ್ರಮ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿರಲಿ: ಭಾರತ

ವಾರ್ತಾಭಾರತಿವಾರ್ತಾಭಾರತಿ25 Feb 2016 11:54 PM IST
share

ವಿಶ್ವಸಂಸ್ಥೆ, ಫೆ.25: ವಿಶ್ವದಲ್ಲಿ ಬಡತನ ನಿರ್ಮೂಲನೆ ಕುರಿತ ಗಮನ ವಿಶ್ವಸಂಸ್ಥೆಯ ಎಲ್ಲ ಕ್ರಮಗಳ ಪ್ರಮುಖ ಗುರಿಯಾಗಿಯೇ ಮುಂದುವರಿಯಬೇಕು. ಇಂಥ ಯೋಜನೆಗಳು ಈ ದೇಶಗಳ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿರಬೇಕು ಎಂದು ಭಾರತ ಆಗ್ರಹಿಸಿದೆ. ಯಾವುದೇ ಸಂದರ್ಭದಲ್ಲಿ ಬೇರೆಡೆಯಿಂದ ಯೋಜನೆಗಳನ್ನು ಹೇರುವುದು ಸರಿಯಲ್ಲ ಎಂದು ಎಚ್ಚರಿಸಿದೆ.

ಬಡತನ ನಿರ್ಮೂಲನೆ ದೃಷ್ಟಿಕೋನ ವಿಶ್ವಸಂಸ್ಥೆಯ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಹೃದಯ ಭಾಗವಾಗಿಯೇ ಉಳಿಯಬೇಕು. ಈ ಹಿಂದಿನ ಮಾರ್ಗಸೂಚಿಯನ್ನೇ ನಿರ್ವಹಿಸಿಕೊಂಡು ಬರಬೇಕೆಂದು ವಿಶ್ವಸಂಸ್ಥೆಯ ಭಾರತೀಯ ಮಿಷನ್ ನ ಕೌನ್ಸಿಲರ್  ಅಮಿತ್  ನಾರಂಗ್ ಅಭಿಪ್ರಾಯಪಟ್ಟಿದ್ದಾರೆ.

ಬಡತನದ ಸಮಸ್ಯೆಗಳ ಮೇಲೆ ನೇರ ದಾಳಿ ಮಾಡುವಂತಹ ಕಾರ್ಯಕ್ರಮಗಳು ವಿಶ್ವಸಂಸ್ಥೆ ಕಡೆಯಿಂದ ಬರಬೇಕು ಎಂದು ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಅಧಿವೇಶನದಲ್ಲಿ ‘ಅಭಿವೃದ್ಧಿ ವಿಭಾಗಕ್ಕೆ ಕಾರ್ಯಚಟುವಟಿಕೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು. ಸಿಒಎಸ್‌ಒಸಿ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಅವರು, ಬಡತನ ನಿರ್ಮೂಲನೆ ಕ್ಷೇತ್ರದಲ್ಲಿ ಕಳೆದ 70 ವರ್ಷಗಳಲ್ಲಿ ಅಭಿವೃದ್ಧಿಯಾಗಿ ದ್ದರೂ, ಇದು 20ನೆ ಶತಮಾನದ ಅಪೂರ್ಣ ಕಾರ್ಯಸೂಚಿಯಾಗಿಯೇ ಉಳಿದಿದೆ ಎಂದರು.

ವಿಶ್ವ ಭಿನ್ನವಾಗಿದೆ. ಎಲ್ಲ ಸಮಸ್ಯೆಗೂ ಒಂದೇ ಪರಿಹಾರ ಎಂಬ ಸೂತ್ರ ಇಲ್ಲಿ ಫಲಿಸದು. 2030ರ ಕಾರ್ಯಸೂಚಿಯ ಅನ್ವಯ, ಅಭಿವೃದ್ಧಿಗೆ ವಿಭಿನ್ನ ದೇಶಗಳಿಗೆ ವಿಭಿನ್ನ ಸನ್ನಿವೇಶಗಳನ್ನು ಗಮನದಲ್ಲಿ ಇರಿಸಬೇಕಾಗುತ್ತದೆ ಎಂದರು. ಮಾನವೀಯ ಚಟುವಟಿಕೆಗಳಿಗೆ ನೀಡುವ ನೆರವನ್ನು ಹೆಚ್ಚಿಸುವ ಕ್ರಮವನ್ನು ಭಾರತ ಶ್ಲಾಘಿಸುತ್ತದೆ. ಮಾನವೀಯ ಹಾಗೂ ಅಭಿವೃದ್ಧಿ ನಡುವಿನ ಅಂತರವನ್ನು ನಿವಾರಿಸಲು ಅದು ಹೇಗೆ ಸಹಕಾರಿಯಾಗುತ್ತದೆ ಎನ್ನುವುದನ್ನು ಮೌಲ್ಯಮಾಪನ ಮಾಡುತ್ತದೆ ಎಂದು ವಿವರಿಸಿದರು.

ಉತ್ತರ ಕೊರಿಯ ವಿರುದ್ಧ ದಿಗ್ಬಂಧನ ಮುಂದುವರಿಕೆಗೆ ಕರಡು ನಿರ್ಣಯ ವಿಶ್ವಸಂಸ್ಥೆ, ಫೆ.25: ಉತ್ತರ ಕೊರಿಯಾ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಧಿಸಿರುವ ದಿಗ್ಬಂಧನವನ್ನು ವಿಸ್ತರಿಸುವ ಸಂಬಂಧದ ಕರಡು ನಿರ್ಣಯಕ್ಕೆ ಅಮೆರಿಕ ಹಾಗೂ ಚೀನಾ ಒಪ್ಪಿಕೊಂಡಿವೆ. ಉತ್ತರ ಕೊರಿಯಾ ಇತ್ತೀಚೆಗೆ ಅಣ್ವಸ್ತ್ರ ಪರೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇಷ್ಟರಲ್ಲೇ ಈ ಕರಡು ನಿರ್ಣಯವನ್ನು ಮತಕ್ಕೆ ಹಾಕಲಾಗುವುದು ಎಂದು ಮಂಡಳಿಯ ರಾಜತಾಂತ್ರಿಕರು ಬುಧವಾರ ಪ್ರಕಟಿಸಿದ್ದಾರೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಬ್ಬರು ರಾಜತಂತ್ರಜ್ಞರ ಅನ್ವಯ, ವಾಷಿಂಗ್ಟನ್ ಹಾಗೂ ಬೀಜಿಂಗ್ ಈ ಕರಡು ನಿರ್ಣಯ ಸಂಬಂಧ ಒಪ್ಪಂದಕ್ಕೆ ಬಂದಿವೆ. ಇದನ್ನು 15 ಮಂದಿ ಸದಸ್ಯರ ಭಧ್ರತಾ ಮಂಡಳಿಯ ಮುಂದೆ ಸದ್ಯದಲ್ಲೇ ಒಯ್ಯಲಾಗುವುದು. ಎರಡು ವಿಟೊ ಅಧಿಕಾರ ಇರುವ ದೇಶಗಳು ಈಗಾಗಲೇ ಈ ಕುರಿತ ಒಪ್ಪಂದಕ್ಕೆ ಬಂದಿದ್ದು, ಜನವರಿ 6ರಂದು ಉತ್ತರ ಕೊರಿಯ ನಾಲ್ಕನೇ ಅಣ್ವಸ್ತ್ರ ಪರೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಈ ಕರಡು ನಿರ್ಣಯ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.
‘ಅದು ತರ್ಕಬದ್ಧ, ಪುರಾವೆಗಳಿರುವ, ಸುದೀರ್ಘ ಹಾಗೂ ಪೂರ್ಣ ಕರಡು ನಿರ್ಣಯವಾಗಿದೆ. ಸದ್ಯದಲ್ಲೇ ಅದನ್ನು ಆಂಗೀಕರಿಸುವ ಸಾಧ್ಯತೆ ಇದೆ ಎಂದು ಹಿರಿಯ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ. ಎರಡು ದೇಶಗಳ ನಡುವೆ ಹಲವು ತಡೆಯಾಗುವ ಮಹತ್ವದ ಅಂಶಗಳಿದ್ದವು. ಇವುಗಳ ಸಂಬಂಧ ಇದೀಗ ಉಭಯ ದೇಶಗಳ ನಡುವೆ ಒಂದು ಒಪ್ಪಂದಕ್ಕೆ ಬರಲಾಗಿದೆ ಎಂದು ವಿವರಿಸಿದ್ದಾರೆ. ಕರಡು ನಿರ್ಣಯದ ಅನ್ವಯ ಹಲವು ವ್ಯಕ್ತಿಗಳ ಹಾಗೂ ಘಟಕಗಳ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ. ಉತ್ತರ ಕೊರಿಯದ ಅಣುಶಕ್ತಿ ಏಜೆನ್ಸಿ ಕೈಗಾರಿಕೆ ಸಚಿವಾಲಯ ಹಾಗೂ ರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಏಜೆನ್ಸಿ (ನಾಡಾ) ಕಳೆದ ಫೆಬ್ರವರಿಯಲ್ಲಿ ನಡೆದ ರಾಕೆಟ್ ಉಡಾವಣೆಯ ಜವಾಬ್ದಾರಿ ಹೊತ್ತಿದ್ದು, ದಿಗ್ಬಂಧನಕ್ಕೆ ಒಳಗಾಗುವ ಸಂಸ್ಥೆಗಳ ಪಟ್ಟಿಯಲ್ಲಿ ಇದು ಸೇರಲಿದೆ ಎಂದು ದಕ್ಷಿಣ ಕೊರಿಯಾದ ಯಾನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X