ಉಳ್ಳಾಲದಲ್ಲಿ ಗೇರುಬೆಳೆ ಕ್ಷೇತ್ರೋತ್ಸವ: ‘ಕೃಷಿಯಲ್ಲಿ ಹೊಸ ವಿಧಾನಗಳ ಅಳವಡಿಕೆ ಅಗತ್ಯ’
ಮಂಗಳೂರು, ಫೆ.25: ಗೇರುಬೆಳೆಗೆ ಅಂತಾ ರಾಷ್ಟ್ರೀಯ ಮಾರುಕಟ್ಟೆ ಇದೆ. ಭಾರತದಲ್ಲಿ ಕಚ್ಚಾ ಗೇರುಬೀಜದ ಕೊರತೆ ಇದ್ದು, ಈ ನಿಟ್ಟಿನಲ್ಲಿ ಗೇರುಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಹೊಸತಳಿಗಳನ್ನು, ಹೊಸ ವಿಧಾನಗಳನ್ನು ಅಳವಡಿ ಸಿಕೊಳ್ಳಬೇಕಾಗಿದೆ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾನಿಲಯದ ಕೃಷಿ ವಿ್ತರಣಾ ನಿರ್ದೇಶಕ ಡಾ.ಟಿ.ಎಚ್.ಗೌಡ ತಿಳಿಸಿದು.
ಅವರು ಇಂದು ಉಳ್ಳಾಲದ ಕಾಪಿಕಾಡ್‌ನಲ್ಲಿರುವ ಕೃಷಿ ಮತ್ತು ತೋಟಗಾರಿಕಾ ಸಂಶೋ ಧನಾ ಕೇಂದ್ರ, ಶಿವಮೊಗ್ಗ ಕೃಷಿ ಮತ್ತು ತೋಟ ಗಾರಿಕಾ ವಿಶ್ವ ವಿದ್ಯಾನಿಲಯ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಗೇರು ಕೃಷಿ ತರಬೇತಿ ಮತ್ತು ಗೇರುಬೆಳೆ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾಡು ಉತ್ಪತ್ತಿಯಾಗಿದ್ದ ಗೇರುಬೆಳೆ ಇತ್ತೀಚಿನ ದಿನಗಳಲ್ಲಿ ಕೃಷಿಕರಿಗೆ ಆಶಾದಾಯಕ ಬೆಳೆಯಾಗಿ ಪರಿವರ್ತನೆಯಾಗಿದೆ. ಪ್ರಸಕ್ತ ಅಂತಾರಾಷ್ಟ್ರೀಯ ಬೆಳೆಯಾಗಿರುವ ಗೇರುಕೃಷಿಗೆ ಭವಿಷ್ಯದಲ್ಲಿ ಇನ್ನಷ್ಟು ಬೇಡಿಕೆ ಉಂಟಾಗುವ ಸಾಧ್ಯತೆ ಇದೆ. ಭಾರತದಲ್ಲಿರುವ ಗೇರುಬೀಜ ಕಾರ್ಖಾನೆಗಳಿಗೆ ಬೇಕಾದ ಅರ್ಧದಷ್ಟು ಕಚ್ಚಾ ಗೇರುಬೀಜಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಕಡಿಮೆ ಅಂತರದಲ್ಲಿ ಗೇರು ಸಸಿಗಳನ್ನು ನೆಟ್ಟು ಹೆಚ್ಚು ಬೇಳೆ ತೆಗೆಯಲು ಸಾಧ್ಯವಾಗುವಂತಹ ಸುಧಾರಿತ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ವೈಜ್ಞಾನಿಕ ರೀತಿಯಲ್ಲಿ ಗೇರು ಕೃಷಿಯನ್ನು ಕೈಗೊಂಡರೆ ಇನ್ನಷ್ಟು ಕಚ್ಚಾ ಗೇರುಬೀಜವನ್ನು ದೇಶದ ಆಂತರಿಕವಾಗಿ ಬೆಳೆದು ಕಾರ್ಖಾನೆಗಳಿಗೆ ಪೂರೈಕೆ ಮಾಡಬಹುದಾಗಿದೆ. ಕೃಷಿಕರಿಗೆ ಲಾಭದಾಯಕವಾಗಿ ಹಾಗೂ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾಗಿದೆ ಎಂದು ಟಿ.ಎಚ್.ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಸಾಧಕರಾದ ಮೈಕಲ್ ರೊಡ್ರಿಗಸ್, ಐತಪ್ಪ ನಾಯ್ಕ, ಕನ್ಯೊಟ್ ಅರೊನ್ಹ, ಶ್ಯಾಮಸುಂದರ್ ಶಾಸ್ತ್ರಿ, ಅಬ್ದುಲ್ ಅಝೀಝ್, ಶ್ಯಾಮಲಾ ಶಾಸ್ತ್ರಿಯವರನ್ನು ಸನ್ಮಾನಿಸಲಾಯಿತು. ‘ಗೇರುತೋಟದಲ್ಲಿ ಅಂತರ್ ಬೆಳೆಯಾಗಿ ಪೊದೆ ಮೆಣಸು’ ಮತ್ತು ‘ಗೇರು ಬೆಳೆಯ ಉತ್ಪಾದನಾ ತಾಂತ್ರಿಕತೆಗಳು’ ಎಂಬ ಎರಡು ಕೈಪಿಡಿಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ವಿಜ್ಞಾನಿಗಳಾದ ಡಾ.ಎಂ.ಗಂಗಾಧರ ನಾಯಕ್, ಡಾ.ಎಸ್.ಯು.ಪಾಟೀಲ್, ಬ್ರಹ್ಮಾವರ ತೋಟಗಾರಿಕಾ ಕೇಂದ್ರದ ಸಹಪ್ರಾಧ್ಯಾಪಕ ಡಾ.ಸುಧೀರ್ ಕಾಮತ್ ಕೆ.ವಿ., ಸಂಯೋಜಕ ಡಾ.ಬಿ.ಧನಂಜಯ, ಸಹ ಪ್ರಾಧ್ಯಾಪಕ ಡಾ.ಭಾಗೀರಥಿ, ದ.ಕ. ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೇಶ್ ಎಚ್.ಆರ್. ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಲಕ್ಷ್ಮಣ ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಿವಿಧ ಗೇರುತಳಿಯ ಗೇರುಬೀಜ ಹಾಗೂ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಗೇರು ಕೃಷಿಗೆ ಸಂಬಂ ಧಿಸಿದಂತೆ ರೈತರಿಗೆ ಮಾಹಿತಿ ನೀಡುವ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.







