ಸುಳ್ಳು ಭಾಷಣ ಮಾಡಿದ ರಾಜೀನಾಮೆ ನೀಡಲಿ: ವೆಮುಲಾ ತಾಯಿ ಗುಡುಗು

ನವದೆಹಲಿ: ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಘಟನೆ ಬಗ್ಗೆ ಸಂಸತ್ತಿನಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮತಿ ಇರಾನಿ ಮಾಡಿದ ಭಾಷಣ ಸುಳ್ಳಿನ ಕಂತೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮೃತ ವಿದ್ಯಾರ್ಥಿಯ ತಾಯಿ ಆಗ್ರಹಿಸಿದ್ದಾರೆ.
"ನಟನೆ ಮಾಡಲು ಇದು ಟಿವಿ ವಾಹಿನಿಯಲ್ಲ; ಇದು ನಮ್ಮ ಜೀವನದ ಪ್ರಶ್ನೆ. ನಿಮಗೆ ತಾಕತ್ತಿದ್ದರೆ, ಸತ್ಯಾಂಶವನ್ನು ಬಯಲಿಗೆಳೆಯಿರಿ. ಅದನ್ನು ತಿರುಚಬೇಡಿ" ಎಂದು ಅವರು ಗುಡುಗಿದ್ದಾರೆ.
ಜನವರಿ 17ರಂದು ಕೇಂದ್ರೀಯ ವಿವಿ ವಿದ್ಯಾರ್ಥಿ ನಿಲಯ ಕೊಠಡಿಯಲ್ಲಿ ಮೆಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ರಾಜಕೀಯ ಬಿರುಗಾಳಿಗೆ ಕಾರಣವಾಗಿತ್ತು.
"ಸಚಿವೆಯ ಪತ್ರ ತಮ್ಮ ಮಗ ಸೇರಿದಂತೆ ವಿದ್ಯಾರ್ಥಿಗಳನ್ನು ಉಗ್ರರು ಎಂದು ಬಣ್ಣಿಸಿದೆ. ನನ್ನ ಮಗ ಹೇಗೆ ಭಯೋತ್ಪಾದಕ ಎನ್ನುವುದು ನನಗೆ ಗೊತ್ತಾಗಬೇಕು. ನೀವು ಕೂಡಾ ಒಬ್ಬ ತಾಯಿಯೇ? ಮಗನನ್ನು ಉಗ್ರಗಾಮಿ ಎಂದು ಕರೆದರೆ ಎಷ್ಟು ನೋವಾಗುತ್ತದೆ ಎಂದು ತಾಯಿಗೆ ಮಾತ್ರ ಗೊತ್ತಾಗುತ್ತದೆ ಎಂದು ಚಾಟಿ ಬೀಸಿದ್ದಾರೆ.
ವಿಚ್ಛೇದಿತ ಮಹಿಳೆಯಾದ ರಾಧಿಕಾ, ಟೈಲರ್ ವೃತ್ತಿ ಮಾಡಿಕೊಂಡು ಮೂವರು ಮಕ್ಕಳನ್ನು ಬೆಳೆಸಿದ್ದರು.





