Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕನ್ಹಯ್ಯಾ ಪ್ರಕರಣ ದೇಶದ್ರೋಹವಾಗುವುದಿಲ್ಲ...

ಕನ್ಹಯ್ಯಾ ಪ್ರಕರಣ ದೇಶದ್ರೋಹವಾಗುವುದಿಲ್ಲ : ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ

ವಾರ್ತಾಭಾರತಿವಾರ್ತಾಭಾರತಿ27 Feb 2016 11:06 AM IST
share
ಕನ್ಹಯ್ಯಾ ಪ್ರಕರಣ ದೇಶದ್ರೋಹವಾಗುವುದಿಲ್ಲ : ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ

ಹೊಸದಿಲ್ಲಿ: ‘‘ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧದ ಪ್ರಕರಣವನ್ನು ದೇಶದ್ರೋಹವೆಂದು ಪರಿಗಣಿಸುವುದು ಸಾಧ್ಯವಿಲ್ಲ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಯಾವುದಾದರೂ ಒಂದು ಮೂಲೆಯಲ್ಲಿ ಯಾವತ್ತೂ ಯಾರಾದರೂ ಏನನ್ನಾದರೂ ಹೇಳುತ್ತಲೇ ಇರುತ್ತಾರೆ. ಇದರಿಂದ ನಮಗೆ ಏನಾದರೂ ತೊಂದರೆಯಾಗುತ್ತದೆಯೇ? ಕೇವಲ ಘೋಷಣೆಗಳನ್ನು ಕೂಗುವುದರಿಂದ ನಮಗೆ ಏನು ತೊಂದರೆಯಾಗುತ್ತದೆ? ನನಗಿದು ಹಾಸ್ಯಾಸ್ಪದವೆನಿಸುತ್ತದೆ." ಹೀಗೆಂದು ಹೇಳಿದವರು 1995ರಲ್ಲಿ ದೇಶದ್ರೋಹದ ವಿಚಾರದ ಪ್ರಕರಣವೊಂದರಲ್ಲಿ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟಿನ ಅಂದಿನ ಇಬ್ಬರು ನ್ಯಾಯಾಧೀಶರಲ್ಲೊಬ್ಬರಾದ ಜಸ್ಟಿಸ್ ಫೈಝಾನುದ್ದೀನ್. ಇವರು ಅಂದು ಜಸ್ಟಿಸ್ ಆನಂದ್ ಅವರ ಜತೆಗೂಡಿ ಬಲವಂತ್ ಸಿಂಗ್ ಹಾಗೂ ಪಂಜಾಬ್ ರಾಜ್ಯದ ನಡುವಣ ಪ್ರಕರಣದ ತೀರ್ಪು ನೀಡಿದ್ದರು.

ದಿಲ್ಲಿ ಪೊಲೀಸರು ಕನ್ಹಯ್ಯನನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿದ ಕ್ರಮದ ಬಗ್ಗೆ ಪರಸ್ಪರ ವೈರುದ್ಧ್ಯದ ಅಭಿಪ್ರಾಯಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸಂಪರ್ಕಿಸಿದಾಗಜಸ್ಟಿಸ್ ಫೈಝಾನುದ್ದೀನ್ ಮತ್ತೆ ಹೀಗೆ ಪ್ರತಿಕ್ರಿಯಿಸಿದರು ‘‘ಪ್ರತಿಯೊಂದು ವಿಷಯವೂ ಇಲ್ಲಿ ಸುಪ್ರೀಂ ಕೋರ್ಟಿನಿಂದ ಹಿಡಿದು ಸಂಸತ್ತಿನವರೆಗೂ ಹೋಗುತ್ತದೆ. ಇದು ಅರ್ಥಹೀನವಾದರೂ ಪ್ರತಿಯೊಬ್ಬರೂ ಇದರಲ್ಲಿ ಶಾಮೀಲಾಗುತ್ತಾರೆ. ನಾನು ಹಿಂದಿನ ಕಾಲದ ವ್ಯಕ್ತಿ ಹಾಗೂ ಚಿಂತನೆ ಹೊಂದಿದವನಾದರೂ ಈಗ ನಡೆಯುತ್ತಿರುವುದನ್ನು ನಾನು ಒಪ್ಪುವುದಿಲ್ಲ.’’


1995ರಲ್ಲಿ ಇವರು ತೀರ್ಪು ನೀಡಿದ ಪ್ರಕರಣ ಇಂದಿರಾ ಗಾಂಧಿಯವರ ಹತ್ಯೆ 1984ರ ಅಕ್ಟೋಬರ್ 31ರಂದು ನಡೆದ ಕೆಲವೇ ಗಂಟೆಗಳಲ್ಲಿ ಚಂಡೀಗಢದಲ್ಲಿ ಬಲವಂತ್ ಸಿಂಗ್ ಹಾಗೂ ಆತನ ಸಹವರ್ತಿದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಬಗ್ಗೆಯಾಗಿತ್ತು. ಆಗ ಅವರು ‘ಖಲಿಸ್ತಾನ್ ಜಿಂದಾಬಾದ್’ ಮುಂತಾದ ಘೋಷಣೆಗಳನ್ನು ಕೂಗಿದ್ದರೆನ್ನಲಾಗಿದೆ.


ತನ್ನ ತೀರ್ಪನ್ನು ನೀಡಿದ್ದ ಸುಪ್ರೀಂ ಕೋರ್ಟಿನ ಪೀಠವು ‘‘ಒಂದಿಬ್ಬರು ಕೇವಲ ಒಂದೆರಡು ಘೋಷಣೆಗಳನ್ನು ಕೂಗಿದ ಮಾತ್ರಕ್ಕೆ ಅದು ದೇಶಕ್ಕೆ ಬೆದರಿಕೆಯುಂಟು ಮಾಡುವುದಿಲ್ಲ.ಕೆಲವೊಮ್ಮ ಅತ್ಯಂತ ಸೂಕ್ಷ್ಮಮತಿಗಳಾಗಿರುವುದು ತೊಂದರೆಗೆ ಕಾರಣವಾಗಬಹುದು,’’ಎಂದು ಹೇಳಿತ್ತು.


‘‘ನಾನು ಕೂಡ ಪಾಕಿಸ್ತಾನ್ ಜಿಂದಾಬಾದ್’ ನಂತಹ ಘೊಷಣೆಯನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಇಲ್ಲಿ ಕ್ರಮ ಕೈಗೊಳ್ಳಬಹುದಾದರೂ ಇದನ್ನು ದೇಶದ್ರೋಹವೆನ್ನಲು ಸಾಧ್ಯವಿಲ್ಲ,’’ಎಂದರು. ‘‘ಜನರು ಅಫ್ಝಲ್ ಗುರುವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರೆ ಅಥವಾ ಆತನ ಗಲ್ಲು ಶಿಕ್ಷೆಯನ್ನು ಖಂಡಿಸಿದರೆ, ಖಂಡಿಸಲಿ ಬಿಡಿ, ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿ’’ಎಂದು ಅವರು ಹೇಳಿದರು.


ದಿಲ್ಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿಯವರನ್ನು ‘‘ಒಂದು ದಿನ ಏನನ್ನೋ ಹೇಳಿ, ಮತ್ತೊಂದು ದಿನ ಬೇರೆ ಏನನ್ನೋ ಹೇಳುವುದಕ್ಕೆ’’ ಟೀಕಿಸಿದ ಮಾಜಿ ನ್ಯಾಯಾಧೀಶ ‘‘ಕಾನೂನು ಹಾಗೇನು ? ಆರೋಪ ಮಾಡುವವರು ಅದನ್ನು ಸಾಬೀತು ಪಡಿಸಬೇಕು,’’ಎಂದರು.
ಇಂತಹುದೇ ವಾದವನ್ನು ಮಧ್ಯಪ್ರದೇಶ ಲೋಕಾಯುಕ್ತರು ಕೂಡ ವ್ಯಕ್ತಪಡಿಸಿದ್ದಾರೆ. ‘‘ಇಂತಹ ಘೋಷಣೆಗಳನ್ನು ಕಡೆಗಣಿಸದೇ ಇರುವುದರಿಂದ ನಾವು ಅವರಿಗೆ ಅನಗತ್ಯ ಮಹತ್ವ ನೀಡಿದ್ದೇವೆ. ಯಾರು ಕೂಡ ಜೆಎನ್‌ಯು ಹಗರಣವನ್ನು ಗಮನಕ್ಕೆ ತೆಗೆದುಕೊಳ್ಳದೇ ಹೋಗಿದ್ದರೆ ಏನೂ ನಡೆಯುತ್ತಿರಲಿಲ್ಲ,’’ಎಂಬ ಅಭಿಪ್ರಾಯವೂ ಕೇಳಿ ಬಂತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X