ದುಬೈ ಟೆನಿಸ್ ಚಾಂಪಿಯನ್‌ಶಿಪ್:ವಾವ್ರಿಂಕ ಫೈನಲ್‌ಗೆ

ದುಬೈ,ಫೆ.27: ಇಲ್ಲಿ ನಡೆಯತ್ತಿರುವ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ವಿಸ್‌ನ ಸ್ಟಾನಿಸ್ಲಾಸ್ ವಾವ್ರಿಂಕ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸ್ವಿಸ್‌ನ ವಾವ್ರಿಂಕ ಅವರು ಎದುರಾಳಿ ನಿಕ್ ಕಿರ್ಗಿಯೊಸ್ ಬೆನ್ನುನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಫೈನಲ್‌ಗೆ ಪ್ರವೇಶಿಸಿದರು. ಕಿರ್ಗಿಯೊಸ್ ಗಾಯಾಳು ನಿವೃತ್ತಿಯಾಗುವಾಗ ವಾವ್ರಿಂಕ 6-4, 3-0 ಸೆಟ್‌ಗಳ ಮುನ್ನಡೆಯಲ್ಲಿದ್ದರು.
ವಾವ್ರಿಂಕ ಪ್ರಶಸ್ತಿ ಸುತ್ತಿನಲ್ಲಿ ಶ್ರೇಯಾಂಕರಹಿತ ಆಟಗಾರ ಮಾರ್ಕೊಸ್ ಬಾಘ್‌ಡಾಟಿಸ್‌ರನ್ನು ಎದುರಿಸಲಿದ್ದಾರೆ. ಜನವರಿಯಲ್ಲಿ ಚೆನ್ನೈನಲ್ಲಿ ನಡೆದ ಚೆನ್ನೈ ಓಪನ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ್ದ ವಾವ್ರಿಂಕ ಈ ವರ್ಷ ಎರಡನೆ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
Next Story





