ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ನಮ್ಮ ಮುಂದಿನ ಟಾರ್ಗೆಟ್ : ಎಬಿವಿಪಿ

ಮುಂಬೈ : ಜೆಎನ್‌ಯು ವಿವಾದವಿನ್ನೂ ಹೊಗೆಯಾಡುತ್ತಲೇ ಇದೆ. ಅದು ಆರುವ ಮುನ್ನವೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಾಯನ್ಸಸ್ (ಟಿಐಎಸ್‌ಎಸ್) ಮೇಲೆ ಕಣ್ಣು ನೆಟ್ಟಿದೆ.
ಟಿಐಎಸ್‌ಎಸ್ ತಮ್ಮ ಮುಂದಿನ ಗುರಿಯಾಗುವುದೆಂದು ಎಬಿವಿಪಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಎಬಿವಿಪಿ ಟಿಐಎಸ್‌ಎಸ್ ಸಂಸ್ಥೆಯನ್ನು ಗುರಿಯಾಗಿಸುವುದು. ಆದರೆಜೆಎನ್‌ಯುನಂತಹ ಸನ್ನಿವೇಶ ಅಲ್ಲಿ ಎದುರಾಗಬಹುದೆಂಬ ಭೀತಿ ಬೇಡ,’’ ಎಂದು ಎಬಿವಿಪಿ ಮುಂಬೈ ಘಟಕದ ಕಾರ್ಯದರ್ಶಿ ಅನಿಕೇತ್ ಓವ್‌ಹೈ ಹೇಳಿಕೆಯೊಂದರಲ್ಲಿ ತಿಳಿಸಿದ್ದರೆ ‘‘ಇತ್ತೀಚೆಗೆದೇಶದಾದ್ಯಂತವಿರುವ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಘಟನೆಗಳು ಕ್ಯಾಂಪಸ್ಸುಗಳಲ್ಲಿ ಎಡಪಂಥೀಯ ಸಂಘಟನೆಗಳ ಇರುವಿಕೆಯನ್ನು ಸೂಚಿಸುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದತ್ತ ಗಮನ ಹರಿಸುವ ಬದಲು ರಾಜಕೀಯದತ್ತ ವಾಲದಿರುವಂತೆ ನೋಡಿಕೊಳ್ಳುವುದು ನಮಗೆ ಬೇಕಿದೆ,’’ಎಂದು ಅವರು ತಿಳಿಸಿದರು.
‘‘ವಿದ್ಯಾರ್ಥಿಗಳು ಬಲೆಗೆ ಬೀಳದಂತೆ ತಡೆಯುವುದು ಹಾಗೂ ರಾಷ್ಟ್ರೀಯತೆಯ ಆರ್ಥವನ್ನು ಅವರಿಗೆ ವಿವರಿಸುವುದು ನಮ್ಮ ಉದ್ದೇಶ. ಯಾರನ್ನೂಬಲವಂತ ಮಾಡಲಾಗುವುದಿಲ್ಲ ಜೆಎನ್‌ಯುವಿನಂತೆ ಟಿಐಎಸ್‌ಎಸ್ ರಣರಂಗವಾಗುವುದು ನಮಗಿಷ್ಟವಿಲ್ಲ,’’ ಎಂದು ಅನಿಕೇತ್ ವಿವರಿಸಿದ್ದಾರೆ.
ಟಿಐಎಸ್‌ಎಸ್ ವಿದ್ಯಾರ್ಥಿಗಳು ಜೆಎನ್‌ಯು ಕ್ಯಾಂಪಸ್ಸಿನಲ್ಲಿ ಕೂಗಲಾಗಿದೆಯೆನ್ನಲಾದ ದೇಶದ್ರೋಹದ ಹೇಳಿಕೆಗಳನ್ನು ಖಂಡಿಸಿ ಹಾಗೂ ವಿದ್ಯಾರ್ಥಿ ಯೂನಿಯನ್ ನಾಯಕನ ಬಂಧನಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು. ಪ್ರಸಕ್ತ ಜೆಎನ್‌ಯು ಬಗೆಗಿನ ವೀಡಿಯೋ ಇಲ್ಲಿ ಸುದ್ದಿ ಮಾಡುತ್ತಿದೆ.
ಟಿಐಎಸ್‌ಎಸ್ ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗಜೆಎನ್‌ಯು ಘಟನೆಯ ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂಬಂಧಿತ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದು ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡಲಾಗಿದೆ,’’ಎಂದು ಟಿಐಎಸ್‌ಎಸ್ ಉಪನಿರ್ದೇಶಕಿ (ಶೈಕ್ಷಣಿಕ) ಶಾಲಿನಿ ಭರತ್ ಹೇಳಿದ್ದಾರೆ.







