ದೇಶದ್ರೋಹ ಆರೋಪ: ಜೆಎನ್‌ಯು ವಿದ್ಯಾರ್ಥಿ ಅಶ್‌ತೋಷ್ ವಿಚಾರಣೆ

ಹೊಸದಿಲ್ಲಿ,ಫೆ.27: ದೇಶದ್ರೋಹ ಆರೋಪ ಹೊತ್ತಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ(ಜೆಎನ್‌ಯು) ಐವರು ವಿದ್ಯಾರ್ಥಿಗಳ ಪೈಕಿ ಓರ್ವರಾಗಿರುವ ಅಶ್‌ತೋಷ್ ಕುಮಾರ್ ಅವರನ್ನು ಶನಿವಾರ ದಿಲ್ಲಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ.
ಅಶ್‌ತೋಷ್ ಕುಮಾರ್ ಸಹಿತ ಐವರು ಜೆಎನ್‌ಯು ವಿದ್ಯಾರ್ಥಿಗಳು ಫೆ.9ರಂದು ವಿವಿ ಕ್ಯಾಂಪಸ್‌ನಲ್ಲಿ ವಿವಾದಾತ್ಮಕ ಕಾರ್ಯಕ್ರಮವನ್ನು ಆಯೋಜಿಸಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪ ಎದುರಿಸುತ್ತಿದ್ದಾರೆ.
ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಇನ್ನಿಬ್ಬರು ಜೆಎನ್‌ಯು ವಿದ್ಯಾರ್ಥಿಗಳಾದ ಅನಂತ್ ಪ್ರಕಾಶ್ ಹಾಗೂ ರಾಮ ನಾಗಾ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು, ಅವರ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ದಿಲ್ಲಿ ಪೊಲೀಸರು ಫೆ.20 ರಂದು ಉಮರ್ ಖಾಲಿದ್, ಅರ್ನಿಬನ್ ಭಟ್ಟಾಚಾರ್ಯ, ರಾಮ ನಾಗಾ, ಅಶ್‌ತೋಷ್ ಕುಮಾರ್ ಹಾಗೂ ಅನಂತ್ ಪ್ರಕಾಶ್ ವಿರುದ್ಧ ಲುಕ್- ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಖಾಲಿದ್ ಹಾಗೂ ಭಟ್ಟಾಚಾರ್ಯ ಈಗಾಗಲೇ ಪೊಲೀಸರಿಗೆ ಶರಣಾಗಿದ್ದು, ಅವರಿಬ್ಬರ ಮೂರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಶನಿವಾರ ಕೊನೆಗೊಂಡಿದೆ.
ದಿಲ್ಲಿ ಹೈಕೋರ್ಟ್‌ನ ಆದೇಶದಂತೆ ಗೌಪ್ಯತೆ ಕಾಪಾಡಲು ಈ ಇಬ್ಬರನ್ನು ಪ್ರತ್ಯೇಕ ನ್ಯಾಯಾಂಗ ಕೊಠಡಿಯಲ್ಲಿ ಇರಿಸಲಾಗಿದೆ.





