ಕೊಹ್ಲಿ ಕಟ್ಟಾ ಅಭಿಮಾನಿ ಉಮರ್‌ಗೆ ಜಾಮೀನು
.jpg)
ಕರಾಚಿ, ಫೆ.27: ಪಾಕಿಸ್ತಾನದ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿ ಉಮರ್ ಡರಾಝ್ ಶನಿವಾರ ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಜ.26 ರಂದು ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾಗದೆ 90 ರನ್ ಗಳಿಸಿದ ಸಂಭ್ರಮದಲ್ಲಿ ಮೈಮರೆತ 22ರ ಹರೆಯದ ಉಮರ್ ತನ್ನ ಮನೆಯ ಛಾವಣಿಯ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ್ದರು.
ದೇಶದ ಸಾರ್ವಭೌಮತೆಗೆ ಧಕ್ಕೆ ತಂದ ಆರೋಪ ಸಹಿತ ವಿವಿಧ ಸೆಕ್ಷನ್ ಅಡಿ ಕೇಸ್ ದಾಖಲಿಸಿದ ಪಾಕಿಸ್ತಾನದ ಪೊಲೀಸರು ಉಮರ್‌ರನ್ನು ಪಂಜಾಬ್ ಪ್ರಾಂತದ ಒಕಾರ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು..
ನ್ಯಾಯಾಲಯ ಉಮರ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ವೃತ್ತಿಯಲ್ಲಿ ಟೇಲರ್ ಆಗಿರುವ ಉಮರ್ ಜೈಲು ಶಿಕ್ಷೆಯ ವಿರುದ್ಧ ಒಕಾರ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ ನ್ಯಾಯಾಲಯಕ್ಕೆ ಜಾಮೀನು ಮನವಿ ಸಲ್ಲಿಸಿದ್ದರು.
ಕೊಹ್ಲಿ ಮೇಲಿನ ಅಭಿಮಾನಕ್ಕಾಗಿ ತಾನು ಭಾರತದ ರಾಷ್ಟ್ರಧ್ವಜ ಹಾರಿಸಿದ್ದಾಗಿ ಕೋರ್ಟ್‌ಗೆ ಹೇಳಿಕೆ ನೀಡಿದ್ದರು.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಉಮರ್‌ಗೆ ಜಾಮೀನು ಮಂಜೂರಿಗೆ ಅನುಮತಿ ನೀಡಿದ್ದು, 50,000 ರೂ. ಭದ್ರತಾ ಠೇವಣಿ ಇಡಲು ಆದೇಶಿಸಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.







