ವಲಸೆಗಾರರ ವಿರುದ್ಧ ಗುಡುಗುವ ಡೊನಾಲ್ಡ್ ಟ್ರಂಪ್‌ರ ಪತ್ನಿ ಸ್ವಯಂ ವಲಸೆಗಾರ್ತಿ! ಮಾಜಿ ಸೂಪರ್ ಮಾಡೆಲ್!
ಟ್ರಂಪ್ ಹೀಗೂ ವಿವಾದದಲ್ಲಿ!

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷನಾಗಲು ಹವಣಿಸುತ್ತಿರುವ ಪ್ರಮುಖ ಉದ್ಯಮಿ ಡೊನಾಲ್ಡ್ ಟ್ರಂಪ್‌ರ ವಲಸೆಗಾರರ ವಿರೋಧ ಬಹುದೊಡ್ಡ ಪ್ರಚಾರ ಅಸ್ತ್ರವಾಗಿದೆ. ಆದರೆ ತನ್ನ ಸ್ವಂತ ಜೀವನದಲ್ಲಿ ಇದುಯಾವುದನ್ನೂ ಈ ಮನುಷ್ಯ ಪಾಲಿಸಿಲ್ಲ. ಟ್ರಂಪ್‌ರ ಪತ್ನಿಯೇ ವಲಸೆಗಾರ್ತಿ! ಸ್ಲೋವೇನಿಯಾದಿಂದ ವಲಸೆಬಂದ ಸುಂದರಿ ಟ್ರಂಪ್‌ರ ಪತ್ನಿಯಾಗಿದ್ದಾರೆ. ವೈಟ್‌ಹೌಸ್‌ಗೆ ಅಮೆರಿಕದ ಪ್ರಥಮ ವನಿತೆಯಾಗಿ ಬರಲು ಕಾದಿರುವುದು ಈ ಹಳೆಯ ಸೂಪರ್ ಮಾಡೆಲ್.! 45ವರ್ಷ ವಯಸ್ಸಿನ ಮೆಲಾನಿಯರನ್ನು 2005ರಲ್ಲಿ ಟ್ರಂಪ್ ಮದುವೆಯಾಗಿದ್ದರು. ಆಡಂಬರದ ವಿಚಾರದಲ್ಲಿ ಯಾರನ್ನೂ ಹಿಂದಿಕ್ಕಬಲ್ಲ ಮೆಲಾನಿಯು ತನಗಿಂತ 24 ವರ್ಷ ಹಿರಿಯ ಟ್ರಂಪ್‌ನ್ನು ಮದುವೆಯಾಗಲು ಸಿದ್ಧರಾದಾಗ ಟ್ರಂಪ್‌ರನ್ನು ಹಣಕ್ಕಾಗಿ ಮದುವೆಯಾಗುತ್ತಿದ್ದಾರೆ ಎಂದು ಟೀಕೆ ಅಂದು ಕೇಳಿಸಿತ್ತು. ಅರಮನೆಗಳನ್ನು ಆಶೆ ಪಡುತ್ತಿದ್ದ ಮೆಲಾನಿಯ ಈಗ ಮ್ಯಾನ್‌ಹಟನ್‌ನ 68ಮಹಡಿಯ ಟ್ರಂಪ್ ಟವರ್‌ನ ಅತಿ ಎತ್ತರದ ಬೃಹತ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಬಂಗಾರ- ವಜ್ರ ಕವಚದ ಗೋಡೆಗಳಿರುವ ಈ ಅರಮನೆಯಲ್ಲದೆ ನ್ಯೂಯಾರ್ಕ್ ಬೆಡ್‌ಫಡ್‌ನಲ್ಲಿ 230 ಎಕರೆ ಸ್ಥಳದಲ್ಲಿ 60 ಕೋಣೆಗಳಿರುವ ಮತ್ತೊಂದು ಬಂಗ್ಲೆ ಕೂಡ ಇದೆ. ವರ್ಜೀನಿಯಾದ ಬೆವರ್ಲಿಹಿಲ್ಸ್‌ನಲ್ಲಿ, ಫ್ಲಾರಿಡಾದಲ್ಲಿಯೂ ಮೆಲಾನಿಯರಿಗೂ, ಟ್ರಂಪ್‌ಗೂ ಆಡಂಬರ ವಸತಿಗಳಿವೆ. ಟ್ರಂಪ್ ನ ಬಿಚ್ಚು ಮನಸ್ಸು ತನ್ನನ್ನು ಆಕರ್ಷಿಸಿದ್ದು ಎಂದು ಮೆಲಾನಿಯ ಹೇಳುತ್ತಾರೆ. ಹತ್ತೊಂಬತ್ತು ವರ್ಷ ಹಿಂದೆ ಅವರ ಕುಟುಂಬ ಸ್ಲೋವಾನಿಯಾದಿಂದ ಅಮೆರಿಕಕ್ಕೆ ವಲಸೆ ಬಂದಿತ್ತು. ಅವರೀಗ ಟ್ರಂಪ್‌ರ ಮೂರನೆ ಪತ್ನಿಯಾಗಿದ್ದಾರೆ. ಟ್ರಂಪ್ ಅಮೆರಿಕ ಅಧ್ಯಕ್ಷನಾದರೆ ವಿದೇಶಿ ಮೂಲದ ಅಮೆರಿಕದ ಎರಡನೆ ಪ್ರಥಮ ಮಹಿಳೆ ಎಂಬ ಖ್ಯಾತಿ ಮೆಲಾನಿಯರನ್ನು ಆವರಿಸಿಕೊಳ್ಳಲಿದೆ. ಹಿಂದಿನ ಅಮೆರಿಕನ್ ಅಧ್ಯಕ್ಷ ಜಾನ್ ಕಿನ್ಸಿ ಆಡಮ್ಸ್‌ರ ಪತ್ನಿಯಾದ ಲೂಸಿಯ ಆಡಮ್ಸ್‌ರ ನಂತರದ ವಿದೇಶಿ ಮೂಲದ ಅಮೆರಿಕದ ಪ್ರಥಮ ಮಹಿಳೆಯೆಂಬ ಖ್ಯಾತಿ ಮೆಲಾನಿಯಾರಿಗೆ ಲಭಿಸಲಿದೆ.





