ನವಜಾತ ಶಿಶುವಿನಿಂದ ಪ್ರೇಮಿಯ ರಹಸ್ಯ ಬಯಲು, ತಾಯಿಯಿಂದ ಶಿಶುವಿನ ಹತ್ಯೆ

ರುಮಾನಿಯ:ಹುಟ್ಟಿದ ಮಗು ತನ್ನ ರಹಸ್ಯ ಪ್ರೇಮಿಯನ್ನು ಹೋಲುತ್ತಿದೆ ಎಂದು ಮನವರಿಕೆಯಾದೊಡನೆ ಎಲೆನಾ ಸ್ಮಾಕಾರ್ಟ್ ಎಂಬ 27ವರ್ಷ ವಯಸ್ಸಿನ ಯುವತಿ ಮಗುವನ್ನು ಗಂಡ ನೋಡುವ ಮೊದಲೇ ಕೊಲ್ಲಲು ತೀರ್ಮಾನಿಸಿದಳು. ಶಿಶುವಿನ ಕಾಲಲ್ಲಿ ಹಿಡಿದು ಮೇಜಿಗೆ ಬಡಿದು ಕೊಂದ ಬಳಿಕ ಟೈಲ್ಸ್‌ನಿಂದ ಮಗುವನ್ನು ಎರಡಾಗಿ ತುಂಡರಿಸಿದ್ದಳಲ್ಲದೆ ಅದರ ಅಂಗಾಗಗಳನ್ನು ಕಿತ್ತು ಚಿಂದಿ ಚಿಂದಿ ಮಾಡಿ ಬಾತ್‌ಟಬ್‌ನಲ್ಲಿ ಹಾಕಿ ಅದರಲ್ಲಿ ಕೂತು ತಾನು ಸ್ನಾನ ಮಾಡಿದಳು!. ಒಂದು ಹಾಲಿವುಡ್ ಸಿನೆಮಾಕ್ಕೆ ಏನೂ ಕಮ್ಮಿಯಿಲ್ಲದಂತಹ ಘಟನೆ ರುಮಾನಿಯದಲ್ಲಿ ನಡೆದಿದೆ. ತನ್ನ ಏಳು ವಯಸಿನ ಮಗ ಹಾಗೂ ಅವನ ತಮ್ಮ ನ ಮುಂದೆ ಎಲೆನಾ ಶಿಶುವನ್ನು ಹೀಗೆ ತುಂಡರಿಸಿದ್ದಳು. ಪೊಲೀಸರು ಬಂಧಿಸಿದ್ದ ಎಲೆನಾಳಿಗೆ ಕೋರ್ಟ್ ಹದಿನೆಂಟು ವರ್ಷ ಶಿಕ್ಷೆ ವಿಧಿಸಿದೆ. ರುಮಾನಿಯಾದ ವಾಸಯ್ ಕೌಂಟಿಯ ಮನೆಯಲ್ಲಿ ಎಲೆನಾ ಮಾನವ ಮನಸಾಕ್ಷಿಯನ್ನು ನಡುಗಿಸಿದ ಕ್ರೌರ್ಯವನ್ನು ನಡೆಸಿದ್ದಳೂ. ಮಗು ತನ್ನ ಇನ್ನಿಬ್ಬರು ಮಕ್ಕಳನ್ನು ಹೋಲುವುದಿಲ್ಲ ಎಂದು ಮಗುವನ್ನು ಇಲ್ಲವಾಗಿಸಲು ತೀರ್ಮಾನಿಸಿದ್ದಳು. ಅದು ತನ್ನ ಪ್ರಿಯತಮನನ್ನು ಹೋಲುತ್ತಿದೆ ಎಂದು ಅವಳಿಗೆ ಅನಿಸಿತ್ತು. ಹೆರಿಗೆಯ ನಂತರದ ಖಿನ್ನತೆ ಮತ್ತು ತನಗೊಬ್ಬ ರಹಸ್ಯ ಪ್ರೇಮಿಇದ್ದಾನೆಂಬುದು ಬಹಿರಂಗವಾಯಿತೆಂಬ ಭೀತಿ ಅವಳನ್ನು ಹೀಗೆ ಮಾಡಿಸಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.





