ಇಪ್ಪತ್ತೈದು ಅಡಿ ಆಳದ ಬಾವಿಗೆ ಬಿದ್ದ ಮಗು- ರಕ್ಷಿಸಲು ಧುಮುಕಿದ ಹೆತ್ತವರು

ಅಗ್ನಿಶಾಮಕದಳ ಊರವರು ಮೂವರನ್ನು ಬಾವಿಯಿಂದ ಮೇಲಕ್ಕೆತ್ತಿದರು!
ಅಂಗಮಾಲಿ: ಕೈಹಿಡಿದು ಆಟವಾಡುತ್ತಿದ್ದ ಮಗು ಕೈಬಿಟ್ಟು ಓಡಿ ಬಾವಿಗೆ ಬಿದ್ದುದನ್ನು ನೋಡಿ ಅಮ್ಮ ಅಪ್ಪ ಇಬ್ಬರೂ ಮಗುವನ್ನು ರಕ್ಷಿಸಲಿಕ್ಕಾಗಿ ಬಾವಿಗೆ ಹಾರಿದ್ದರು. ಆಳವಾದ ಬಾವಿಗೆ ಬಿದ್ದ ಮೂವರನ್ನು ಊರವರು ಮತ್ತು ಅಗ್ನಿಶಾಮಕ ದಳ ಸೇರಿ ಅತಿ ಸಾಹಿಸಿಕವಾಗಿ ಬಾವಿಯಿಂದ ನಂತರ ಮೇಲೆತ್ತಿದ ಘಟನೆ ಅಂಗಮಾಲಿಯಲ್ಲಿ ವರದಿಯಾಗಿದೆ. ಮುಕ್ಕನ್ನೂರ್ ಕೂಟ್ಟಿಲ ದೇವಳದ ಹತ್ತಿರ ವಾಸಿಸುವ ಎಡತ್ತಾಳಶೇರಿ ರಾಜು(45) ಪತ್ನಿ ಸುನೀತಾ(44) ಮಗು ಅಜಯ್(2) ಇವರಿಗೆ ಊರವರು ಮತ್ತು ಅಗ್ನಿಶಾಮಕದಳದ ಪ್ರಯತ್ನದಿಂದಾಗಿ ಮರುಜೀವ ಸಿಕ್ಕಂತಾಗಿದೆ. ಬಾವಿಗೆ ಆವರಣ ಗೋಡೆಯಿಲ್ಲದ ಕಾರಣ ಅಮ್ಮನ ಕೈತಪ್ಪಿಸಿ ಓಡಿದ ಮಗು ನೇರವಾಗಿ ಬಾವಿಗೆ ಬಿದ್ದಿತ್ತು. ಇಪ್ಪತ್ತೈದು ಅಡಿ ಆಳದ ಈ ಬಾವಿ ಮನೆಯ ಪಕ್ಕದಲ್ಲಿಯೇ ಇದೆ. ರಾಜುರ ಸಹೋದರನ ಮಗನಾದ ಅಜಯ್‌ನನ್ನು ಅವನ ತಾಯಿ ಮೃತರಾದ ಮೇಲೆ ಅವನ ತಂದೆ ಬೇರೊಂದು ಮದುವೆಯಾದ ಹಿನ್ನೆಲೆಯಲ್ಲಿ ಅಜಯ್‌ನ್ನು ರಾಜುದಂಪತಿಗಳು ಸಾಕುತ್ತಿದ್ದರು. ಮಗವಿಗಾಗಿ ಜೀವ ಕಳಕೊಳ್ಳಲು ಸಿದ್ಧರಾಗಿ ದಂಪತಿಯಿ ಬ್ಬರೂ ಬಾವಿಗೆ ಹಾರಿದ್ದರು. ನೀರಿನಲ್ಲಿ ಮುಳುಗಿ ಮಗುವನ್ನು ಮೇಲೆತ್ತಿದ್ದರು. ಬೊಬ್ಬೆ ಕೇಳಿ ಓಡಿ ಬಂದ ಊರವರು ಹಗ್ಗ ಇಳಿಸಿದ್ದರಿಂದ ಅದನ್ನು ಅಗ್ನಿಶಾಮಕ ದಳ ತಲುಪುವವರೆಗೆ ದಂಪತಿಗಳು ಹಿಡಿದಿದ್ದರು. ಅಗ್ನಿಶಾಮಕ ದಳ ಬಂದು ಮಗು ಮತ್ತು ದಂಪತಿಗಳನ್ನು ಮೇಲೆತ್ತಿದೆ.





