ಬೆಂಗಳೂರಿನಲ್ಲಿ ಬೀಫ್ ತಿಂದದ್ದಕ್ಕೆ ಕೇರಳದ ವಿದ್ಯಾರ್ಥಿಗಳ ಹಲ್ಲೆ!; ಒಬ್ಬನ ಸ್ಥಿತಿಗಂಭೀರ

ಬೆಂಗಳೂರು: ಸಂಜಯ್‌ನಗರ್ ಭೂಪಸಂದ್ರದಲ್ಲಿ ಬೀಫ್ ತಿಂದರೆಂದು ಕೇರಳದ ಮೂವರು ವಿದ್ಯಾರ್ಥಿಗಳನ್ನು ಥಳಿಸಲಾಗಿದೆ. ಹಲ್ಲೆಗೊಳಗಾದ ಒಬ್ಬ ವಿದ್ಯಾರ್ಥಿಯ ಪರಿಸ್ಥಿತಿ ಗಂಭೀರವಾಗಿದೆ. ಖಾಸಗಿ ಕಾಲೇಜು ವಿದ್ಯಾರ್ಥಿಗಳಾದ ನಿಖಿಲ್, ಮುಹಮ್ಮದ್ ಹಾಶಿಂ, ಮರ್ವಿನ್ ಮೈಕಲ್ ಎಂಬವರಿಗೆ ಥಳಿಸಲಾಗಿದೆ. ಇವರಲ್ಲಿ ಮರ್ವಿನ್ ಮೈಕಲ್ ಗಂಭೀರಗಾಯಗೊಂಡಿದ್ದಾರೆ. ಇವರ ವಾಸ್ತವ್ಯದ ಸ್ಥಳಕ್ಕೆ ಬಂದ ದುಷ್ಕರ್ಮಿಗಳ ತಂಡವೊಂದು ಬೀಫ್ ತಿಂದಿದ್ದಾರೆಂದು ಬೈದು ಹೊಡೆದಿದೆ.ಪೊಲೀಸರು ದುಷ್ಕರ್ಮಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಬಿಜೆಪಿ ಸರಕಾರ ವಿದ್ದಾಗ ಕರ್ನಾಟಕದಲ್ಲಿ ಬೀಫ್‌ಗೆ ನಿಷೇಧ ಹೇರಲಾಗಿತ್ತು. ಕಾಂಗ್ರೆಸ್ ಸರಕಾರ ನಿಷೇಧವನ್ನು ಹಿಂದೆಗೆದಿದೆ.
ಬೀಫ್ ಸೇವನೆ ಗೊಂದಲ: ದನದ ಮಾಂಸ ಸೇವನೆ ಆಕ್ಷೇಪಿಸಿ ಕೇರಳ ಮೂಲದ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಸಂಶಯ ಸೃಷ್ಟಿಯಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ‘ಸುಳ್ಳು’ ಸುದ್ದಿ ಹರಿದಾಡುತ್ತಿದೆ. ಆದರೆ, ಮಾಂಸ ಸೇವನೆ ನೆಪದಲ್ಲಿ ಹಲ್ಲೆ ನಡೆಸಲಾಗಿದೆ ಎಂಬುದು ಸತ್ಯಕ್ಕೆ ದೂರ ಎಂದು ಪೊಲೀಸರು ಹಾಗೂ ದೂರು ನೀಡಿದ ಯುವಕರು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣ ಸಂಬಂಧ ಮೂರು ಮಂದಿ ಯುವಕರು ಇಲ್ಲಿನ ಭೂಪಸಂದ್ರ ಠಾಣಾ ಪೊಲೀಸರು ದೂರು ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ 324 (ತೀವ್ರ ಸ್ವರೂಪದ ಗಾಯಪಡಿಸಿದ) ಮತ್ತು 506(ಕ್ರಿಮಿನಲ್ ಅಪರಾಧ) ಅನ್ವಯ ಮೊಕದ್ದಮೆ ದಾಖಲಿಸಿ ಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.







