ಪ್ರಧಾನಿಯ ಹೆಸರು , ವಿಳಾಸ ಕೇಳಿದ ಬಿ ಎಸ್ ಎನ್ ಎಲ್ !

ಹೊಸದಿಲ್ಲಿ , ಫೆ. ೨೭ : ಸರಕಾರೀ ಸಂಸ್ಥೆ ಎಂದರೆ ಅಲ್ಲಿ ಇದೆಲ್ಲ ಸಾಮಾನ್ಯ. ಆದರೆ ಈ ಮಟ್ಟಿಗೆ ನಿರ್ಲಕ್ಷ್ಯ ಎಂದರೆ ನಂಬುವುದು ಅಸಾಧ್ಯ. ಬಿ ಎಸ್ ಎನ್ ಎಲ್ (ಸರಕಾರೀ ಸ್ವಾಮ್ಯದ ದೂರವಾಣಿ ಸಂಸ್ಥೆ ) ಪ್ರಧಾನಿ ನರೇಂದ್ರ ಮೋದಿ ಅವರಲ್ಲೇ ವಿವರ ಕೇಳಿದೆ ! ಯಾವ ವಿವರ ಗೊತ್ತೇ ? ಅವರ ಹೆಸರು , ವಿಳಾಸ ಇತ್ಯಾದಿ ವಿವರಗಳನ್ನು ಕೇಳಿದೆ ಬಿ ಎಸ್ ಎನ್ ಎಲ್ !
ಸಾಲದ್ದಕ್ಕೆ ಅವರ ಮೊಬೈಲ್ ನಂಬರ್, ವಿಳಾಸ, ಜಿಲ್ಲೆ ಹಾಗು ರಾಜ್ಯದ ವಿವರಗಳನ್ನು ನೀಡುವಂತೆ ಅದು ಪ್ರಧಾನಿ ಮೋದಿ ಅವರನ್ನು ಕೇಳಿದೆ.
ಬಿ ಎಸ್ ಎನ್ ಎಲ್ ತನ್ನ ಟ್ವಿಟ್ಟರ್ ನಿಂದ ಪ್ರಧಾನಿ ಅವರ ಟ್ವಿಟ್ಟರ್ ಗೆ ಬಂದ ಸಂದೇಶ ಇಲ್ಲಿದೆ :
@narendramodi Thank you for your feedback.For quick action,kindly provide us your Name,Mobile No.,Address,District & State — BSNL India (@BSNLCorporate) February 26, 2016
ಪ್ರಧಾನಿ ಅವರ ಯಾವ ಸಂದೇಶಕ್ಕೆ ಬಿ ಎಸ್ ಎನ್ ಎಲ್ ಹೀಗೆ ಪ್ರತಿಕ್ರಿಯೆ ನೀಡಿದೆ ಎಂಬದು ತಿಳಿದು ಬಂದಿಲ್ಲ. ಆದರೆ ಬಿ ಎಸ್ ಎನ್ ಎಲ್ ನ ಈ ಸಂದೇಶಕ್ಕೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ಪ್ರತಿಕ್ರಿಯೆಗಳು ಬಂದಿವೆ .





