ಅಮಿತಾಭ್ ಬಚ್ಚನ್‌ಗೆ ಗೇಲ್‌ರಿಂದ ಬ್ಯಾಟ್ ಉಡುಗೊರೆ

ಮುಂಬೈ, ಫೆ.27: ವೆಸ್ಟ್‌ಇಂಡೀಸ್‌ನ ಸ್ಟಾರ್ ಕ್ರಿಕೆಟಿಗ ಕ್ರಿಸ್ ಗೇಲ್ ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್‌ರಿಗೆ ಆಟೋಗ್ರಾಫ್ ಇರುವ ಬ್ಯಾಟ್‌ನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಗೇಲ್ ನೀಡಿದ ಬ್ಯಾಟ್‌ಗೆ ಕ್ಲೀನ್ ಬೌಲ್ಡಾಗಿರುವ ಬಚ್ಚನ್, ವೆಸ್ಟ್‌ಇಂಡೀಸ್‌ನಲ್ಲಿ ಸ್ಟಾರ್ ಕ್ರಿಕೆಟಿಗನೊಬ್ಬ ತನ್ನ ಅಭಿಮಾನಿಯಾಗಿರುವುದು ನಿಜಕ್ಕೂ ಒಂದು ಕ್ರಾಂತಿಕಾರಕ ಬದಲಾವಣೆಯಾಗಿದೆ’’ ಎಂದು 73 ರ ಹರೆಯದ ಬಚ್ಚನ್ ಪ್ರತಿಕ್ರಿಯಿಸಿದರು.
‘‘ಮಿ. ಕ್ರಿಸ್ ಗೇಲ್... ಇದೊಂದು ನನ್ನ ಪಾಲಿಗೆ ಮಹಾ ಗೌರವ...ನಿಮಗೆ ನನ್ನ ಪರಿಚಯ ಇದೆ ಎಂದು ಗೊತ್ತೇ ಇರಲಿಲ್ಲ....ನಾವೆಲ್ಲರೂ ನಿಮ್ಮ ದೊಡ್ಡ ಅಭಿಮಾನಿಗಳು. ನನಗೆ ಹಸ್ತಾಕ್ಷರವಿರುವ ಬ್ಯಾಟ್‌ನ್ನು ನೀಡಿರುವ ನೀವು ಹಿಂದಿ ಚಿತ್ರದ ಅಭಿಮಾನಿಯಾಗಿದ್ದಾರೆ ಎಂದು ನನ್ನ ಭಾವನೆ... ಇದೊಂದು ಕ್ರಾಂತಿಯಾಗಿದೆ’’ ಎಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ.
ಐಪಿಎಲ್‌ನಲ್ಲಿ ಆಡುತ್ತಿರುವ ಗೇಲ್ ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್‌ರ ದೊಡ್ಡ ಅಭಿಮಾನಿಯಾಗಿದ್ದಾರೆ. ‘‘ಬಚ್ಚನ್ ಸರ್‌ಗೆ ತನ್ನ ಬ್ಯಾಟ್‌ನ್ನು ನೀಡುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ. ನನಗೆ ಅವರ ಸಿನಿಮಾ ಹಾಗೂ ನಟನೆಯ ಶೈಲಿಯೆಂದರೆ ಬಹಳ ಇಷ್ಟ. ನಾನು ಅವರನ್ನ್ನು ಆದಷ್ಟು ಬೇಗನೆ ಭಾರತದಲ್ಲಿ ಭೇಟಿಯಾಗುವೆ’’ಎಂದು ಗೇಲ್ ಟ್ವೀಟ್ ಮಾಡಿದ್ದಾರೆ.





