Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸೇವಾರಂಗದಲ್ಲಿ ಅರ್ಧ ಶತಮಾನ : ಶೈಖುನಾ...

ಸೇವಾರಂಗದಲ್ಲಿ ಅರ್ಧ ಶತಮಾನ : ಶೈಖುನಾ ಅಬ್ಬಾಸ್ ಉಸ್ತಾದರಿಗೆ ಸನ್ಮಾನ

ವಾರ್ತಾಭಾರತಿವಾರ್ತಾಭಾರತಿ27 Feb 2016 6:26 PM IST
share
ಸೇವಾರಂಗದಲ್ಲಿ ಅರ್ಧ ಶತಮಾನ : ಶೈಖುನಾ ಅಬ್ಬಾಸ್ ಉಸ್ತಾದರಿಗೆ ಸನ್ಮಾನ

ದಕ್ಷಿಣ ಕನ್ನಡದ ಕುಗ್ರಾಮವಾಗಿದ್ದ ಮಂಜನಾಡಿಯಲ್ಲಿ ಅಲ್ ಮದೀನಾ ಎಂಬ ಧಾರ್ಮಿಕ-ಲೌಕಿಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಸಾವಿರಾರು ಅನಾಥ ಬಡ ಮಕ್ಕಳಿಗೆ ವಿದ್ಯಾದಾನ ಮಾಡಿ ಅಕ್ಷರ ಕ್ರಾಂತಿಗೆ ಕಾರಣರಾದ ಹಾಗೂ ಧಾರ್ಮಿಕ-ಸಾಮಾಜಿಕ ಸೇವಾರಂಗದಲ್ಲಿ ಅರ್ಧ ಶತಮಾನದಿಂದ ಸಕ್ರಿಯರಾಗಿರುವ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್‌ರಿಗೆ ಅವರ ಶಿಷ್ಯ ಸಮೂಹ ಹಾಗೂ ಅಭಿಮಾನಿ ಬಳಗ ಫೆ.28ರಂದು ಸಂಜೆ 4 ಗಂಟೆಗೆ ದೇರಳಕಟ್ಟೆಯಲ್ಲಿ ಗೌರವಾರ್ಪಣಾ ಸಮಾರಂಭ ಹಮ್ಮಿಕೊಂಡಿದೆ.

  ಅಬ್ಬಾಸ್ ಉಸ್ತಾದರು ತಮ್ಮ ಕಾರ್ಯಕ್ಷೇತ್ರವನ್ನು ಕೇವಲ ಅಧ್ಯಯನ,ಅಧ್ಯಾಪನ, ಆರಾಧನೆಗಳಿಗೆ ಸೀಮಿತಗೊಳಿಸದೆ ಸಮಾಜಮುಖಿ ಕಾರ್ಯಗಳ ಕಡೆಗೂ ವಿಸ್ತರಿಸಿದರು. ಸಮಾಜದಲ್ಲಿ ಅಕ್ಷರ ಜ್ಞಾನವಂಚಿತರಾದ ಅದೆಷ್ಟೋ ಅನಾಥ ಬಡ ಮಕ್ಕಳಿಗೆ ಸೂರು ಒದಗಿಸಿ, ಶಿಕ್ಷಣ ನೀಡಿದರು. ಸಮುದಾಯದ ಉನ್ನತಿಗೆ ಆಧುನಿಕ ಶಿಕ್ಷಣ ಹಾಗೂ ಅಧ್ಯಾತ್ಮಿಕತೆಯಿಂದ ಕೂಡಿದ ಧಾರ್ಮಿಕ ಶಿಕ್ಷಣ ಎರಡೂ ಮುಖ್ಯವೆಂದು ತಿಳಿದ ಅವರು, ಎರಡೂ ರೀತಿಯ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳನ್ನು ಒಂದೇ ಕ್ಯಾಂಪಸ್‌ನಲ್ಲಿ ನೀಡುವ ವ್ಯವಸ್ಥೆ ರೂಪಿಸಿದರು. ಅದರ ಫಲವಾಗಿ ಇಂದು ಅಲ್ ಮದೀನಾ ಸಂಸ್ಥೆಯು ಧಾರ್ಮಿಕ-ಭೌತಿಕ ಶಿಕ್ಷಣದ ಕೇಂದ್ರವಾಗಿ ಬೆಳೆದು ನಿಂತಿದೆ. ಯತೀಮ್ ಖಾನಾವೆಂಬ ಅನಾಥಾಲಯ, ನಿರ್ಗತಿಕ ಮಂದಿರ, ಇಂಗ್ಲಿಷ್ ಮೀಡಿಯಂ ಪ್ರೈಮರಿ ಮತ್ತು ಹೈಸ್ಕೂಲ್, ಕನ್ನಡ ಮಾಧ್ಯಮ ಪ್ರೌಢಶಾಲೆ, ಧಾರ್ಮಿಕ ಶಿಕ್ಷಣ ನೀಡುವ ಶರೀಅತ್ ಕಾಲೇಜು, ಸಮನ್ವಯ ಶಿಕ್ಷಣ ನೀಡುವ ದಅ್ವಾ ಕಾಲೇಜು, ಮಹಿಳಾ ಕಾಲೇಜು, ಮಹಿಳಾ ಶರೀಅತ್ ಕಾಲೇಜು, ಹಿಫ್ಲುಲ್ ಕುರ್‌ಆನ್ ಕಾಲೇಜು, ಹಿಂದುಳಿದ ಉತ್ತರ ಕರ್ನಾಟಕದವರ ವಿದ್ಯಾಭ್ಯಾಸಕ್ಕಾಗಿ ನಾರ್ತ್ ಕರ್ನಾಟಕ ಹೋಂ ಮುಂತಾದವುಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳು ವಿದ್ಯೆ ಪಡೆಯುವಂತಾಗಿದೆ. ಅನಾಥ-ಬಡ ಮಕ್ಕಳ ಉಚಿತ ಶಿಕ್ಷಣಕ್ಕಾಗಿ ಸಂಸ್ಥೆ ಸದಾ ಸನ್ನದ್ಧವಾಗಿದೆ.

ಉಸ್ತಾದರ ಈ ಶೈಕ್ಷಣಿಕ ಕ್ರಾಂತಿಗೆ ಅಗಾಧ ಪರಿಶ್ರಮ, ದೂರದೃಷ್ಟಿ, ಸೇವಾ ಮನೋಭಾವ, ಪ್ರಾಮಾಣಿಕತೆ, ಗುರಿ ಸಾಧಿಸುವ ಛಲ, ದಣಿಯದ ಉತ್ಸಾಹ, ಶ್ರೇಷ್ಠ ನಾಯಕತ್ವ ಗುಣ ಮುಂತಾದ ಅಂಶಗಳೆಂಬುವುದು ಅವರ ವ್ಯಕ್ತಿತ್ವವನ್ನು ಕಂಡಾಗ ಅರಿವಾಗುತ್ತದೆ.

ಉಸ್ತಾದರ ಇನ್ನೊಂದು ಗಮನಾರ್ಹ ಸೇವೆಯೆಂದರೆ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ. ದ.ಕ.ಮತ್ತು ಕೊಡಗು ಜಿಲ್ಲೆಯಲ್ಲಿ ಸರಳ ಸಾಮೂಹಿಕ ವಿವಾಹವೆಂಬ ಸಂಪ್ರದಾಯವನ್ನು ಪ್ರಾರಂಭಿಸಿದ ಹೆಗ್ಗಳಿಕೆ ಉಸ್ತಾದರಿಗೆ ಸಲ್ಲುತ್ತದೆ. ಸುಮಾರು ಮುನ್ನೂರ ಐವತ್ತಕ್ಕೂ ಹೆಚ್ಚು ಬಡ ಹೆಣ್ಣು ಮಕ್ಕಳ ವಿವಾಹಗಳು ಇವರ ನೇತೃತ್ವದಲ್ಲಿ ಎರಡೂ ಜಿಲ್ಲೆಗಳಲ್ಲಿ ನಡೆದಿದೆ ಎಂದರೆ ಅದು ಸಣ್ಣ ಸಾಧನೆಯಲ್ಲ.

ಕೊಡಗು ಜಿಲ್ಲೆಯ ಮಡಿಕೇರಿ ಸಮೀಪ ಹಾಕತ್ತೂರು ಉಸ್ತಾದರ ಹುಟ್ಟೂರು. ಕಾಸರಗೋಡು ಮೂಲದ ಮುಹಮ್ಮದ್ ಕುಂಞಿ - ಬೀಫಾತಿಮಾ ಹಜ್ಜುಮ್ಮಾ ದಂಪತಿಯ ಸುಪುತ್ರನಾಗಿ 1946ರಲ್ಲಿ ಜನಿಸಿದರು. ಹಾಕತ್ತೂರಿನಲ್ಲಿರುವ ಓತುಪಳ್ಳಿಯಲ್ಲಿ ದೀನಿ ಶಿಕ್ಷಣ ಪಡೆದ ಉಸ್ತಾದ್, ಬಳಿಕ ಕೊಡಗಿನ ಕೊಂಡಂಗೇರಿ ಎಂಬಲ್ಲಿ ಐದು ವರ್ಷ ದರ್ಸ್ ಕಲಿತರು. ನಂತರ ಕೇರಳದ ಕಣ್ಣಾನೂರ್ ಜಿಲ್ಲೆಯ ತಳಿಪರಂಬದ ಬಳಿ ತಿರುವಟ್ಟೂರ್ ಎಂಬಲ್ಲಿ ದರ್ಸ್‌ಗೆ ಸೇರಿದರು. ತಿರುವಟ್ಟೂರ್ ಉಸ್ತಾದ್ ಎಂದೇ ಪ್ರಸಿದ್ಧರಾಗಿದ,್ದ ಹಿರಿಯ ವಿದ್ವಾಂಸರೂ ಸೂಫಿವರ್ಯರೂ ಆಗಿದ್ದ ಸಿ.ಪಿ. ಮುಹಮ್ಮದ್ ಕುಟ್ಟಿ ಮುಸ್ಲಿಯಾರ್‌ರಿಂದ ಶಿಕ್ಷಣ ಪಡೆದ ನಂತರ ಉಳ್ಳಾಲಕ್ಕೆ ಬಂದು ಶೈಖುನಾ ತಾಜುಲ್ ಉಲಮಾರ ದರ್ಸ್‌ಗೆ ಸೇರಿ ಮೂರು ವರ್ಷ ಕಲಿತರು. ಉನ್ನತ ಶಿಕ್ಷಣಕ್ಕಾಗಿ ತಾಜುಲ್ ಉಲಮಾರ ನಿರ್ದೇಶನದಂತೆ ತಮಿಳ್ನಾಡಿನ ದಯೂಬಂದ್‌ಗೆ ತೆರಳಿ ದೌರತುಲ್ ಹದೀಸ್‌ನಲ್ಲಿ ಪದವಿ ಪಡೆದರು.

  ಅಧ್ಯಾಪನ ಕ್ಷೇತ್ರಕ್ಕಿಳಿದ ಅಬ್ಬಾಸ್ ಉಸ್ತಾದ್ ಕಾಸರಗೋಡು ಜಿಲ್ಲೆಯ ದೇಲಂಬಾಡಿಯಲ್ಲಿ 5 ವರ್ಷ ಮುದರ್ರಿಸ್ ಆಗಿ ಸೇವೆ ಸಲ್ಲಿಸಿ, ಬಳಿಕ ದ.ಕ. ಜಿಲ್ಲೆಯಲ್ಲೇ ಸೇವೆ ಸಲ್ಲಿಸಿದರು. ಬೆಳ್ತಂಗಡಿ ಉಜಿರೆಯಲ್ಲಿ ಮುದರ್ರಿಸರಾದ ಬಳಿಕ ಮಂಜನಾಡಿಗೆ ಬಂದರು. ಉಳ್ಳಾಲದಲ್ಲಿ ಕಲಿಯುತ್ತಿದ್ದಾಗಲೇ ಉಸ್ತಾದರಿಗೆ ಮಂಜನಾಡಿಯ ಜೊತೆ ಸಂಬಂಧ ಬೆಳೆದಿತ್ತು. ಮಂಜನಾಡಿಯಲ್ಲಿ ವ್ಯವಸ್ಥಿತವಾಗಿ ದರ್ಸ್ ಆರಂಭಿಸಿ ಮಂಜನಾಡಿ ಉಸ್ತಾದ್ ಎಂದೇ ಖ್ಯಾತರಾದ ಸಿ.ಪಿ. ಮುಹಮ್ಮದ್ ಕುಂಞಿ ಮುಸ್ಲಿಯಾರ್‌ರೊಂದಿಗೆ ನಿಕಟ ಸಂಪರ್ಕ ಬೆಳೆಸಿದ್ದರು. ಅವರನ್ನು ಆತ್ಮೀಯ ಗುರುವಾಗಿ ಪರಿಗಣಿಸಿದ್ದರು.

ತಾಜುಲ್ ಉಲಮಾ ಉಳ್ಳಾಲ ತಂಙಳ್‌ರ ಮಧ್ಯಸ್ಥಿಕೆಯಲ್ಲಿ ಸಿ.ಪಿ. ಉಸ್ತಾದ್ ಮಧ್ಯೆ ಮಾವ - ಅಳಿಯ ಸಂಬಂಧ ಕೂಡಾ ಕುದುರಿತ್ತು. ಮಂಜನಾಡಿ ಉಸ್ತಾದರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ, ವಿರಮಿಸಿದ ಬಳಿಕ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡ ಅಬ್ಬಾಸ್ ಉಸ್ತಾದ್, ಮಂಜನಾಡಿ ಉಸ್ತಾದರು ಬೆಳೆಸಿದ ಧರ್ಮ ಪ್ರಕಾಶವನ್ನು ಕೆಡದಂತೆ ಕಾಪಾಡಿಕೊಂಡರು. ಮೂರು ಕಡೆಗಳಲ್ಲಿ ಮೂರು ದಶಕಗಳ ಕಾಲ ಮುದರ್ರಿಸ್ ಆಗಿ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡಿದ ಅಬ್ಬಾಸ್ ಉಸ್ತಾದರು ಹಲವಾರು ಉನ್ನತ ವಿದ್ವಾಂಸರುಗಳನ್ನು ರೂಪಿಸಿದ್ದಾರೆ.

1994ರಲ್ಲಿ ಮಂಜನಾಡಿಯಲ್ಲಿ 21 ವರ್ಷಗಳಿಂದ ನೆಚ್ಚಿಕೊಂಡಿದ್ದ ಮುದರ್ರಿಸ್ ಹುದ್ದೆಯನ್ನು ತ್ಯಜಿಸಿದರೂ ಮಂಜನಾಡಿಯ ಪರಿಸರವನ್ನು ತ್ಯಜಿಸಬಾರದೆಂಬ ಅಭಿಮಾನಿಗಳ ಒತ್ತಡವನ್ನು ಮೀರಲು ಅಬ್ಬಾಸ್ ಉಸ್ತಾದರಿಗೆ ಸಾಧ್ಯವಾಗಲಿಲ್ಲ. ಏನು ಮಾಡಬೇಕೆಂದು ಸಮಾಲೋಚಿಸಲು ಕಾಞಂಗಾಡಿನಲ್ಲಿರುವ ಉಸ್ತಾದರ ನಿವಾಸದಲ್ಲಿ ಕೆಲವು ಆಪ್ತರು ಸೇರಿದರು. ಮಂಜನಾಡಿ ಪರಿಸರದಲ್ಲಿ ಸ್ವಲ್ಪಜಾಗ ಖರೀದಿಸಿ ಪುಟ್ಟದೊಂದು ವಿದ್ಯಾಸಂಸ್ಥೆ ಆರಂಭಿಸಿ ಉಸ್ತಾದರ ಸೇವೆಯನ್ನು ಅಲ್ಲೇ ಉಳಿಸುವ ತೀರ್ಮಾನಕ್ಕೆ ಬರಲಾಯಿತು.

1994ರ ಮಾರ್ಚ್ 17ರಂದು ನಡೆದಿದ್ದ ಆ ಸಭೆ, ಅಲ್ ಮದೀನಾಕ್ಕೆ ಮೊದಲ ಹೆಜ್ಜೆಯಾಯಿತೆಂದು ಯಾರೂ ಊಹಿಸಿರಲಾರರು. ಆದರೆ ಅಲ್ಲಾಹನ ವಿಧಿ ಹಾಗಿತ್ತು. ಆಧ್ಯಾತ್ಮ ವಲಯದ ಅಗ್ರನಾಯಕರಾಗಿದ್ದ ಚಾಪನಂಗಾಡಿ ಬಾಪು ಮುಸ್ಲಿಯಾರ್ ಸೇರಿದಂತೆ ಹತ್ತಾರು ಉಲಮಾ, ಸೂಫಿ, ಸಾದಾತುಗಳಿಂದ ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದಿರುವ ಅಬ್ಬಾಸ್ ಉಸ್ತಾದ್, ದೇಶ ವಿದೇಶಗಳಲ್ಲೂ ಹಲವಾರು ಮಖ್‌ಬರಗಳನ್ನು, ಝಿಯಾರತ್ ಮಾಡಿದ್ದಾರೆ. ಪ್ರವಾದಿ ಪ್ರೇಮಿಯಾಗಿ, ಸ್ವಲಾತುನ್ನಾರಿಯಾದ ಮೇಲೆ ಹಿಡಿತ ಸಾಧಿಸಿದರು. ಯಾವುದೇ ಕಾರ್ಯಕ್ಕಿಳಿಯುವಾಗಲೂ ಸ್ವಲಾತುನ್ನಾರಿಯಾ ಹರಕೆ ಮಾಡುವುದು ಅವರ ಶೈಲಿ. ಅದರಲ್ಲೆಲ್ಲಾ ಯಶಸ್ವಿಯಾಗಿರುವುದು ಅವರ ಅನುಭವ. ಉತ್ತಮ ವಾಗ್ಮಿಯೂ ಆಗಿರುವ ಉಸ್ತಾದರು, ಬರಹಾಸಕ್ತಿಯನ್ನೂ ಮೈಗೂಡಿಸಿಕೊಂಡಿದ್ದಾರೆ. ಅರಬಿ ಮಲಯಾಳದಲ್ಲಿ ಪ್ರಸಿದ್ಧ ನಬಿ ಕೀರ್ತನೆ ಮಂಖೂಸ್ ಮೌಲಿದ್ ಅನ್ನು ಕನ್ನಡಕ್ಕೆ ವ್ಯಾಖ್ಯಾನ ಸಹಿತ ತರ್ಜುಮೆ ಮಾಡಿದ್ದು ಚಿಕ್ಕ, ಚೊಕ್ಕವಾಗಿ ಪ್ರಕಟವಾಗಿದೆ. ಅಲ್ ಬುನ್ಯಾನುಲ್ ಮರ್‌ಸೂಸ್ ಫೀ ಮೌಲಿದಿಲ್ ಮಂಖೂಸ್ ಎನ್ನುವ ಅರಬಿ ಕೃತಿಯನ್ನು ತುರ್ಕಿಯ ಜಗತ್ಪ್ರಸಿದ್ಧ ಇಸಿಕ್ ಕಿತಾಬೆವಿ ಪ್ರಕಾಶನ ಸಂಸ್ಥೆಯು ಮುದ್ರಿಸಿ ಉಚಿತವಾಗಿ ವಿತರಿಸುತ್ತಿರುವುದು ಕೃತಿಯ ಹಿರಿಮೆಗೆ ಸಾಕ್ಷಿ. ಕನ್ನಡದಲ್ಲಿ ಇವರ ಅಜ್ಮೀರ್ ಖ್ವಾಜಾ ಚರಿತ್ರೆ ಪ್ರಕಟಗೊಂಡಿದೆ. 2013ರಲ್ಲಿ ಇವರ ಇನ್ನೊಂದು ಕಿರು ಅರಬಿ ಗ್ರಂಥ ‘ಅತ್ತವಸ್ಸುಲ್’ ಪ್ರಕಾಶನಗೊಂಡಿದೆ.

 ಅಗ್ರಗಣ್ಯ ಉಲಮಾ ನಾಯಕರ ಪಂಕ್ತಿಯಲ್ಲಿ ಗುರುತಿಸಲ್ಪಡುವ ಉಸ್ತಾದರು ಪ್ರತಿಷ್ಠಿತ ಹುದ್ದೆಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.ಉಲಮಾ ಒಕ್ಕೂಟ ಜಂಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯರಾಗಿ, ಕರ್ನಾಟಕ ಉಲಮಾ ಒಕ್ಕೂಟದ ಕೋಶಾಧಿಕಾರಿಯಾಗಿ, ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾಗಿ, ಕರ್ನಾಟಕ ಸುನ್ನಿ ಕೋ ಆರ್ಡಿನೇಶನ್ ಅಧ್ಯಕ್ಷರಾಗಿ, ಹಲವು ಮೊಹಲ್ಲಾಗಳಿಗೆ ಸಹಾಯಕ ಖಾಝಿಯಾಗಿ, ಸುನ್ನಿ ಸಂಘಟನೆಗಳ ಮಾರ್ಗದರ್ಶಕರಾಗಿ ಸೇವಾನಿರತರಾಗಿದ್ದಾರೆ.

ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸಾಧನೆಯ ಮೇರು ವ್ಯಕ್ತಿತ್ವವಾಗಿರುವ ಅಬ್ಬಾಸ್ ಉಸ್ತಾದ್ ಶಿಷ್ಯವರ್ಗ ಮತ್ತು ಅಭಿಮಾನಿ ವರ್ಗದಿಂದ ಗೌರವಿಸಲ್ಪಡುತ್ತಿರುವುದು ಅವರ ಅನುಪಮ ಸೇವೆಗೆ ನೀಡುವ ಮನ್ನಣೆ ಹಾಗೂ ಕೃತಜ್ಞತೆಯಾಗಿದೆ.

...

share
ವಾರ್ತಾಭಾರತಿ
ವಾರ್ತಾಭಾರತಿ
Next Story
X