ಮೂಡುಬಿದಿರೆ : 20ಲಕ್ಷ ವೆಚ್ಚದ ತಡೆಗೋಡೆಗೆ ಶಂಕುಸ್ಥಾಪನೆ

ಮೂಡುಬಿದಿರೆ : ಕರ್ನಾಟಕ ಸರಕಾರ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಇದರ ವತಿಯಿಂದ ಮೂಡುಬಿದಿರೆ ಸಮೀಪದ ಕಾಯರ್‌ಗುಂಡಿ ಬಳಿಯಲ್ಲಿ 20 ಲಕ್ಷ ವೆಚ್ಚದಲ್ಲಿ ನಿರ್ಮಿಸುವ ತಡೆಗೋಡೆಗೆ ಸಚಿವ ಕೆ. ಅಭಯಚಂದ್ರ ಜೈನ್ ಅವರು ಶನಿವಾರ ಶಂಕುಸ್ಥಾಪನೆಗೈದರು. ನಂತರ ಮಾತನಾಡಿದ ಸಚಿವರು ಕೊಳಚೆ ಪ್ರದೇಶ ಅಭಿವೃದ್ಧಿಯ ಮಂಡಳಿಯಿಂದ ತಡೆಗೋಡೆಯನ್ನು ನಿರ್ಮಿಸಿ ಹರಿಯುವ ಕೊಳಚೆ ನೀರನ್ನು ಸರಿಯಾಗಿ ಚರಂಡಿ ಮುಖಾಂತರ ಹರಿಯಲು ಅವಕಾಶ ಮಾಡಿಕೊಡಲಾಗುವುದು. ಆದಷ್ಟು ಬೇಗನೇ ಕಾಮಗಾರಿ ಆರಂಭಗೊಳ್ಳಲಿದ್ದು ಇದು ಜನರ ಶಾಂತಿ ನೆಮ್ಮದಿಗೆ ಪೂರಕವಾಗಿ ಕೆಲಸವಾಗಬೇಕು. ಈ ದೃಷ್ಟಿಯಿಂದ ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೀಡಲಾಗಿದೆ ಎಂದು ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಉಪಾಧ್ಯಕ್ಷ ಪ್ರೇಮನಾಥ ಮಾರ್ಲ, ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಲಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸದಸ್ಯ ಸುರೇಶ್ ಪ್ರಭು, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಸುಪ್ರಿಯಾ ಡಿ.ಶೆಟ್ಟಿ, ಅಬ್ದುಲ್ ಬಶೀರ್, ಎಪಿಎಂಸಿ ಸದಸ್ಯ ಜೊಸ್ಸಿ ಮಿನೇಜಸ್ ಮತ್ತಿತರರು ಈ ಸಂದರ್ಭದಲ್ಲಿದ್ದರು.





