ಅಬಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಶ್ಲೀಲತೆ ಪ್ರದರ್ಶಿಸುವಂತಿಲ್ಲ: ಸುಪ್ರೀಂಕೋರ್ಟ್

ಹೊಸದಿಲ್ಲಿ: ಮೂಲಭೂತ ಹಕ್ಕುಗಳಲ್ಲೊಂದಾದ ಅಭಿವ್ಯಕ್ತಿ ಸ್ವಾತಂತ್ರ್ಯ ಕೂಡ ನಿಯಂತ್ರಣಕ್ಕೆ ವಿಧೇಯವಾದದ್ದು ಎಂದು ಸೂಚಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲತೆ ಹರಡುವುದು ಮತ್ತು ನೋಡಲು ಒತ್ತಾಯಿಸುವುದನ್ನು ಸಮ್ಮತಿಸಲಾಗದೆಂದು ಸುಪ್ರೀಂಕೋರ್ಟ್ ಹೇಳಿದೆ. ಅಶ್ಲೀಲ ವೆಬ್‌ಸೈಟ್‌ಗಳನ್ನು ಮತ್ತು ಮಕ್ಕಳನ್ನು ಬಳಸುವ ಅಶ್ಲೀಲ ಚಿತ್ರಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಿ ಕೋರ್ಟ್ ಈ ರೀತಿ ಅಭಿಪ್ರಾಯಿಸಿದೆ. ಅಶ್ಲೀಲತೆ ಮತ್ತು ಸಭ್ಯತೆಯನ್ನು ಕೇಂದ್ರ ಸರಕಾರ ಪ್ರತ್ಯೇಕಿಸಬೇಕು. ಮಕ್ಕಳನ್ನು ಅಶ್ಲೀಲ ಚಿತ್ರಗಳಲ್ಲಿ ಬಳಸುವುದನ್ನು ನಿಷೇಧಿಸಬೇಕು.
ಸ್ವಾತಂತ್ರ್ಯದ ಹೆಸರಿನಲ್ಲಿ ಮಕ್ಕಳನ್ನು ಬಲಿಪಶುಗಳಾಗಿಸುವುದು ಮತ್ತು ಪ್ರಯೋಗ ಪಶುಗಳನ್ನಾಗಿಸುವುದು ಸಲ್ಲ. ಸ್ವಾತಂತ್ರ್ಯ ನಿಯಂತ್ರಣಾತೀತವಲ್ಲೆಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ನಿಷೇಧ ಸುಲಭ ವಿಚಾರವಲ್ಲ. ಇಂಟರ್‌ಫೋಲ್‌ನ ನೆರವಿನಿದ ಮಾತ್ರವೇ ಇದು ಸಾಧ್ಯವೆಂದು ಸರಕಾರ ಕೋರ್ಟ್‌ಗೆ ತಿಳಿಸಿದೆ. ಮೊನಾಲಿಸರ ಸಿನೆಮಾ ಕೂಡ ಒಬ್ಬರಿಗೆ ಅಶ್ಲೀಲವಾಗಿ ಕಾಣಿಸಬಹುದಾಗಿದೆ. ಅದು ಅನಪೇಕ್ಷಣೀಯವಲ್ಲ ಎಂದು ಸರಕಾರ ವಾದಿಸಿತು. ಆದರೆ ಈ ವಾದವನ್ನು ಒಪ್ಪದ ಕೋರ್ಟುಅಶ್ಲೀಲತೆ ಎಂಬುದು ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿದೆಯೆಂದು ಮಹಿಳಾವಿರೋಧಿ, ಲೈಂಗಿಕ ವಿಕೃತಿ ಮುಂತಾದುದನ್ನು ಆಧಾರವಾಗಿಟ್ಟು ಭಾರತದ ಕಾನೂನು ಸೆಕ್ಷನ್ 292 ಅದನ್ನು ವಿಶ್ಲೇಷಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಬೆಟ್ಟು ಮಾಡಿತು. ಅಶ್ಲೀಲ ಸೈಟ್ಗಳನ್ನು ನಿಷೇಧಿಸುವ ಮಾರ್ಗಗಳನ್ನು ಹಾಗೂ ಬಹಿರಂಗವಾಗಿ ಅಶ್ಲೀಲತೆಯನ್ನು ಪ್ರದರ್ಶಿಸುವ ಮಾರ್ಗಗಳನೂ ಸ್ಪಷ್ಟಪಡಿಸಿ ಉತ್ತರಿಸಬೇಕೆಂದು ಕೋರ್ಟು ಸರಕಾರಕ್ಕೆ ಆದೇಶಿಸಿದೆ.







