ಉಳ್ಳಾಲ :ಪವಿತ್ರ ಇಸ್ಲಾಂ ಧರ್ಮ ಸಮರವನ್ನು ಸಾರಿದ್ದು ಭಯೋತ್ಪಾದನೆಯ ವಿರುದ್ಧ- ಕೆ.ಎಂ. ಮುಸ್ತಫಾ ನಈಮಿ

ಉಳ್ಳಾಲ, ಫೆ, 27: ಶಾಂತಿ ಪ್ರಿಯತೆಯ ಸಂದೇಶವನ್ನು ಹೊಂದಿರುವ ಪವಿತ್ರ ಇಸ್ಲಾಂ ಧರ್ಮ ಸಮರವನ್ನು ಸಾರಿದ್ದು ಭಯೋತ್ಪಾದನೆಯ ವಿರುದ್ಧವಾಗಿದೆ. ಭಯೋತ್ಪಾನೆಯಂತಹ ಅಮಾನವೀಯ ಕೃತ್ಯಗಳಲ್ಲಿ ಭಾಗಿಯಾಗುವವರು ಯಾರು ಕೂಡಾ ಯಾವುದೇ ಧರ್ಮ ವಿಶ್ವಾಸಿಗಳಲ್ಲ, ಅವರಿಗೆ ಧರ್ಮವಿಲ್ಲ. ಇಂತಹವರನ್ನು ಇಸ್ಲಾಂಮಿನ ಅನುಯಾಯಿಗಳೆಂದು ಬಿಂಬಿಸಿ ಮುಸ್ಲಿಮರನ್ನು ಭಯೋತ್ಪಾಕರೆಂದು ಹೇಳುತ್ತಿರುವುದು ಕೆಲವೊಮಧೂ ಸಮಾಜ ವಿರೋಧಿಗಳ ಕೆಲಸವಾಗಿದೆ ಎಂದು ಕೆ.ಎಂ. ಮುಸ್ತಫಾ ನಈಮಿ ಹಾವೇರಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಭಯೋತ್ಪಾದನೆ ವಿರುದ್ಧ ಜಿಹಾದ್‌ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡ ಜನಾಂದೋಲನ ಪ್ರಯುಕ್ತ ಇತ್ತೀಚೆಗೆ ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ವತಿಯಿಂದ ಕಲ್ಲಾಪುವಿನಿಂದ ತೊಕ್ಕೋಟು ಜಂಕ್ಷನ್‌ವರೆಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಸಂದೇಶ ಭಾಷಣ ಮಾಡಿದರು.
ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಎಸ್ಸೆಸ್ಸೆಫ್ ಧ್ವಜ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಬಶೀರ್ ಅಹ್ಸನಿ ತೋಡಾರ್, ಆರ್.ಕೆ. ಮದನಿ ಅಮ್ಮೆಂಬಳ, ಹಕೀಂ ಮದನಿ ಸೇವಂತಿಗುಡ್ಡೆ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್, ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ, ಕಾರ್ಯದರ್ಶಿ ಬಾತಿಶ್ ಮಂಚಿಲ, ಕಾರ್ಯಕಾರಿ ಸದಸ್ಯರಾದ ಶಮೀರ್ ಸಖಾಫಿ, ಅನ್ಸಾರ್ ಅಳೆಕಲ ಉಪಸ್ಥಿತರಿದ್ದರು.
ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಬಿ.ಎಸ್. ಇಸ್ಮಾಈಲ್ ಕುತ್ತಾರ್ ಸ್ವಾಗತಿಸಿ ವಂದಿಸಿದರು.







