ಮುಲ್ಕಿ: ಬಿಲ್ಲವ ಟ್ರೋಫಿ -2016 ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಮುಲ್ಕಿ : ಬಿಲ್ಲವ ಸಮಾಜ ಜಾತಿ ಧರ್ಮಗಳ ಸಂಕೋಲೆಯಿಂದ ಹೊರಬಂದು ಎಲ್ಲಾ ಸ್ಥರಗಳಲ್ಲಿ ಚಿಂತನೆ ನಡೆಸಿ ಒಗ್ಗಟನ್ನು ಪ್ರದರ್ಶಿಸಿದರೆ ಸಮಾಜ ಇನ್ನಷ್ಟು ಉನ್ನತಿ ಹೊಂದಲು ಸಾಧ್ಯ ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಹಾಗೂ ಬಿಲ್ಲವ ಕ್ರೀಡಾ ಸಮಿತಿ ಗೌರವಾಧ್ಯಕ್ಷ ಜಯ ಸಿ.ಸುವರ್ಣ ಹೇಳಿದರು.
ಮುಲ್ಕಿ ವಿಜಯ ಕಾಲೇಜಿನ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಬಿಲ್ಲವ ಟ್ರೋಫಿ -2016 ಕ್ರಿಕೇಟ್ ಪಂದ್ಯಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಮಂಗಳೂರು ದೀಪಾಕಂಫರ್ಟ್ಸ್‌ನ ರಮೇಶ್‌ಕುಮಾರ್, ನಾರಾಯಣ ಗುರುಗಳ ಸಂದೇಶದಂತೆ ನಾವೆಲ್ಲರೂ ಒಗ್ಗೂಡಿ ಬಾಳಬೇಕು. ಬಿಲ್ಲವ ಸಮಾಜವು ಶೈಕ್ಷಣಿಕವಾಗಿ ಇನ್ನಷ್ಟು ಮುಂದುವರಿಯ ಬೇಕಾಗಿದ್ದು, ಸಂಘಟನೆಗಳು ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಿಸಿದರು.
ವಾಸುದೇವ ಆರ್, ಕೋಟ್ಯಾನ್ ಕ್ರೀಡಾ ಧ್ವಜಾರೋಹಣಗೈದರು.ಅಖಿಲ ಭಾರತ ಬಿಲ್ಲವರ ಯೂನಿಯನ್ ಅ ್ಯಕ್ಷ ನವೀನ ಚಂದ್ರ ಡಿ.ಸುವರ್ಣ, ಮಂಗಳೂರು ಜೆ.ಬಿ.ಕನ್ಸ್‌ಟ್ರಕ್ಷನ್‌ನ ಗಣೇಶ್ ಎ. ಬಂಗೇರ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಸಾಯಿರಾಮ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಅಶೋಕ್ ಎಂ.ಸುವರ್ಣ, ಗುಜರಾತ್ ಬಿಲ್ಲವ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ಸಿ.ಪೂಜಾರಿ, ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ.ಪೂಜಾರಿ, ಎಲ್.ವಿ.ಅಮೀನ್, ವಿಜಯ ಕಾಲೇಜು ವಿಶ್ವಸ್ಥ ಮಂಡಳಿ ಅಧ್ಯಕ್ಷೆ ಶಮಿನಾ ಜಿ.ಆಳ್ವ, ಬಿಪಿನ್‌ಪ್ರಸಾದ್, ವಿಜಯಕುಮಾರ್ ಕುಬೆವೂರು ಮುಖ್ಯ ಅತಿಥಿಗಳಾಗಿದ್ದರು.
ಬಿಲ್ಲವ ಕ್ರೀಡಾ ಸಮಿತಿಯ ಅಧ್ಯಕ್ಷ ಹಾಗೂ ಚಲನಚಿತ್ರ ನಟ-ನಿರ್ದೇಶಕ ರಾಜಶೇಖರ್ ಆರ್.ಕೋಟ್ಯಾನ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಚಂಧ್ರಶೇಖರ್ ಸುವರ್ಣ ಪ್ರಾಸ್ತಾವಿಸದರು. ಸಹಸಂಚಾಲಕ ನರೇಂದ್ರ ಕರೆಕಾಡು ಕಾರ್ಯಕ್ರಮ ನಿರ್ವಹಿಸಿ, ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿ್ಯಾನಂದ ಡಿ.ಕೋಟ್ಯಾನ್ ವಂದಿಸಿದರು.
ಪಂದ್ಯಾಟದಲ್ಲಿ ದುಬೈ, ಮಸ್ಕತ್ ,ಕುವೈಟ್, ದೆಹಲಿ, ಗುಜರಾತ್, ಮುಂಬೈ, ಬೆಂಗಳೂರು ಸಹಿತ 16 ತಂಡಗಳು ಸ್ಪರ್ಧೆಯಲ್ಲಿದ್ದು ಭಾನುವಾರ ಸಮಾರೋಪ ಸಮಾರಂಭ ನಡೆಯಲಿದೆ.







