ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ - ಒಂದು ವಿಶಿಷ್ಟ ವಿವಿ ಕುರಿತ ವೀಡಿಯೋ
1920 ರಲ್ಲಿ ಅಲಿಗಢದಲ್ಲಿ ಸ್ಥಾಪನೆಯಾಗಿ ಬಳಿಕ ದೆಹಲಿಗೆ ಸ್ಥಳಾಂತರವಾದ ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ ಕೇಂದ್ರೀಯ ವಿಶ್ವ ವಿದ್ಯಾಲಯ ಇಂದು ದೇಶದ ಪ್ರತಿಷ್ಠಿತ ವಿವಿಗಳಲ್ಲಿ ಒಂದು. ಸುಮಾರು ಹದಿನಾರು ಸಾವಿರ ವಿದ್ಯಾರ್ಥಿಗಳು ಇಲ್ಲಿ ನರ್ಸರಿಯಿಂದ ಪಿ ಎಚ್ ಡಿ ವರೆಗಿನ ಹಂತದ ವಿವಿಧ ವಿಷಯಗಳಲ್ಲಿ ವಿದ್ಯೆ ಸಂಪಾದಿಸುತ್ತಿದ್ದಾರೆ.ವಿವಿಧ ಕ್ಷೇತ್ರಗಳಲ್ಲಿ ಇಂದು ದೇಶಕ್ಕೆ ಅನನ್ಯ ಕೊಡುಗೆ ಸಲ್ಲಿಸುತ್ತಿರುವ ಪ್ರತಿಭಾವಂತರನ್ನು ಈ ವಿವಿ ನೀಡಿದೆ. ಈ ವಿಶಿಷ್ಟ ವಿದ್ಯಾ ಸಂಸ್ಥೆಯ ಪರಿಚಯ ನೀಡುವ ಒಂದು ಪ್ರಮೋಶನಲ್ ವೀಡಿಯೋವನ್ನು ಇದೀಗ ವಿವಿ ಬಿಡುಗಡೆ ಮಾಡಿದೆ. ಜಾಮಿಯ ವಿವಿಯನ್ನು ಅರಿಯಲು ಅತ್ಯಂತ ಸಹಕಾರಿ ಈ ಪುಟ್ಟ ವೀಡಿಯೋ .
Next Story





