ತೊಕ್ಕೊಟ್ಟು ವ್ಯಕ್ತಿ ನಾಪತ್ತೆ

ಉಳ್ಳಾಲ: ತೊಕ್ಕೊಟ್ಟಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾದ ಕಲ್ಲಡ್ಕ ಗೋಲ್ತಮಜಲು ಕುಂಟಿಪಾಪು ನಿವಾಸಿ ರವೀಶ ಪಿ.(39), ನಾಪತ್ತೆಯಾದ ಕುರಿತು ಉಳ್ಳಾಲ ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ತೊಕ್ಕೊಟ್ಟು ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ ರವೀಶ್‌ರನ್ನು ಜನವರಿ 18ರಂದು ದೂರವಾಣಿ ಮೂಲಕ ಮನೆಯವರು ಸಂಪರ್ಕಿಸಿದ್ದರು. ಫೆಬ್ರವರಿ 10ರಂದು ರವೀಶ್ ಅವರ ಸಹೋದರ ರವೀಶ್ ಕೆಲಸ ಮಾಡುತ್ತಿದ್ದ ತೊಕ್ಕೊಟ್ಟಿನ ಹೋಟೆಲ್‌ಗೆ ಬಂದು ವಿಚಾರಿಸಿದಾಗ ಹೋಟೆಲ್‌ನಲ್ಲಿ ಕೆಲಸ ಬಿಟ್ಟು ಸಮಯವಾಗಿದೆ ಎಂದು ಮಾಹಿತಿ ನೀಡಿದ್ದು, ರವೀಶ್ ಮನೆಯವರು ಹುಡುಕಾಡಿದರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ದೂರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉಳ್ಳಾಲ ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





