ಪಾಕ್‌ಗೆ ಎಫ್-16 ಮಾರಾಟ ಖಚಿತ: ಅಮೆರಿಕ

ವಾಶಿಂಗ್ಟನ್, ಫೆ. 27: ಭಾರತ ಮತ್ತು ಕೆಲವು ಅಮೆರಿಕದ ಸಂಸದರ ವಿರೋಧದ ಹೊರತಾಗಿಯೂ, ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ತನ್ನ ನಿರ್ಧಾರವನ್ನು ಅಮೆರಿಕದ ಒಬಾಮ ಆಡಳಿತ ಶುಕ್ರವಾರ ಸಮರ್ಥಿಸಿಕೊಂಡಿದೆ.
‘‘ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಮತ್ತು ಬಂಡುಕೋರ ನಿಗ್ರಹ ಕಾರ್ಯಾಚರಣೆಗಳಲ್ಲಿ ನೆರವಾಗುವುದಕ್ಕಾಗಿ ಆ ದೇಶಕ್ಕೆ ಎಂಟು ಎಫ್-16 ವಿಮಾನಗಳನ್ನು ಮಾರಾಟ ಮಾಡುವ ಪ್ರಸ್ತಾಪವನ್ನು ನಾವು ಬೆಂಬಲಿಸುತ್ತೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಹೆಲೇನಾ ಡಬ್ಲು. ವೈಟ್ ತಿಳಿಸಿದರು.
Next Story





