ವೇಮುಲಾ ಪ್ರಕರಣ ನಿರ್ವಹಣೆಗೆ ಶಿವಸೇನೆ ಅಸಮಾಧಾನ
ಮುಂಬೈ, ಫೆ.27: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ಕೇಂದ್ರ ಸರಕಾರ ನಿರ್ವಹಿಸಿದ ರೀತಿಯ ಬಗ್ಗೆ ಶಿವಸೇನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮತಿ ಇರಾನಿ ಹೇಳಿಕೆಗಳು ಗೊಂದಲಮಯವಾಗಿವೆ ಎಂದು ಶನಿವಾರ ಪ್ರಕಟಿಸಿದೆ.
ಇರಾನಿ ನೀಡುತ್ತಿರುವ ಹೇಳಿಕೆಗಳು ಗೊಂದಲಕಾರಿ. ಮೊದಲು ನೀವು ಏನೋ ಹೇಳಿ ಅದನ್ನು ವಾಪಸು ಪಡೆದಿರಿ. ಇದು ಮತ್ತೆ ನಡೆಯಬಾರದು. ಈ ಪ್ರಕರಣವನ್ನು ನಿರ್ವಹಿಸಿದ ರೀತಿಯಲ್ಲಿ ಹಲವು ಲೋಪಗಳಿವೆ. ಈ ಕಾರಣದಿಂದ ಇದು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿವೆ ಎಂದು ಶಿವಸೇನೆ ಮುಖಂಡರಾದ ಮನಿಷಾ ಕಯಂಡೆ ಹೇಳಿದ್ದಾರೆ.
ಯಾವುದೇ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸದೇ ಹೇಳಿಕೆ ನೀಡುವುದು ತಪ್ಪು ಸಂದೇಶ ರವಾನಿಸುತ್ತದೆ ಎಂದರು.
Next Story





