ಮಹಿಳಾ ಪೇದೆಗೆ ಹಲ್ಲೆಶಿವಸೇನಾ ನಾಯಕನ ಡ್ರೈವಿಂಗ್ ಲೈಸನ್ಸ್ ಶಾಶ್ವತ ರದ್ದುಗೊಳಿಸಲು ಶಿಫಾರಸು
ಮುಂಬೈ, ಫೆ.27: ಕರ್ತವ್ಯನಿರತ ಮಹಿಳಾ ಟ್ರಾಫಿಕ್ ಪೇದೆಯೊಬ್ಬರಿಗೆ ಹಲ್ಲೆ ನಡೆಸಿದ್ದ ಶಿವ ಸೇನಾ ಶಾಖಾಪ್ರಮುಖ್ ಶಶಿಕಾಂತ್ ಕಲ್ಗುಡೆಯವರ ಚಾಲನಾ ಪರವಾನಿಗೆಯನ್ನು ಶಾಶ್ವತವಾಗಿ ರದ್ದುಗೊಳಿಸುವಂತೆ ಟ್ರಾಫಿಕ್ ಪೊಲೀಸರು ಶಿಫಾರಸು ಮಾಡಿದ್ದಾರೆ.
ಈ ಬಗ್ಗೆ ಟ್ರಾಫಿಕ್ ಡಿಸಿಪಿ ರಶ್ಮಿ ಕರಂಡಿಕರ್ ಥಾಣೆ ಆರ್‌ಟಿಒಗೆ ಪತ್ರ ಬರೆದಿದ್ದಾರೆ.
‘‘ಮಹಿಳೆಯೊಬ್ಬಳ ಮೇಲೆ ಹಲ್ಲೆಗೈಯ್ಯುವುದು ಒಂದು ಗಂಭೀರ ಅಪರಾಧ. ಆದುದರಿಂದ ನಾನು ಆರ್‌ಟಿಒಗೆ ಪತ್ರ ಬರೆದು ಕಲ್ಗುಡೆಯವರ ಚಾಲನಾ ಪರವಾನಿಗೆಯನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಹೇಳಿದ್ದೇನೆ. ಅವರು ಹಿಂದೆ ಕೂಡ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈಗ ಅವರು ಜೈಲಿನಲ್ಲಿದ್ದಾರೆ’’ ಎಂದು ರಶ್ಮಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
Next Story





