ಮುಝುಫ್ಫರ್‌ನಗರ ಹಿಂಸಾಚಾರ: ಎಸ್ಪಿ ನಾಯಕ ನ್ಯಾಯಾಲಯಕ್ಕೆ ಶರಣು
ಮುಝಫ್ಫರ್‌ನಗರ, ಫೆ.27: ಮುಝಫ್ಫರ್ ನಗರ ದಂಗೆ ಪ್ರಕರಣದ ಆರೋಪಿ, ಸಮಾಜವಾದಿ ಪಕ್ಷದ ಸ್ಥಳೀಯ ನಾಯಕನೊಬ್ಬ ಶಾಮಿಲಿಯ ನ್ಯಾಯಾಲಯವೊಂದರ ಮುಂದೆ ನಿನ್ನೆ ಶರಣಾಗಿದ್ದಾನೆ.
ಕೈರಾನಾದ ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿಯ ನ್ಯಾಯಾಲಯದ ಮುಂದೆ ಶರಣಾದ ಎಸ್ಪಿಯ ಯುವ ಘಟಕದ ಜಿಲ್ಲಾಧ್ಯಕ್ಷ ನಫೀಸ್ ರಾಣಾ ಜಾಮೀನು ಮನವಿಯನ್ನು ತಿರಸ್ಕರಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆಯೆಂದು ಪ್ರಾಸಿಕ್ಯೂಶನ್ ತಿಳಿಸಿದೆ.
2013ರ ಮುಝಫ್ಫರ್‌ನಗರ ದಂಗೆಯ ವೇಳೆ ಕಲ್ಲು ತೂರಾಟ ಹಾಗೂ ಆಸ್ತಿ ಹಾನಿ ನಡೆಸಿದ್ದ ಆರೋಪದಲ್ಲಿ ರಾಣಾನ ಸಹಿತ 25 ಮಂದಿಯ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
ಹಿಂಸಾಚಾರದ ತನಿಖೆ ನಡೆಸಿದ್ದ ವಿಶೇಷ ತನಿಖೆ ತಂಡವೊಂದು ಈ ಹಿಂದೆ ಆತನಿಗೆ ಕ್ಲೀನ್ ಚಿಟ್ ನೀಡಿತ್ತು.
ಸಿಟ್ ದಾಖಲಿಸಿದ್ದ ಮುಚ್ಚಗಡೆ ವರದಿಯನ್ನು ತಿರಸ್ಕರಿಸಿದ ನ್ಯಾಯಾಲಯ ರಾಣಾನಿಗೆ ಜಾಮೀನು ರಹಿತ ವಾರಂಟನ್ನು ಜಾರಿ ಮಾಡಿತ್ತು.
Next Story





