ಸುಬ್ರಮಣಿಯನ್ ಸ್ವಾಮಿಯ ಕಾರಿನತ್ತ ಕಾಂಗ್ರೆಸಿಗರಿಂದ ಮೊಟ್ಟೆ-ಟೊಮೆಟೊ ಎಸೆತ
ಕಾನ್ಪುರ, ಫೆ.27: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರ ವಿರುದ್ಧ ಶನಿವಾರ ಇಲ್ಲಿ ಪ್ರತಿಭಟನೆಯೊಂದನ್ನು ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಅವರ ಕಾರಿನ ಮೇಲೆ ಕೊಳೆತ ಮೊಟ್ಟೆ ಹಾಗೂ ಟೊಮೆಟೊ ಎಸೆದಿದ್ದಾರೆ.
ಬಿಜೆಪಿ ನಾಯಕನತ್ತ ಶಾಯಿ ಎರಚಿದ ಪ್ರತಿಭಟನಾಕಾರರು ಕರಿ ಬಾವುಟಗಳನ್ನು ಪ್ರದರ್ಶಿಸಿದ್ದಾರೆ.
ನವಾಬ್‌ಗಂಜ್‌ನ ವಿಎಸ್‌ಎಸ್‌ಡಿ ಕಾಲೇಜ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸ್ವಾಮಿ ಕಾನ್ಪುರಕ್ಕೆ ಬಂದಿದ್ದರು.
ನಗರ ಕಾಂಗ್ರೆಸ್ ಅಧ್ಯಕ್ಷ ಹರಪ್ರಕಾಶ್ ಅಗ್ನಿಹೋತ್ರಿ, ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ಮನ್ನಾ, ಕಾರ್ಪೊರೇಟರ್ ಆಮೋದ್ ತ್ರಿಪಾಠಿ ಸಹಿತ ಅನೇಕ ಕಾಂಗ್ರೆಸ್ ನಾಯಕರು ಮಾಲ್ ರೋಡ್‌ನ ನರೋನ್ಹಾ ಕ್ರಾಸಿಂಗ್‌ನಲ್ಲಿ ನಡೆದ ಪೊಲೀಸ್ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ನಾರ್ತ್ ಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಠಿ ಚಾರ್ಜ್‌ನ ಬಳಿಕ ಕಾಂಗ್ರೆಸಿಗರು ರಸ್ತೆ ತಡೆ ನಡೆಸಿದರು.
Next Story





