ಪ್ರಾಮಾಣಿಕತೆ ಮೆರೆದ ಆಟೊ ಚಾಲಕ
ಮಂಗಳೂರು, ಫೆ. 27: ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಪಾಸ್‌ಪೋರ್ಟ್ ಕಚೇರಿ ಎದುರುಗಡೆ ದೊರೆತ ಪಾಸ್‌ಪೋರ್ಟ್, ಆಧಾರ್‌ಕಾರ್ಡ್ ಮತ್ತು ಇತರ ವಸ್ತುಗಳನ್ನು ಹೊಂದಿರುವ ಲಕೋಟೆಯನ್ನು ಅದರ ವಾರೀಸುದಾರರಿಗೆ ಮರಳಿಸುವ ಮೂಲಕ ನಗರದ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಬೋಳಿಯಾರ್‌ನ ಧರ್ಮನಗರದ ನಿವಾಸಿ ನಾರಾಯಣ ಸಫಲ್ಯ ಎಂಬವರ ಪುತ್ರ ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ತಿಲಕ್ ಬಂಗೇರ (35) ಎಂಬವರೇ ಅಗತ್ಯ ವಸ್ತುಗಳುಳ್ಳ ಲಕೋಟೆಯನ್ನು ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆಯನ್ನು ಮೆರೆದವರಾಗಿದ್ದಾರೆ.
ಪಾಸ್‌ಪೋರ್ಟ್ ಕಚೇರಿಗೆ ಬಂದಿದ್ದ ಕುಟುಂಬವು ಪಾಸ್‌ಪೋರ್ಟ್‌ನ್ನು ಕಳೆದುಕೊಂಡು ಆಸುಪಾಸು ಎಲ್ಲಾ ಕಡೆ ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಅವರ ಕುಟುಂಬದ ಸದಸ್ಯರು ರೊಸಾರಿಯೊ ಬಳಿ ಇದ್ದು, ಅವರ ಸೂಚನೆಯಂತೆ ಮರಳಿಸಿದ್ದೇನೆ ಎನ್ನುತ್ತಾರೆ ತಿಲಕ್.
Next Story





