ವಿಶ್ವಕಪ್: ಭಾರತ-ಪಾಕ್ ಪಂದ್ಯದ ಟಿಕೆಟ್‌ಗೆ ಭಾರೀ ಬೇಡಿಕೆ
ಧರ್ಮಶಾಲಾ, ಫೆ.27: ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಟ್ವೆಂಟಿ-20 ವಿಶ್ವಕಪ್ ಪಂದ್ಯದ ಆನ್‌ಲೈನ್ ಟಿಕೆಟ್ ಮಾರಾಟಕ್ಕೆ ಭಾರೀ ಬೇಡಿಕೆ ವ್ಯಕ್ತವಾಗಿದೆ.
ಪರ್ವತಗಳ ನಗರಿ ಧರ್ಮಶಾಲಾದಲ್ಲಿ ಮಾ.19 ರಂದು ನಡೆಯಲಿರುವ ಇಂಡೋ-ಪಾಕ್ ನಡುವಿನ ಪಂದ್ಯದ ಟಿಕೆಟ್‌ಗಾಗಿ ಕೇವಲ ಎರಡೇ ದಿನಗಳಲ್ಲಿ 138101ಕ್ಕೂ ಅಧಿಕ ನೋಂದಣಿಯಾಗಿದೆ ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಶನಿವಾರ ಹೇಳಿದೆ.
ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೆ ಸಮನಾಗಿ ಟಿಕೆಟ್ ಹಂಚುವ ಸಲುವಾಗಿ ಟಿಕೆಟ್‌ನ್ನು ಮೊದಲೇ ನೊಂದಾಯಿಸಲು ಸೂಚಿಸಲಾಗಿದೆ. ಪಂದ್ಯವನ್ನು ಗರಿಷ್ಠ ಸಂಖ್ಯೆ ಪ್ರೇಕ್ಷಕರು ವೀಕ್ಷಿಸವಂತಾಗಲು, ಓರ್ವ ವ್ಯಕ್ತಿ ಒಂದಕ್ಕಿಂತ ಹೆಚ್ಚು ಟಿಕೆಟ್ ಖರೀದಿಸದಂತೆ ಮಾಡಲು ಟಿಕೆಟ್ ನೊಂದಣಿ ಪ್ರಕ್ರಿಯೆಯನ್ನು ಬಿಸಿಸಿಐ ಜಾರಿಗೆ ತಂದಿದೆ.
ಈ ಪದ್ಧತಿಯು ಸೆಮಿಫೈನಲ್ ಹಾಗೂ ಫೈನಲ್ ಸಹಿತ ಭಾರತ ಆಡುವ ಎಲ್ಲ ಪಂದ್ಯಗಳಿಗೂ ಅನ್ವಯವಾಗಲಿದೆ. ಟಿಕೆಟ್ ನೋಂದಣಿ ಪ್ರಕ್ರಿಯೆ ಫೆ.25 ರಿಂದ ಆರಂಭವಾಗಿದ್ದು, ಮಾ.2ರ ತನಕ ನಡೆಯಲಿದೆ
Next Story





