ವಿಶ್ವಕಪ್: ಸ್ಟೀವನ್ ಫಿನ್ ಅಲಭ್ಯ

ಲಂಡನ್, ಫೆ.27: ಗಾಯದ ಸಮಸ್ಯೆ ಎದುರಿಸುತ್ತಿರುವ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟೀವನ್ ಫಿನ್ ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರ ನಡೆದಿದ್ದಾರೆ. ಫಿನ್ ಬದಲಿ ಆಟಗಾರನಾಗಿ ಲಿಯಾಮ್ ಪ್ಲುಂಕೆಟ್ ಆಯ್ಕೆಯಾಗಿದ್ದಾರೆ.
ಫಿನ್‌ಗೆ ಗಾಯದ ಸಮಸ್ಯೆ ಬೆಂಬಿಡದೇ ಕಾಡುತ್ತಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಯುಇಎ ಪ್ರವಾಸದಿಂದ ಹೊರಗುಳಿದಿದ್ದ ಫಿನ್ ಇತ್ತೀಚೆಗೆ ದಕ್ಷಿಣ ಆಫ್ರಿಕದ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೂರನೆ ಟೆಸ್ಟ್‌ನಿಂದ ಹೊರಗುಳಿದಿದ್ದರು.
‘‘ನಾನು ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೊಮ್ಮೆ ಗಾಯದ ಸಮಸ್ಯೆಗೆ ತುತ್ತಾಗಿರುವುದಕ್ಕೆ ತುಂಬಾ ಬೇಸರವಾಗುತ್ತಿದೆ’’ ಎಂದು ಫಿನ್ ಟ್ವೀಟ್ ಮಾಡಿದ್ದಾರೆ.
ವಿಶ್ವಕಪ್‌ನಲ್ಲಿ ಫಿನ್ ಅನುಪಸ್ಥಿತಿಯಲ್ಲಿ ಪ್ಲುಂಕೆಟ್ ಅವರು ಡೇವಿಡ್ ವಿಲ್ಲಿ, ರೀಸ್ ಟಾಪ್ಲೆ , ಕ್ರಿಸ್ ಜೋರ್ಡನ್ ಹಾಗೂ ಬೆನ್ ಸ್ಟೋಕ್ಸ್ ಅವರೊಂದಿಗೆ ಇಂಗ್ಲೆಂಡ್‌ನ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ.
Next Story





