ದೋಹ : ಕತರ್ ಫೋರಂ ನಿಂದ ರಕ್ತ ದಾನ ಶಿಬಿರ

ದೋಹ : ಕತರಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಪಂದನಶೀಲ ಸಂಘಟನೆಯಾದ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೆಶನ್ ವತಿಯಿಂದ ರಕ್ತ ದಾನ ಶಿಬಿರ ಏರ್ಪಡಿಸಲಾಗಿದೆ.
ಮಾರ್ಚ್ 4 ರಂದು ಬೆಳಗ್ಗೆ 8:30 ರಿಂದ ಪೂರ್ವಹ್ನ 11:30 ರವರೆಗೆ, ಹಮ್ದಾದ್ ಮೆಡಿಕಲ್ ಕಾಪೋರೇಷನ್ ದೋಹ ,ಇದರ ರಕ್ತ ದಾನ ಘಟಕದಲ್ಲಿ ರಕ್ತ ದಾನ ಶಿಬಿರ ನಡೆಯಲಿದೆ ಎಂದು ಸಂಘಟನಾ ವಕ್ತಾರರು ತಿಳಿಸಿದ್ದಾರೆ.
ರಕ್ತದಾನ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು ಇಂತಹ ಮಾನವೀಯ ಕಾರ್ಯಗಳಿಗೆ ಕತರಿನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಸಮುದಾಯದ ಸದಸ್ಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ಕೆಎಮ್‌ಸಿಎ ಅಧ್ಯಕ್ಷ ನಿಯಾಝ್ ಅಹ್ಮದ್ ಹಾಗೂ ವಿಶೇಷ ಅಗತ್ಯ ಸಮಿತಿಯ ಮುಖ್ಯಸ್ಥ ಎಮ್.ಇಕ್ಬಾಲ್ ಮನ್ನಾ ಮನವಿ ಮಾಡಿದ್ದಾರೆ.
ಶ್ರೇಷ್ಠ ರಕ್ತ ದಾನ ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮನ್ನಾ 55253904 ಮತ್ತು ಮನೀರ್ ಶೇಖ್ 55293017 ಇವರನ್ನು ಸಂರ್ಪಕಿಸಬಹುದು ಎಂದು ಪ್ರಕಟನೆಯಲ್ಲಿ ಕೋರಲಾಗಿದೆ.
Next Story





