ಜೆಎನ್‌ಯು ಹೆಸರನ್ನು ಸುಭಾಶ್ಚಂದ್ರ ಬೋಸ್ ಯುನಿವರ್ಸಿಟಿ ಎಂದು ಬದಲಾಯಿಸಿ: ಸುಬ್ರಮಣಿಯನ್ ಸ್ವಾಮಿ

ಕಾನ್ಪುರ, ಫೆ.28: ದಿಲ್ಲಿಯ ಜವಾಹರಲಾಲ್ ನೆಹರೂ ಯುನಿವರ್ಸಿಟಿಯ ಹೆಸರನ್ನು ಸುಭಾಶ್ಚಂದ್ರ ಬೋಸ್ ಯುನಿವರ್ಸಿಟಿ ಎಂದು ಬದಾಲಯಿಸಬೇಕೆಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ದೇಶದ ವಿರೋಧಿಗಳ ಅಡ್ಡೆಯಾಗಿ ಜೆಎನ್‌ಯು ಬದಲಾಗುತ್ತಿದೆ ಎಂದೂ ಈ ಸಂದರ್ಭದಲ್ಲಿ ಅವರು ಆರೋಪಿಸಿದ್ದಾರೆ.
ಸ್ವಾಮಿ ಜೆಎನ್‌ಯುವನ್ನು ನಾಲ್ಕು ತಿಂಗಳು ಮುಚ್ಚಬೇಕು ನಂತರ ತಪಾಸಣೆಯ ಅಭಿಯಾನ ನಡೆಸಬೇಕಾಗಿದೆ ಎಂದೂ ಹೇಳಿದ್ದಾರೆ. ದೇಶದ ಬೇರೆ ಬೇರೆ ಭಾಗದಲ್ಲಿ ಉತ್ತರ ಪ್ರದೇಶ ಸಹಿತ ಶೇ. 5ರಷ್ಟು ಮಂದಿ ದೇಶದ್ರೋಹಿಗಳಾಗಿದ್ದಾರೆ. ಅವರಲ್ಲಿ ಎಲ್ಲರಿಗಿಂತಲೂ ಹೆಚ್ಚು ಜೆಎನ್‌ಯುನಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ರಾಮ ಜನ್ಮ ಭೂಮಿ ವಿಚಾರವನ್ನು ಪ್ರಸ್ತಾಪಿಸಿದ ಅವರು ಮಂದಿರದ ಕುರಿತ ನಿರ್ಧಾರ ಒಂದೆರೆಡು ತಿಂಗಳಲ್ಲಿ ಪ್ರಕಟವಾಗಲಿದೆ ಎಂದು ವಿವರಿಸಿದ್ದಾರೆ.
ಕಾನ್ಪುರದ ವಿ. ಎಸ್. ಎಸ್. ಡಿ. ಕಾಲೇಜ್‌ನಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆ (ಕಾಶ್ಮೀರದ ಸಮಸ್ಯೆ ಸಂದರ್ಭದಲ್ಲಿ) ವಿಷಯದಲ್ಲಿ ಒಂದು ಸೆಮಿನಾರ್‌ನ್ನುದ್ದೇಶಿಸಿ ಸ್ವಾಮಿ ಮಾತಾಡುತ್ತಿದ್ದರು.
ಜವಾಹರಲಾಲ್ ನೆಹರೂ ಅಷ್ಟೇನು ಕಲಿತವರಲ್ಲ. ಅವರ ಹೆಸರಲ್ಲಿ ಒಂದು ಯುನಿವರ್ಸಿಟಿ ಇರುವಷ್ಟು ಅವರು ಜ್ಞಾನಿಯಲ್ಲ ಎಂದು ಸ್ವಾಮಿ ಹೇಳಿದ್ದಾರೆ. ಕಾಶ್ಮೀರದ ಖಲಂ 370 ನೆಹರೂರಿಂದಾಗಿದೆ. ಅದನ್ನು ಅಂಬೇಡ್ಕರ್ ವಿರೋಧಿಸಿದ್ದರು. ಕಾಶ್ಮೀರದ ವಶದಲ್ಲಿರುವ ಭಾಗವೂ ಭಾರತಕ್ಕೆ ಸಿಗಬೇಕಾಗಿದೆ ಎಂದು ಸ್ವಾಮಿ ಆಗ್ರಹಿಸಿದ್ದಾರೆ.







