ಪಟಾಣ್‌ಕೋಟ್ ದಾಳಿಗೆ ನೆರವು ನೀಡಿದ ಶಂಕೆ ; ಪಾಕ್‌ನಲ್ಲಿ ಮೂವರ ಬಂಧನ

ಪಠಾಣ್‌ಕೋಟ್, ಫೆ28: ಪಠಾಣ್‌ಕೋಟ್ ವಾಯುನೆಲೆ ದಾಳಿ ನಡೆಸಿದ ಉಗ್ರರಿಗೆ ನೆರವು ನೀಡಿದ ಆರೋಪದಲ್ಲಿ ಪಾಕಿಸ್ತಾನದಲ್ಲಿ ಮೂವರನ್ನು ಬಂಧಿಸಲಾಗಿದೆ
ಖಾಲಿದ್ ಮುಹಮ್ಮದ್, ಇರ್ಷಾದುಲ್ ಹಕ್ ಮತ್ತು ಮುಹಮ್ಮದ್ ಶುಐಬ್ ಅವರನ್ನು ಬಂಧಿಸಲಾಗಿದ್ದು, ಅವರನ್ನು ಮತ್ತೆ ಹೆಚ್ಚಿನ ತನಿಖೆಗಾಗಿ ಭಯೋತ್ಪಾದಕ ನಿಗ್ರಹ ದಳ(ಸಿಟಿಡಿ) ವಶಕ್ಕೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗುಜ್ರನಾವಾಲಾ ನಗರದಿಂದ ಹತ್ತು ಕಿ.ಮೀ ದೂರದ ಚಾಂದ್ ಡಿ ಕಿಲಾ ಬೈಪಾಸ್ ಬಳಿಯ ಬಾಡಿಗೆ ಮನೆಯೊಂದರ ಮೇಲೆ ಸಿಟಿಡಿ ದಾಳಿ ನಡೆಸಿ ಮೂವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಬಂಧಿತ ಮೂವರಿಗೆ ಶನಿವಾರ ಭಯೋತ್ಪಾದಕ ನಿಗ್ರಹ ಕೋರ್ಟ್‌ನ ಜಡ್ಜ್ ಬುಶ್ರಾ ಝಮಾನ್ ಅವರು ಸಿಟಿಡಿ ಕಸ್ಟಡಿ ವಿಧಿಸಿದರು.
ಇವರನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಾಕ್ ನ ದಿನ ಪತ್ರಿಕೆ ಡಾನ್ ವರದಿ ಮಾಡಿದೆ.
Next Story





